ಬ್ರೇಕಿಂಗ್ ನ್ಯೂಸ್
23-04-21 07:24 pm Mangaluru correspondent ಕರಾವಳಿ
ಮಂಗಳೂರು, ಎ.23: ಸಿಸಿಬಿ ಪೊಲೀಸರ ಕಾರು ಮಾರಾಟ ಪ್ರಕರಣದಲ್ಲಿ ಬ್ರೋಕರ್ ಕೆಲಸ ಮಾಡಿದ್ದ ದಿವ್ಯದರ್ಶನ್ ಯಾನೆ ಡೀಡಿ ಮತ್ತೊಂದು ವಂಚನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ. ದುಬೈನ ಉದ್ಯಮಿಯೊಬ್ಬರನ್ನು ಹಣಕ್ಕಾಗಿ ಕೊಠಡಿಯಲ್ಲಿ ಕೂಡಿ ಹಾಕಿ, ಕೋಟಿಗೂ ಹೆಚ್ಚು ಹಣ ದೋಚಿರುವ ಪ್ರಕರಣದಲ್ಲಿ ದಿವ್ಯದರ್ಶನ್ ಎನ್ನುವ ಪಾತಕಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ದಿವ್ಯದರ್ಶನ್ ಮತ್ತು ಆತನ ಏಳು ಮಂದಿ ಸಹಚರರ ವಿರುದ್ಧ ಕದ್ರಿ ಠಾಣೆಯಲ್ಲಿ ವಂಚನೆ ಮತ್ತು ಜೀವ ಬೆದರಿಕೆ ಪ್ರಕರಣ ದಾಖಲಾಗಿತ್ತು. ಮೂಲತಃ ಕೇರಳದ ಕಣ್ಣೂರು ನಿವಾಸಿ ಮೊಹಮ್ಮದ್ ಹನೀಫ್ ದೂರುದಾರರಾಗಿದ್ದು ಪ್ರಕರಣದ ಬೆನ್ನತ್ತಿದ ಪೊಲೀಸರು ಆರೋಪಿ ದಿವ್ಯದರ್ಶನನ್ನು ಬಂಧಿಸಿದ್ದಾರೆ.
ಉದ್ಯಮಿಗೂ ಡೀಡಿಗೂ ಏನಿತ್ತು ಡೀಲಿಂಗ್
ಕೇರಳದ ಕಣ್ಣೂರು ಮೂಲದ ಮೊಹಮ್ಮದ್ ಹನೀಫ್ ದುಬೈನಲ್ಲಿ ಉದ್ಯಮಿಯಾಗಿದ್ದು, ಮಂಗಳೂರಿನಲ್ಲಿ ಫ್ಲಾಟ್ ನಲ್ಲಿ ವಾಸವಿದ್ದಾರೆ. 2018ರ ಆಗಸ್ಟ್ ನಲ್ಲಿ ಮೊಹಮ್ಮದ್ ಹನೀಫ್ ಮತ್ತು ಅವರ ಅಣ್ಣ ಮಂಗಳೂರಿನಲ್ಲಿ ಬ್ಯಾಂಕ್ ಲೋನ್ ಮತ್ತು ಹಣಕಾಸಿನ ಸಮಸ್ಯೆಗೆ ಒಳಗಾಗಿದ್ದರು. ಈ ವೇಳೆ, ಇವರಿಗೆ ದಿವ್ಯದರ್ಶನ್ ಪರಿಚಯ ಆಗಿದ್ದು ಸಮಸ್ಯೆ ಹೇಳಿಕೊಂಡಾಗ ಪರಿಹರಿಸಿ ಕೊಡುತ್ತೇನೆಂದು ಮಾತು ಕೊಟ್ಟಿದ್ದ. ಈ ನಡುವೆ, ದಿವ್ಯದರ್ಶನ್ 25 ಲಕ್ಷ ಹಣ ಆಗಬೇಕೆಂದು ಹೇಳಿದ್ದು ತಕ್ಷಣ ವ್ಯವಸ್ಥೆ ಮಾಡುವಂತೆ ಹನೀಫ್ ಗೆ ತಿಳಿಸಿದ್ದ.
ಅಷ್ಟು ಹಣವನ್ನು ಒಮ್ಮೆಲೇ ರೆಡಿ ಮಾಡೋಕೆ ಸಾಧ್ಯವಾಗದೇ ಇದ್ದಾಗ, ನಾನೇ ಹಣ ಹಾಕುತ್ತೇನೆ. ತಿಂಗಳಿಗೆ ಮೂರು ಲಕ್ಷದಂತೆ ಬಡ್ಡಿ ಸಹಿತ ಹಣ ನೀಡಿ ಎಂದು ದಿವ್ಯದರ್ಶನ್, ಹನೀಫ್ ಜೊತೆ ಒಪ್ಪಂದ ಮಾಡಿದ್ದ. ಆದರೆ, ಸೂಕ್ತ ಸಮಯದಲ್ಲಿ ಹಣ ಮರಳಿಸಲು ಸಾಧ್ಯವಾಗದೇ ಇದ್ದಾಗ ಹನೀಫ್ ಬಳಿಯಿದ್ದ ಐಷಾರಾಮಿ ಜಾಗ್ವಾರ್ ಕಾರನ್ನು ದಿವ್ಯದರ್ಶನ್ ಕೊಂಡೊಯ್ದಿದ್ದಾನೆ. ಆದರೆ, ಕೆಲವು ತಿಂಗಳ ಬಳಿಕ ಮೊಹಮ್ಮದ್ ಹನೀಫ್ ಆರೋಪಿಗೆ ಬಡ್ಡಿ ಸಹಿತ 55 ಲಕ್ಷ ಹಣವನ್ನು ನೀಡಿದ್ದು, ಕಾರನ್ನು ಮರಳಿ ಒಯ್ದಿದ್ದರು.
ಉಪ್ಪಳದ ಖದೀಮರು ಸೇರಿ ಧಮ್ಕಿ
ಆನಂತರ ಸ್ವಲ್ಪ ಸಮಯದ ಬಳಿಕ ಮೊಹಮ್ಮದ್ ಹನೀಫ್ ಮಂಗಳೂರಿನ ಫಳ್ನೀರ್ ನ ಫ್ಲಾಟ್ ನಲ್ಲಿದ್ದಾಗ, ಆರೋಪಿ ದಿವ್ಯದರ್ಶನ್ ಮತ್ತು ಕಾಸರಗೋಡಿನ ಉಪ್ಪಳದ ಶರೀಫ್ ಮತ್ತಿತರ ಐದಾರು ಮಂದಿ ಮನೆಗೆ ನುಗ್ಗಿದ್ದು, ಧಮ್ಕಿ ಹಾಕಿದ್ದಾರೆ. ನೀನು ದುಬೈಯಲ್ಲಿ ವ್ಯವಹಾರ ಪಾಲುದಾರಿಕೆ ಹೊಂದಿರುವ ಶೇಖ್ ಹಾಹೇಬ್ರಿಗೆ ವಂಚನೆ ಮಾಡಿದ್ದೀಯ. ಮಂಗಳೂರಿನಲ್ಲಿದ್ದು ಚಿನ್ನಾಭರಣ, ಕಾರು, ಬಂಗ್ಲೆ ಖರೀದಿಸಿ ಶೋಕಿ ಮಾಡುತ್ತಿದ್ದೀಯ. ಶೇಖರಿಗೆ ಎರಡು ಕೋಟಿ ಹಣವನ್ನು ವಸೂಲಿ ಮಾಡಿ ಕೊಡಲಿಕ್ಕಿದೆ ಎಂದು ಧಮ್ಕಿ ಹಾಕಿದ್ದಲ್ಲದೆ, ಹನೀಫ್ ಮತ್ತವರ ಹೆಣ್ಮಕ್ಕಳನ್ನು ಅದೇ ಮನೆಯಲ್ಲಿ ಕೂಡಿ ಹಾಕಿದ್ದಾರೆ.
ಕೊಲ್ಲುವುದಾಗಿ ಬೆದರಿಸಿ ಚಿನ್ನಾಭರಣ ಲೂಟಿ
ರಿವಾಲ್ವರ್ ತೋರಿಸಿ ಹನೀಫ್ ಮ್ತತು ಅವರ ಕುಟುಂಬವನ್ನು ಹಣ ಕೊಡದೇ ಇದ್ದಲ್ಲಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಲ್ಲದೆ ಆಬಳಿಕ ಅವರಲ್ಲಿದ್ದ ಚಿನ್ನಾಭರಣವನ್ನು ಕಿತ್ತುಕೊಂಡು ಮಾರಾಟ ಮಾಡಿ ಹಣ ಪಡೆದಿದ್ದಾರೆ. ಅದಲ್ಲದೆ, ಆರೋಪಿಗಳು ಕೇರಳದ ಕಣ್ಣೂರಿನಲ್ಲಿರುವ ಹನೀಫ್ ಅವರಿಗೆ ಸೇರಿದ್ದ ಬಂಗಲೆಯನ್ನು ಮಾರಾಟ ಮಾಡಲು ಯತ್ನಿಸಿದ್ದಾರೆ. ಅದಕ್ಕಾಗಿ ಬಂಗಲೆಯ ಕಾಗದ ಪತ್ರಗಳನ್ನು ಪಡೆದು ಮಾರಾಟಕ್ಕೆ ಸೇಲ್ ಅಗ್ರಿಮೆಂಟ್ ಮಾಡಿದ್ದಾರೆ. ಅಲ್ಲಿವರೆಗೂ ಉದ್ಯಮಿ ಮೊಹಮ್ಮದ್ ಹನೀಫ್ ಅವರನ್ನು ದುಬೈಗೆ ಹೋಗಲು ಬಿಡದೆ ಮನೆಯೊಂದರಲ್ಲಿ ಕೂಡಿ ಹಾಕಿದ್ದರು.
ರಿವಾಲ್ವರ್ ತೋರಿಸಿ ಜೀವ ಬೆದರಿಕೆ ಹಾಕಿದ್ದು ಮತ್ತು ಹಣ ಪಡೆದು ವಂಚನೆ, ಮೋಸ ಎಸಗಿರುವ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ದಿವ್ಯದರ್ಶನ್ ಬಂಧನದ ಬಗ್ಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಸಿಸಿಬಿ ಪೊಲೀಸರ ಕಾರು ಮಾರಾಟ ಪ್ರಕರಣವನ್ನು ಬೆಂಗಳೂರಿನ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಅದರಲ್ಲೂ ಪೊಲೀಸರ ಜೊತೆ ಬ್ರೋಕರ್ ಆಗಿದ್ದ ದಿವ್ಯದರ್ಶನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದರು. ವಂಚಕ ಹೇಗೂ ಸಿಕ್ಕಿಬೀಳ್ತಾನೆ ಎನ್ನೋ ಹಾಗೆ ಡೀಡಿ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
Divyadarshan a middle man broker involved in illegal activities has been arrested for threatening and looting Dubai based businessman by locking him inside a room in Mangalore said Police Commissioner Shashi Kumar.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm