ಗ್ಯಾಸ್ ಲೈಟರ್ ನಲ್ಲೂ ಚಿನ್ನ ಲೇಪಿತ ಸಾಮಗ್ರಿ ಪತ್ತೆ ; ದುಬೈನಿಂದ ಬಂದ ವ್ಯಕ್ತಿ ವಶಕ್ಕೆ

24-04-21 02:00 pm       Mangalore Correspondent   ಕರಾವಳಿ

ಅಕ್ರಮವಾಗಿ ತರುತ್ತಿದ್ದ ಚಿನ್ನವನ್ನು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಂಗಳೂರು, ಎ.24: ದುಬೈನಿಂದ 196 ಗ್ರಾಮ್ ಚಿನ್ನವನ್ನು ಅಕ್ರಮವಾಗಿ ತರುತ್ತಿದ್ದ ವ್ಯಕ್ತಿಯನ್ನು ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕಾಸರಗೋಡು ಜಿಲ್ಲೆಯ ಏರಿಯಾಲ್ ನಿವಾಸಿ ಅಬ್ದುಲ್ ರಹೀಮ್ ಜಾಫರ್ ಎನ್ನುವ ವ್ಯಕ್ತಿ ಎ.23ರಂದು ಏರ್ ಇಂಡಿಯಾ ವಿಮಾನದಲ್ಲಿ ದುಬೈನಿಂದ ಮಂಗಳೂರಿಗೆ ಬಂದಿದ್ದ. ಆತನ ಬ್ಯಾಗ್ ತಪಾಸಣೆ ನಡೆಸಿದಾಗ, ಗ್ಯಾಸ್ ಲೈಟರ್, ಅಡುಗೆಯಲ್ಲಿ ಬಳಸುವ ಕೆಲವು ಸಾಮಾಗ್ರಿಗಳು, ಎಂಪಿ3 ಪ್ಲೇಯರ್ ಮತ್ತಿತರ ವಸ್ತುಗಳಲ್ಲಿ ಪಾದರಸ ಲೇಪಿತ ಚಿನ್ನದ ಸ್ಟ್ರಿಪ್ ಗಳನ್ನು ಬಚ್ಚಿಟ್ಟಿರುವುದು ಕಂಡುಬಂದಿತ್ತು. ಸಣ್ಣ ಸಣ್ಣ ಸ್ಟ್ರಿಪ್ ರೂಪದಲ್ಲಿ ಚಿನ್ನ ಇರುವುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಒಟ್ಟು 196 ಗ್ರಾಮ್ ಚಿನ್ನ ಪತ್ತೆಯಾಗಿದ್ದು ಅದರ ಮೌಲ್ಯ 9.6 ಲಕ್ಷ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. 

Customs at Mangaluru International Airport seized 196 grams of gold worth Rs 9.6 lac from a passenger who arrived from Dubai on Friday April 23. The passenger, Abdul Raheem Eriyal Jafar hailing from Kudlu, Kasargod, Kerala.