ಮಂಗಳೂರಿನಿಂದ ಕೇರಳಕ್ಕೆ ಮೊದಲ ಬಾರಿಗೆ ಇಲೆಕ್ಟ್ರಿಕ್ ಗೂಡ್ಸ್ ರೈಲು !

11-04-21 11:12 pm       Mangaluru correspondent   ಕರಾವಳಿ

ಮಂಗಳೂರಿನ ಪಣಂಬೂರು ಗೂಡ್ಸ್ ಯಾರ್ಡ್‌ನಿಂದ ಮೊದಲ ಬಾರಿಗೆ ಸರಕು ಸಾಗಾಟದ ಇಲೆಕ್ಟ್ರಿಕ್ ಗೂಡ್ಸ್ ರೈಲು ಕೇರಳಕ್ಕೆ ಹೊರಟಿದೆ. 

ಮಂಗಳೂರು, ಎ.11: ಮಂಗಳೂರಿನ ಪಣಂಬೂರು ಗೂಡ್ಸ್ ಯಾರ್ಡ್‌ನಿಂದ ಮೊದಲ ಬಾರಿಗೆ ಸರಕು ಸಾಗಾಟದ ಇಲೆಕ್ಟ್ರಿಕ್ ಗೂಡ್ಸ್ ರೈಲು ಕೇರಳಕ್ಕೆ ಹೊರಟಿದೆ. ಯಾರ್ಡ್ ವಿದ್ಯುದ್ದೀಕರಣದ ನಂತರ ಮೊದಲ ಬಾರಿಗೆ ಎಲೆಕ್ಟ್ರಿಕ್ ಸರಕು ರೈಲು ಸಂಚಾರ ಆರಂಭಿಸಿದ್ದು ಇಂದು ಸಂಜೆ 7.05ಕ್ಕೆ ಕೇರಳದ ಕೋಜಿಕ್ಕೋಡಿಗೆ ತೆರಳಿತು.  

21 ವ್ಯಾಗನ್‌ಗಳನ್ನು ಹೊಂದಿರುವ ಸರಕು ರೈಲಿನಲ್ಲಿ 1,820 ಟನ್ ಯೂರಿಯಾವನ್ನು ಹೊತ್ತೊಯ್ಯಲಾಗುತ್ತಿದೆ. ಮಂಗಳೂರಿನ ಎಂಸಿಎಫ್ ಫ್ಯಾಕ್ಟರಿಯಿಂದ ಯೂರಿಯಾ ಉತ್ಪನ್ನಗಳನ್ನು ರವಾನಿಸಲಾಗುತ್ತಿದೆ.

ಪಣಂಬೂರ್ ಗೂಡ್ಸ್ ಯಾರ್ಡಿನಲ್ಲಿ ವಿದ್ಯುದ್ದೀಕರಣ ಕಾರ್ಯ ಇದೇ ಮಾರ್ಚ್ ತಿಂಗಳಲ್ಲಿ ಪೂರ್ಣಗೊಂಡಿತ್ತು. ಈ ಯೋಜನೆಗೆ 8 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದಾದ ಬಳಿಕ ಎನ್ಎಂಪಿಟಿ ಬಂದರಿನಲ್ಲೂ ವಿದ್ಯುದೀಕರಣ ಕಾರ್ಯ ನಡೆಯಲಿದ್ದು ಇದೇ ವಾರದಲ್ಲಿ ಕೆಲಸ ಆರಂಭವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.

 

After the electrification of Panambur Yard the first electric loco ac train carrying 1820 tons of neem leaves to Kozhikode, Kerala.