ಬ್ರೇಕಿಂಗ್ ನ್ಯೂಸ್
23-04-21 06:18 pm Mangalore Correspondent ಕರಾವಳಿ
ಮಂಗಳೂರು, ಎ.23: ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಇಂದು ನಗರದಲ್ಲಿ ಅಕ್ಷರಶಃ ಬೀದಿಗಿಳಿದು ಬಿಟ್ಟಿದ್ದರು. ನಡೆಯುತ್ತಲೇ ನಗರಕ್ಕೆ ಸುತ್ತು ಹೊಡೆದಿದ್ದಾರೆ. ಕೋವಿಡ್ ಆದೇಶ ಮೀರಿ ವ್ಯಾಪಾರ ನಡೆಸುತ್ತಿದ್ದ ಜುವೆಲ್ಲರಿ, ಮೊಬೈಲ್ ಶಾಪ್, ಮಾಲ್ ಗಳಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ.


ನಗರದ ಕ್ಲಾಕ್ ಟವರ್ ನಲ್ಲಿ ತಮ್ಮ ವಾಹನದಿಂದ ಇಳಿದ ಕಮಿಷನರ್ ರಸ್ತೆಯುದ್ದಕ್ಕೂ ನಡೆಯಲಾರಂಭಿಸಿದ್ದಾರೆ. ಸೆಂಟ್ರಲ್ ಮಾರುಕಟ್ಟೆಯತ್ತ ತೆರಳಿದ ಅಲ್ಲಿದ್ದ ಅನಗತ್ಯ ಶಾಪ್ ಗಳತ್ತ ಕಣ್ಣಾಯಿಸುತ್ತಲೇ ಎಂಜಿ ರೋಡ್ ಆಗಿ ಕೆ.ಎಸ್. ರಾವ್ ರಸ್ತೆಯತ್ತ ಬಂದಿದ್ದಾರೆ.

ಈ ನಡುವೆ, ಖಾಸಗಿ ಬಸ್ ಹತ್ತಿದ ಕಮಿಷನರ್ ಅದರಲ್ಲಿದ್ದ ಪ್ರಯಾಣಿಕರನ್ನು ಮಾಸ್ಕ್ ಹಾಕಿದ್ದಾರೆಯೇ ಎಂದು ಗಮನಿಸಿದ್ದಾರೆ. ಮೂಗು, ಬಾಯಿ ಮುಚ್ಚಿಕೊಂಡು ಮಾಸ್ಕ್ ಹಾಕಿದ್ದ ಯುವತಿಯರು, ಮಹಿಳೆಯರಿಗೆ ತಮ್ಮ ಮಹಿಳಾ ಸಿಬಂದಿಯಿಂದಲೇ ಗುಲಾಬಿ ಹೂವು ನೀಡಿದ್ದಾರೆ. ಮಹಿಳೆಯ ಜೊತೆ ಬಸ್ಸಿನಲ್ಲಿ ಕುಳಿತಿದ್ದ ಮಗುವೊಂದು ಬಾಯಿಗೆ ಪೂರ್ತಿ ಮಾಸ್ಕ್ ಹಾಕಿದ್ದನ್ನು ನೋಡಿ, ಸ್ವತಃ ಕಮಿಷನರ್ ಅವರೇ ಗುಲಾಬಿ ಕೊಟ್ಟು ನಗು ಬೀರಿದ್ದಾರೆ.


ಆನಂತರ ಹಂಪನಕಟ್ಟೆಯ ವೃತ್ತಕ್ಕೆ ಬಂದ ಕಮಿಷನರ್ ಅಲ್ಲಿ ತೆರೆದುಕೊಂಡಿದ್ದ ಚಪ್ಪಲಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ. ಅಲ್ಲಿದ್ದ ಗ್ರಾಹಕರನ್ನು ಕುರಿತು ಏನ್ರೀ ನಿಮಗೆ ಭಾಷೆ ಅರ್ಥ ಆಗಲ್ವಾ.. ಮನೆಯಿಂದ ಅನಗತ್ಯ ಹೊರಬಾರದು ಎಂದ ಮೇಲೆ ಯಾಕೆ ಬರಬೇಕ್ರೀ ಎಂದು ದಬಾಯಿಸಿದ್ದಾರೆ.

ಮುಂದುವರಿದು ನಡೆಯುತ್ತಲೇ ಸಾಗಿದ ಕಮಿಷನರ್ ಮಿಲಾಗ್ರಿಸ್ ರೋಡಿನಿಂದ ಬಲ್ಮಠದತ್ತ ತೆರಳಿದ್ದಾರೆ. ಅಲ್ಲಿದ್ದ ಖಜಾನಾ ಜುವೆಲ್ಲರಿಯ ಒಳಗೆ ಹೋದ ಕಮಿಷನರ್, ಯಾರ್ರೀ ನಿಮ್ ಮ್ಯಾನೇಜರ್ ಯಾರು ? ಬನ್ನಿ ಎಂದು ಕರೆದು ಕೂಡಲೇ ಶಟರ್ ಎಳೆಯುವಂತೆ ಸೂಚಿಸಿದರು. ಅಲ್ಲದೆ, ಕೇಸ್ ಬುಕ್ ಮಾಡುವಂತೆ ಜೊತೆಗಿದ್ದ ಪೊಲೀಸರಿಗೆ ಸೂಚನೆ ನೀಡಿದರು.


ಹಂಪನಕಟ್ಟೆ ಮತ್ತು ಮಿಲಾಗ್ರುಸ್ ನಲ್ಲಿದ್ದ ಬಟ್ಟೆ ಅಂಗಡಿಗಳಿಗೂ ನುಗ್ಗಿದ ಕಮಿಷನರ್, ಇದೇನ್ರೀ ಇದೆಲ್ಲ ಎಸನ್ಷಿಯಲ್ ಗೂಡ್ಸಾ.. ನಿಮ್ಗೇನು ಅರ್ಥ ಆಗಲ್ಲ. ಅಗತ್ಯ ಸಾಮಗ್ರಿ ಹೊರತುಪಡಿಸಿ ಉಳಿದೆಲ್ಲ ಬಂದ್ ಮಾಡಲು ಆದೇಶ ಆಗಿರೋದು ಗೊತ್ತಿಲ್ವಾ ಎಂದು ರೇಗಾಡಿದ್ರು. ಅಲ್ಲಿಂದ ಮುಂದೆ ನಡೆಯುತ್ತಲೇ ಸಾಗಿದ ಕಮಿಷನರ್, ಡಾನ್ ಬಾಸ್ಕೊ ಹಾಲ್ ಮೂಲಕ ಬಲಕ್ಕೆ ಸಾಗಿದ್ದಲ್ಲದೆ ಅಲ್ಲಿಂದಾಗಿ ಫಳ್ನೀರ್ ಕಡೆಗೆ ತೆರಳಿದ್ರು.


ಅಲ್ಲಿ ತೆರೆದುಕೊಂಡಿದ್ದ ಮಲಬಾರ್ ಜುವೆಲ್ಲರಿ ಒಳನುಗ್ಗಿದ ಪೊಲೀಸ್ ಪಡೆ, ಅಲ್ಲಿದ್ದ ಗ್ರಾಹಕರನ್ನು ಗದರಿದರು. ಚಿನ್ನದ ಒಡವೆ ಪಡೆಯಲು ಮುಸ್ಲಿಂ ಕುಟುಂಬವೊಂದು ಬಂದಿತ್ತು. ಅದರಲ್ಲಿ ಒಬ್ಬರು ವಯಸ್ಸಾದ ಅಜ್ಜಿಯೂ ಇದ್ದರು. ಹೀಗೆ ವಯಸ್ಸಾದವರನ್ನೂ ಈ ಹೊತ್ತಿನಲ್ಲಿ ಕರ್ಕೊಂಡು ಬಂದಿದ್ದೀರಲ್ವಾ ಎಂದು ಅವರನ್ನು ದಬಾಯಿಸಿದರು. ಅಲ್ಲಿಯೂ ಶಟರ್ ಎಳೆಯುವಂತೆ ಸೂಚಿಸಿದ್ದಲ್ಲದೆ, ಗ್ರಾಹಕರನ್ನು ಹೊರಗೆ ಕಳಿಸಿ ಸಿಬಂದಿಯನ್ನು ಒಳಗೆ ಬಿಟ್ಟುಕೊಂಡೇ ಪೊಲೀಸರ ಮೂಲಕ ಶಟರ್ ಎಳೆಸಿದರು.

ಅಲ್ಲಿಂದ ಉದ್ದಕ್ಕೆ ನಡೆದುಕೊಂಡೇ ಸಾಗಿದ ಕಮಿಷನರ್ ಜೊತೆ ನಡೆಯುವುದಕ್ಕೂ ಉಳಿದವರು ಏಗುವಂತಾಯ್ತು. ರೈಟ್ ಲೆಫ್ಟ್ ಎನ್ನುವ ರೀತಿ ಬಿರುಸಾಗಿ ಕಮಿಷನರ್ ನಡೆಯುತ್ತಿದ್ದರೆ, ಇತರೇ ಪೊಲೀಸರು ಮತ್ತು ಮೀಡಿಯಾ ಮಂದಿ ಏದುಸಿರು ಬಿಡುವಂತಾಗಿತ್ತು. ಇತರೆಲ್ಲ ಮಂದಿ ನಡೆದು ಸುಸ್ತಾಗಿ ಮಧ್ಯಾಹ್ನದ ಬೆವರಿನಲ್ಲಿ ಅಂಗಿ, ಪ್ಯಾಂಟ್ ಒದ್ದೆ ಆಗುವಂತಾಗಿತ್ತು. ಆನಂತರ ಫಳ್ನೀರ್ ಮೂಲಕ ನೇರವಾಗಿ ಕಂಕನಾಡಿ ಕಡೆಗೆ ಹೊರಟರು. ಅಲ್ಲಿ ಶಾಲಿಮಾರ್ ಕಾಂಪ್ಲೆಕ್ಸ್ ಮೇಲೆ ಹತ್ತಿದ ಕಮಿಷನರ್ ಅಲ್ಲಿಯೂ ವಾರ್ನ್ ಮಾಡುತ್ತಾ ಸಾಗಿದರು. ಆಬಳಿಕ ಗಣೇಶ್ ಮೆಡಿಕಲ್ ನಂತರದ ಕಟ್ಟಡದಲ್ಲಿರುವ ಕ್ರೋಮಾ ಮೊಬೈಲ್ ಶಾಪ್ ಗೆ ನುಗ್ಗಿದರು.

ಅಲ್ಲಿದ್ದ ಸಿಬಂದಿಯನ್ನು ದಬಾಯಿಸಿ, ಕೂಡ್ಲೇ ಬಂದ್ ಮಾಡುವಂತೆ ವಾರ್ನ್ ಮಾಡಿದ್ರು. ಭಯಗೊಂಡ ಸಿಬಂದಿ ತಾವೇ ಶಟರ್ ಎಳೆದರು. ಅದೇ ಕಟ್ಟಡದ ಮೊದಲ ಮಹಡಿಯಲ್ಲಿದ್ದ ಮಾಲ್ ಗೆ ನುಗ್ಗಿದ ಕಮಿಷನರ್ ಅವರನ್ನು ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಬನ್ನಿ ಬನ್ನಿ ಎನ್ನುತ್ತಲೇ ಸ್ವಾಗತಿಸಿದ.. ಏನಪ್ಪಾ ಬನ್ನಿ ಬನ್ನಿ ಎಂದು ರೇಗಾಡುತ್ತಲೇ, ನಿನ್ನ ಮ್ಯಾನೇಜರನ್ನು ಕರಿಯಪ್ಪಾ ಎಂದು ಸ್ಥಳಕ್ಕೆ ಬರಲು ಸೂಚಿಸಿದರು. ಮಾಲ್ ನಲ್ಲಿ ಬಟ್ಟೆ ಮಳಿಗೆ ಇತರ ಶಾಪ್ ಗಳಲ್ಲಿ ಗ್ರಾಹಕರಿದ್ದರು. ಎಲ್ಲರೂ ತಡಬಡಾಯಿಸಿ ಅಲ್ಲಿಂದ ಹೊರನಡೆದರು. ಮ್ಯಾನೇಜರ್ ವಿರುದ್ಧ ಸಿಟ್ಟಾಗಿದ್ದಲ್ಲದೆ, ಆತನನ್ನು ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಸೂಚಿಸಿದ್ರು.

ಅಲ್ಲಿಂದ ಹೊರಬಂದ ಕಮಿಷನರ್, ಸೇರಿದ್ದ ಪೊಲೀಸ್ ಪಟಾಲಂ ವಿರುದ್ಧ ಆಕ್ರೋಶ ಹೊರಹಾಕಿದ್ರು. ಏನ್ರೀ ನಿಮ್ಗೆ ನಗರದಲ್ಲಿ ಸುತ್ತಾಡಿ ಇಂಥವನ್ನು ಮುಚ್ಚಿಸೋಕೆ ಆಗಲ್ವಾ..? ಇದಕ್ಕೆ ನಾನೇ ಬರಬೇಕಾ ? ನೀವು ಯಾಕಿರೋದು ಮತ್ತೆ ಅಂತ ಅಲ್ಲಿ ಸೇರಿದ್ದ ಎಸಿಪಿ, ಕಂಕನಾಡಿ ಇನ್ ಸ್ಪೆಕ್ಟರ್ ಅವರನ್ನು ಪ್ರಶ್ನೆ ಮಾಡಿದ್ರು. ಎಲ್ಲ ಅಂಗಡಿ, ಮಳಿಗೆಗಳ ವಿರುದ್ಧವೂ ಕೇಸ್ ಬುಕ್ ಮಾಡಿ ಸಂಜೆ ವೇಳೆಗೆ ವರದಿ ಮಾಡುವಂತೆ ಸೂಚಿಸಿದ್ರು.

ಒಟ್ಟಾರೆ ಪೊಲೀಸ್ ಕಮಿಷನರ್ ಶಶಿಕುಮಾರ್ ಇವತ್ತಿನ ನಡಿಗೆಯ ಬಿರುಸಿಗೆ ಪೊಲೀಸರು ಸುಸ್ತಾದರೆ, ನಗರದಲ್ಲಿ ತೆರೆದುಕೊಂಡಿದ್ದ ಜುವೆಲ್ಲರಿ, ಇನ್ನಿತರ ಶಾಪ್ಗಳ ವ್ಯಾಪಾರಸ್ಥರು ಕಮಿಷನರ್ ಅವರ ಅಪರಾವತಾರ ನೋಡಿ ಕಂಗಾಲಾಗುವಂತೆ ಆಗಿತ್ತು.
Mangalore Police commissioner Shashi Kumar strolled in the city closed all shops and establishments violating curfew rules. Also the commissioner appreciated people who wore mask by giving them rose.
03-11-25 05:17 pm
Bangalore Correspondent
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 05:20 pm
Mangalore Correspondent
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm