ಕೋವಿಡ್ ನಿರ್ಬಂಧ ಹಿನ್ನೆಲೆ ; ಪಡುಮಲೆ ಬ್ರಹ್ಮಕಲಶಾಭಿಷೇಕ ಮುಂದೂಡಿಕೆ

21-04-21 07:36 pm       Mangaluru correspondent   ಕರಾವಳಿ

ಪಡುಮಲೆ ಕೋಟಿ ಚೆನ್ನಯರ ಮೂಲಸ್ಥಾನ ಹಾಗೂ ಜನ್ಮಸ್ಥಾನದಲ್ಲಿ ಎಪ್ರಿಲ್ 22ರಿಂದ 24ರ ವರೆಗೆ ಹಮ್ಮಿಕೊಂಡಿದ್ದ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮವನ್ನು ಕೋವಿಡ್ ನಿರ್ಬಂಧ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡಲಾಗಿದೆ.

ಮಂಗಳೂರು, ಎ.21: ಪಡುಮಲೆ ಕೋಟಿ ಚೆನ್ನಯರ ಮೂಲಸ್ಥಾನ ಹಾಗೂ ಜನ್ಮಸ್ಥಾನದಲ್ಲಿ ಎಪ್ರಿಲ್ 22ರಿಂದ 24ರ ವರೆಗೆ ಹಮ್ಮಿಕೊಂಡಿದ್ದ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮವನ್ನು ಕೋವಿಡ್ ನಿರ್ಬಂಧ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡಲಾಗಿದೆ ಎಂದು ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ.

ಕೋವಿಡ್ ಸೋಂಕು ರಾಜ್ಯದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ನಿರ್ಬಂಧಗಳನ್ನು ವಿಧಿಸಿ, ಆದೇಶ ಮಾಡಿತ್ತು. ಅಲ್ಲದೆ, ವಾರಂತ್ಯದ ಎರಡು ದಿನಗಳಲ್ಲಿ ಕರ್ಫ್ಯೂ ವಿಧಿಸಿರುವ ಹಿನ್ನೆಲೆಯಲ್ಲಿ ಪಡುಮಲೆಯಲ್ಲಿ ಹಮ್ಮಿಕೊಂಡಿದ್ದ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಹರಿಕೃಷ್ಣ ಬಂಟ್ವಾಳ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೊಸ ಮಾರ್ಗಸೂಚಿ ಪ್ರಕಾರ, ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೂ ಅವಕಾಶ ಇಲ್ಲದ ಕಾರಣ ನಿಗದಿತ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಮುಂದಿನ ಮಾರ್ಗಸೂಚಿ ನೋಡಿಕೊಂಡು ಘೋಷಣೆ ಮಾಡಲಾಗುತ್ತದೆ. ಈವರೆಗೂ ಭಕ್ತಾದಿಗಳಿಂದ ಅದ್ಭುತ ಬೆಂಬಲ ದೊರಕಿದ್ದು ಮುಂದಕ್ಕೂ ಸಹಕಾರ ನಿರೀಕ್ಷೆ ಮಾಡುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Brahmakalashotsava and Prathisthe of the renovated daivasthana at Padumale in Puttur taluk of Dakshina Kannada, which is the birth place of revered legendary heroes of Tulu Nadu Koti and Chennaya, which was to be performed for three days has been postponed due to night curfew in karnataka.