ಬ್ರೇಕಿಂಗ್ ನ್ಯೂಸ್
22-04-21 04:02 pm Mangalore Correspondent ಕರಾವಳಿ
ಮಂಗಳೂರು, ಎ.22: ವಂಚನೆ ಪ್ರಕರಣದಲ್ಲಿ ಬಂಧನಕ್ಕೀಡಾಗಿ ಹೊರಬಂದಿರುವ ರಾಮಸೇನೆಯ ರಾಜ್ಯಾಧ್ಯಕ್ಷ ಪ್ರಸಾದ್ ಅತ್ತಾವರ ವೈಲೆಂಟ್ ಆಗಿದ್ದಾರೆ. ಈ ಪ್ರಕರಣದ ಹಿಂದೆ ಮಂಗಳೂರಿನ ಪ್ರಭಾವಿ ಬಿಜೆಪಿ ನಾಯಕನ ಕೈವಾಡವಿದ್ದು, ತನ್ನ ಏಳಿಗೆ ಸಹಿಸಲಾರದೆ ಎಫ್ಐಆರ್ ಹಾಕಿಸಿ ಅರೆಸ್ಟ್ ಮಾಡಿಸಿದ್ದಾರೆ. ಆ ವ್ಯಕ್ತಿಯನ್ನು ನಾನು ಸುಮ್ಮನೇ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
‘’ಹೆಡ್ ಲೈನ್ ಕರ್ನಾಟಕ’’ಕ್ಕೆ ವಿಶೇಷ ಸಂದರ್ಶನ ನೀಡಿರುವ ಪ್ರಸಾದ್ ಅತ್ತಾವರ, ಒಟ್ಟು ಘಟನೆಯ ಬಗ್ಗೆ ಸವಿವರವಾಗಿ ಮಾತನಾಡಿದ್ದಾರೆ. ಅದನ್ನು ಅವರ ಮಾತುಗಳಲ್ಲೇ ಕೇಳಿಬಿಡಿ. ಈ ಪ್ರಕರಣದಲ್ಲಿ ನನ್ನನ್ನು ಸಮಾಜಕ್ಕೆ ವಂಚಕನ ರೀತಿ ಚಿತ್ರಿಸುವ ಕೆಲಸ ಮಾಡಿದ್ದಾರೆ. ನಾನು ಮಾಡದ ತಪ್ಪಿಗೆ ನನ್ನನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಇದರ ಹಿಂದೆ ಯಾರಿದ್ದಾರೆ, ಯಾರ್ಯಾರು ಕೈಯಾಡಿಸಿದ್ದಾರೆ. ಯಾರೆಲ್ಲ ಪೊಲೀಸ್ ಅಧಿಕಾರಿಗಳು ಈ ಕೆಲಸವನ್ನು ಮಾಡಿದ್ದಾರೆ ಅನ್ನೋದು ಗೊತ್ತಿದೆ.
ಕುಲಪತಿ ಹುದ್ದೆ ಐದಾರು ಕೋಟಿಯ ದಂಧೆ
ಪ್ರೊಫೆಸರ್ ಕುಲಪತಿಯಾಗಿಸಬೇಕೆಂದು ನನ್ನ ಬಳಿಗೆ ಬಂದಿದ್ದು ಹೌದು. ಎರಡು- ಮೂರು ಬಾರಿ ಬಂದಾಗಲೂ ನನ್ನಿಂದ ಆಗುವುದಿಲ್ಲ ಎಂದು ಹೊರಗೆ ಕಳಿಸಿದ್ದೇನೆ. ಸಿಎಂ ಯಡಿಯೂರಪ್ಪ ಅವರ ಆತ್ಮೀಯ ಎನ್ನುವ ಕಾರಣಕ್ಕೆ ನೂರಾರು ಮಂದಿ ನನ್ನ ಬಳಿಗೆ ಬರುತ್ತಾರೆ. ಹಾಗೇ ವಿವೇಕ್ ಆಚಾರ್ಯ ಎನ್ನುವ ವ್ಯಕ್ತಿಯ ಜೊತೆ ಪ್ರೊಫೆಸರ್ ಕೂಡ ಬಂದಿದ್ದ. ಆದರೆ, ಕುಲಪತಿ ಮಾಡಿಸುವುದಂದ್ರೆ ದೊಡ್ಡ ದಂಧೆ. ಐದಾರು ಕೋಟಿಯ ದಂಧೆಯದು. 15 ಲಕ್ಷದಲ್ಲಿ ಆಗೋ ಕೆಲಸಾನೂ ಅಲ್ಲ. ಆದ್ರೂ ಭರತ್ ಅನ್ನುವ ವ್ಯಕ್ತಿಯ ಜೊತೆ ಡೀಲ್ ಮಾಡಿ, ಪ್ರೊಫೆಸರ್ ಹಣ ಕೊಟ್ಟಿದ್ದಾರೆ. ಆನಂತರ ಕೆಲಸ ಆಗಿಲ್ಲ ಎಂದು ಹಣ ಕೇಳಲು ಬಂದಿದ್ದಾರೆ. ಆಗ ನನ್ನಲ್ಲಿ ಹಣ ಕೇಳಬೇಡಿ, ಹೊರಗೆ ಹೋಗುವಂತೆ ಜೋರು ಮಾಡಿ ಕಳಿಸಿದ್ದು ಸತ್ಯ.
ಆಬಳಿಕ ಪೊಲೀಸರ ಬಳಿಗೆ ದೂರು ಹೇಳಲು ಹೋಗಿದ್ದ. ಅಲ್ಲಿ ಕೂಡ ಪ್ರೊಫೆಸರ್, ಪೊಲೀಸರಲ್ಲಿ ಭರತ್ ಗೆ ಹಣ ಕೊಟ್ಟಿದ್ದನ್ನು ನಾವು ನಾಲ್ಕೈದು ಮಂದಿ ಇರುವಾಗಲೇ ಹೇಳಿದ್ದಾರೆ. ಅದಕ್ಕೆ ಕಂಕನಾಡಿ ಠಾಣೆಯ ಸರ್ಕಲ್ ಇನ್ ಸ್ಪೆಕ್ಟರ್ ಕೂಡ ಸಾಕ್ಷಿ. ಭರತ್ ಆನಂತರ ಹಣ ಮರಳಿ ಕೊಡುವುದಾಗಿ ಒಪ್ಪಿದ್ದಾನೆ. ಎರಡು ಲಕ್ಷ ರೂ.ವನ್ನು ಆವತ್ತೇ ಮರಳಿಸಿದ್ದಾನೆ. ಪೊಲೀಸರು ಕೂಡ ಅಲ್ಲಿಗೆ ಇತ್ಯರ್ಥ ಮಾಡಬೇಕಿತ್ತು. ಆದರೆ, ಆನಂತರ ಆಗಿದ್ದೇ ಬೇರೆ. ಹಣ ಮರಳಿಸುತ್ತೇನೆ ಎಂದ ಮೇಲೆ ಎಫ್ಐಆರ್ ಹಾಕುವ ಅಗತ್ಯ ಇರಲಿಲ್ಲ. ಆದರೆ, ಕಂಕನಾಡಿ ಪೊಲೀಸರು ಎಫ್ಐಆರ್ ಮಾಡಿದ್ರು, ನನ್ನನ್ನೇ ಎ ವನ್ ಆರೋಪಿಯಾಗಿಸಿದ್ರು. ನಸುಕಿನಲ್ಲಿ 20 ಮಂದಿ ಪೊಲೀಸರು ಬಂದು ಮನೆಯನ್ನು ಸುತ್ತುವರಿದು ಮಧ್ಯಾಹ್ನ ವರೆಗೆ ವಿಚಾರಣೆ ಮಾಡಿ, ಅರೆಸ್ಟ್ ಮಾಡಿದ್ರು.
ನಾನು ತಪ್ಪು ಮಾಡಿಲ್ಲ, ವಿನಾಕಾರಣ ಬಂಧಿಸಿದ್ರು
ನಾನು ತಪ್ಪು ಮಾಡಿಲ್ಲ. ಹಣ ತಗೊಂಡದ್ದು ಮತ್ತೊಬ್ಬ. ಲಂಚ ಕೊಟ್ಟಿದ್ದು ಪ್ರೊಫೆಸರ್. ಒಂದು ಸಂಘಟನೆಯಲ್ಲಿದ್ದು ಜವಾಬ್ದಾರಿಯುತ ಮನುಷ್ಯನಾಗಿ ಓಡಿ ಹೋಗಲಿಲ್ಲ. ತನಿಖೆಗೆ ಸಹಕರಿಸಿದ್ದೇನೆ. ಮೂರು ದಿನ ಬೆಂಗಳೂರಿಗೆ ಒಯ್ದು ಓಡಾಡಿಸಿದ್ರು. ಇಷ್ಟೆಲ್ಲಾ ಆದ್ರೂ ಆರೋಪಿ ಭರತ್ ನನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಈ ಘಟನೆಯ ಹಿಂದೆ ಮಂಗಳೂರಿನ ಪ್ರಭಾವಿ ನಾಯಕರೊಬ್ಬರು ಕೈಯಾಡಿಸಿದ್ದಾರೆ. ದೂರು ನೀಡಿದವನೂ 420. ಈ ಎಫ್ಐಆರ್ ಹಾಕುವಂತೆ ಒತ್ತಡ ಹಾಕಿ, ನನ್ನನ್ನು ಅರೆಸ್ಟ್ ಮಾಡಿದವನೂ ಫೋರ್ ಟ್ವೆಂಟಿ, ಈ ನಾಯಕನ ಜಾತಕ ನನಗೂ ಗೊತ್ತಿದೆ. ಎಲ್ಲೆಲ್ಲಿ ಏನೇನು ಮಾಡಿದ್ದಾನೆ ಅನ್ನೋದು ಗೊತ್ತು. ಎಲ್ಲಿ ಮುಟ್ಟಿಸಬೇಕೋ ಅಲ್ಲಿಗೆ ಮುಟ್ಟಿಸುತ್ತೇನೆ, ಬಿಡುವುದಿಲ್ಲ. ಅವನ ಅಂತ್ಯ ಇವತ್ತಿನಿಂದಲೇ ಆರಂಭವಾಗಿದೆ, ನೆನಪಿಟ್ಟುಕೊಳ್ಳಿ.
ನನ್ನನ್ನು ಬಿಜೆಪಿಗೆ ಸೇರಿಸಿದ್ದು ಯಡಿಯೂರಪ್ಪ
ನನಗೂ ಸಂಘ ಪರಿವಾರ ಮತ್ತು ಬಿಜೆಪಿ ನಾಯಕರ ಬೆಂಬಲ ಇದೆ. ನನ್ನನ್ನು ಬಿಜೆಪಿಗೆ ಬೇಕು ಎಂದು ಮಂಗಳೂರಿನ ಬಿಜೆಪಿ ನಾಯಕರ ವಿರೋಧದ ಮಧ್ಯೆಯೂ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಬಿಜೆಪಿಗೆ ಸೇರಿಸಿದ್ದಾರೆ. ಅದು ಇವರಿಗೆ ಸಹಿಸಲಾಗುತ್ತಿಲ್ಲ. ಕಪಿಲಾ ಗೋಶಾಲೆಯ ವಿಚಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳೂರಿಗೆ ಬಂದಿದ್ದಾಗ, ಪ್ರಕಾಶ್ ಶೆಟ್ಟಿ ಮನವಿ ಹಿಡಿದು ಬಂದಿದ್ದರು. ಓಶ್ಯನ್ ಪರ್ಲ್ ಹೊಟೇಲಿನಲ್ಲಿ ಪ್ರಕಾಶ್ ಶೆಟ್ಟಿಯನ್ನು ಪೊಲೀಸರು ಒಳಗೆ ಬಿಡದಿದ್ದಾಗ, ನಾನು ಅವರನ್ನು ಮುಖ್ಯಮಂತ್ರಿ ಬಳಿಗೆ ಕರೆದೊಯ್ದಿದ್ದೆ. ಮುಖ್ಯಮಂತ್ರಿ ತಕ್ಷಣವೇ ಕೆಐಎಡಿಬಿ ಅಧಿಕಾರಿಗಳಿಗೆ ಫೋನ್ ಮಾಡಿ, ಯಾವುದೇ ಕಾರಣಕ್ಕೂ ಗೋಶಾಲೆ ತೆರವು ಮಾಡದಂತೆ ಸೂಚನೆ ನೀಡಿದ್ದರು. ಹಾಗಿದ್ದರೂ ಆನಂತ್ರ ಗೋಶಾಲೆಯನ್ನೇ ಇವರು ಒಡೆದು ಹಾಕಿದ್ರು. ನಾನು ಗೋವಿನ ಮೇಲಿನ ಪ್ರೇಮದಿಂದ ಗೋಶಾಲೆ ಮತ್ತೆ ಕಟ್ಟಿಸಿಕೊಡೋಣ ಎಂದು ಪ್ರಕಾಶ್ ಶೆಟ್ಟಿಯನ್ನು ಬೆಂಬಲಿಸಿದ್ದೆ. ಇಲ್ಲಿನ ಬಿಜೆಪಿ ನಾಯಕನಿಗೆ ಅದರ ದ್ವೇಷ ನನ್ನ ಮೇಲಿತ್ತು.
ಗೋಹತ್ಯೆ ವಿಚಾರದಲ್ಲಿ ಇವರು ಹೋರಾಟ ಮಾಡಿಲ್ಲ
ಗೋಹತ್ಯೆ, ಗೋವಿನ ವಿಚಾರದಲ್ಲಿ ಹೋರಾಟ ಮಾಡಿಕೊಂಡು ಬಂದು ಬಿಜೆಪಿ ಅಧಿಕಾರಕ್ಕೆ ಬಂದಿದೆ. ಆದರೆ, ಇಂದಿನ ನಾಯಕರಿಗೆ ಹೋರಾಟದ ವಿಚಾರವೂ ಗೊತ್ತಿಲ್ಲ. ಹೋರಾಟ ಮಾಡಿಯೂ ಗೊತ್ತಿಲ್ಲ. ಹಿಂದುತ್ವಕ್ಕಾಗಿ ನೈಜ ಹೋರಾಟ ಮಾಡಿದವರನ್ನು ಇವರು ಮೂಲೆಗುಂಪು ಮಾಡಿದ್ದಾರೆ. ನಾನು 22 ವರ್ಷಗಳಿಂದ ಸಮಾಜಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಮುತಾಲಿಕರು 55 ವರ್ಷಗಳಿಂದ ಸಮಾಜಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಮಂಗಳೂರಿನಲ್ಲಿ ತುಂಬ ಜನ ಇದ್ದಾರೆ. ಯಾರು ನೈಜ ಹೋರಾಟ ಮಾಡಿ ನಾಯಕರಾಗಿದ್ದಾರೆ, ಅವರೆಲ್ಲರನ್ನೂ ಇವರು ತುಳಿದು ಹಾಕಿದ್ದಾರೆ. ಆದರೆ ನನ್ನನ್ನು ತುಳಿಯಲು ಇವರಿಂದ ಆಗಿಲ್ಲ. ಎಷ್ಟೇ ತುಳಿದರೂ ಮತ್ತೆ ಪುಟಿದು ಬಂದಿದ್ದೇನೆ.
ಇವ ಹೆಂಗಸು, ಗಂಡಸು ಅಲ್ಲ..
ರಾಜ್ಯದಲ್ಲಿ 28 ಜಿಲ್ಲೆಗಳಲ್ಲೂ ರಾಮಸೇನೆಯ ಘಟಕಗಳಿದ್ದು ಸಾವಿರಾರು ಕಾರ್ಯಕರ್ತರಿದ್ದಾರೆ. ಇದನ್ನು ಸಹಿಸಲು ಇವರಿಂದ ಆಗುತ್ತಿಲ್ಲ. ನಾನು ಇವರ ಬೆದರಿಕೆಗೆ ಜಗ್ಗಲ್ಲ. ಭಯಪಟ್ಟು ಓಡಿ ಹೋಗುವುದೂ ಇಲ್ಲ. ಸುಪಾರಿ ಕೊಟ್ಟಿದ್ದಾನೆ ಅನ್ನುವ ವಿಷ್ಯ ಗೊತ್ತಾಗಿದೆ. ಯಾರು ಬರ್ತಾರೋ, ಬರಲಿ. ನೋಡ್ತೀನಿ. ನಾನೇನು ಕೈಬಳೆ ತೊಟ್ಟು ಕುಳಿತಿಲ್ಲ. ಇವ ಹೆಣ್ಣು , ಗಂಡಸು ಅಲ್ಲ. ಇವನಿಗೆ ಸೀರೆ ಉಡಿಸುವ ಸಮಯ ಬಂದಿದೆ. ಇದು ನನಗೆ ಶಿಕ್ಷಣ, ಕೃಷ್ಣ ಹೇಳಿದ ಹಾಗೆ. ಕಷ್ಟ ಎನ್ನುವುದು ಶಿಕ್ಷಣ ಅಷ್ಟೇ..
Video:
Ram Sene Chief Prasad Attavar talks about the ones behind his arrest and states how he was trapped in an interview with team Headline Karnataka in Mangalore.
20-01-25 07:00 pm
HK News Desk
Hassan Suicide, Online Gaming: ಅಮ್ಮಾ ನನ್ನನ್ನು...
20-01-25 04:24 pm
ಕೇಸರಿ ಮನೆಯಲ್ಲಿ ಬಣ ಬಡಿದಾಟ ಜೋರು ; ಯತ್ನಾಳ್ ಬಣದ ಎ...
19-01-25 08:30 pm
ಮುಡಾ ಸೈಟ್ ಹಗರಣ ; 300 ಕೋಟಿ ಮೌಲ್ಯದ 142 ಆಸ್ತಿಗಳನ...
18-01-25 05:05 pm
ಗದಗ ; ಪ್ರೀತಿಸಲು ಪೀಡಿಸುತ್ತಿದ್ದ ಇಬ್ಬರು ಯುವಕರು,...
16-01-25 05:30 pm
19-01-25 08:17 pm
HK News Desk
Israel War: ಕಡೆಗೂ ಕದನ ವಿರಾಮ ಘೋಷಿಸಿದ ಇಸ್ರೇಲ್ ;...
19-01-25 06:35 pm
ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಎನ್ಎಂಡಿ...
18-01-25 06:20 pm
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
Actor Saif Ali Khan attack stabbed: ಬಾಲಿವುಡ್...
16-01-25 04:24 pm
20-01-25 11:05 pm
Mangalore Correspondent
Mangalore, Ivan dsouza, CM Siddaramaiah: ಬಹು...
20-01-25 06:00 pm
International Kite Festival 2025, Thannirbhav...
18-01-25 09:27 pm
Mangalore Dinesh Gundu Rao, belthandy: ತಾಲೂಕು...
18-01-25 06:16 pm
CM Siddaramaiah, multicultural fest, Mangalor...
17-01-25 11:10 pm
20-01-25 10:18 pm
HK News Desk
Mangalore Kotekar Bank Robbery, Three Arreste...
20-01-25 07:19 pm
Mangalore Kotekar Robbery, Davanagere: ಮಂಗಳೂರ...
20-01-25 05:20 pm
Mysuru Robbery, Bidar Mangalore, Crime; ಬೀದರ್...
20-01-25 01:25 pm
Bidar Bank Robbery, bihar gang, Update: ಬೀದರ್...
19-01-25 07:52 pm