ಬ್ರೇಕಿಂಗ್ ನ್ಯೂಸ್
17-04-21 05:39 pm Mangalore Correspondent ಕರಾವಳಿ
ಮಂಗಳೂರು, ಎ.17: ಕೊರೊನಾ ಎರಡನೇ ಅಲೆ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಎಲ್ಲ ಠಾಣೆಗಳಲ್ಲಿಯೂ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪೊಲೀಸ್ ಕಮಿಷನರ್ ಸೂಚನೆ ನೀಡಿದ್ದಾರೆ. ಇದೇ ವೇಳೆ, ನಗರದ ಉರ್ವಾ ಠಾಣೆಯನ್ನು ಮಾಡೆಲ್ ಕೋವಿಡ್ ಸ್ಟೇಶನ್ ಎನ್ನುವ ರೀತಿ ಪರಿವರ್ತಿಸಲಾಗಿದೆ.
ಇದರಂತೆ ಯಾವುದೇ ಸಾರ್ವಜನಿಕರು ಠಾಣೆಯ ಒಳಗೆ ಹೋಗುವಂತಿಲ್ಲ. ಸ್ಟೇಶನ್ ಹೊರಭಾಗದಲ್ಲಿ ಮೇಜು ಇರಿಸಿ, ಸಾರ್ವಜನಿಕರ ದೂರು ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಮೂವರು ಸಿಬಂದಿಯನ್ನು ನಿಯೋಜನೆ ಮಾಡಲಾಗಿದೆ. ಸಾರ್ವಜನಿಕರು ತೆಗೆದುಕೊಂಡು ಬರುವ ದೂರು ಅರ್ಜಿಯನ್ನು ಅಲ್ಲಿರುವ ಸೋಂಕು ನಿರೋಧಕ ಬಾಕ್ಸ್ ನಲ್ಲಿ ಇಡಲಾಗುತ್ತದೆ. ಹತ್ತು ನಿಮಿಷ ಕಾಲ ಅರ್ಜಿಯನ್ನು ಬಾಕ್ಸ್ ನಲ್ಲಿಟ್ಟು ದೂರನ್ನು ಸ್ವೀಕರಿಸಲಾಗುತ್ತದೆ. ಯುವಿ ಡಿಸ್ ಇನ್ ಫೆಕ್ಷನ್ ಹೆಸರಿನ ಬಾಕ್ಸ್ ನಲ್ಲಿಟ್ಟರೆ ಅರ್ಜಿಯ ಪೇಪರಲ್ಲಿ ಅಂಟಿರುವ ರೋಗಾಣು ಸತ್ತು ಹೋಗುತ್ತವಂತೆ.
ಅಲ್ಲದೆ, ಪೊಲೀಸರಿಗೆ ಠಾಣೆಯಲ್ಲೇ ಪಲ್ಸ್ ಟೆಸ್ಟ್ ಮತ್ತು ಟೆಂಪರೇಚರ್ ಪರೀಕ್ಷೆ ಮಾಡಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ, ಠಾಣೆಯ ಒಳಗಿರುವ ಪೊಲೀಸ್ ಸಿಬಂದಿ ದಿನಕ್ಕೆ ಮೂರು ಬಾರಿ ಕಷಾಯ ತಯಾರಿಸಿ ಕುಡಿಯಬೇಕು. ಅದಕ್ಕಾಗಿ ಠಾಣೆಯಲ್ಲೇ ಕಷಾಯ ತಯಾರಿಸಲಾಗುತ್ತದೆ. ಅರಸಿನಪುಡಿ, ಕಾಳು ಮೆಣಸು, ಚಕ್ಕೆ, ಶುಂಠಿ, ಲವಂಗ, ಜೀರಿಗೆ, ಬೆಳ್ಳುಳ್ಳಿ, ಬೆಲ್ಲ ಇತ್ಯಾದಿ ಆಯುರ್ವೇದಿಕ್ ಅಂಶಗಳನ್ನು ಒಟ್ಟು ಸೇರಿಸಿ, ಕಷಾಯ ತಯಾರಿಸಲಾಗುತ್ತದೆ.
ಉರ್ವಾ ಮಾಡೆಲ್ ಕೋವಿಡ್ ಸ್ಟೇಶನ್ ರೆಡಿಯಾಗಿದ್ದನ್ನು ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಅಲ್ಲಿ ತಯಾರಿಸಿದ್ದ ಕಷಾಯವನ್ನೂ ಕಮಿಷನರ್ ಕುಡಿದು ಟೇಸ್ಟ್ ನೋಡಿಕೊಂಡರು. ಕಳೆದ ಬಾರಿ ಕೊರೊನಾ ಸಂದರ್ಭದಲ್ಲಿ ಮಂಗಳೂರಿನಲ್ಲಿ 300 ಮಂದಿ ಪೊಲೀಸರಿಗೆ ಸೋಂಕು ಕಂಡುಬಂದಿತ್ತು. ಹೀಗಾಗಿ ಈ ಬಾರಿ ಕೊರೊನಾ ಅಲೆ ದಾಂಗುಡಿ ಇಟ್ಟಿರುವಾಗಲೇ ಮುಂಜಾಗ್ರತೆಗಾಗಿ ಕಮಿಷನರ್ ಕ್ರಮ ಕೈಗೊಂಡಿದ್ದಾರೆ.
Mangalore Urwa Police Station turns into Covid Model station for the safety of Police Personnel. Police Commissioner Shashi Kumar and Dcp Hariram Shankar visited the station.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm