ಬ್ರೇಕಿಂಗ್ ನ್ಯೂಸ್
24-04-21 03:38 pm Mangalore Correspondent ಕರಾವಳಿ
ಮಂಗಳೂರು, ಎ.24: ಮಂಗಳೂರು ಹೊರವಲಯದ ಬಜ್ಪೆ ಬಳಿಯ ಎಸ್ಇಝೆಡ್ ಏರಿಯಾದಲ್ಲಿ ಕೆಮಿಕಲ್ ಫ್ಯಾಕ್ಟರಿಗೆ ಬೆಂಕಿ ಹತ್ತಿಕೊಂಡಿದೆ. ಭಾರೀ ಪ್ರಮಾಣದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಪರಿಸರದಲ್ಲಿ ಭೀತಿ ಸೃಷ್ಟಿಯಾಗಿದೆ.

ಮುಂಬೈ ಮೂಲದ ಕ್ಯಾಟಸಿಂಥ್ ಸ್ಪೆಷಾಲಿಟಿ ಕೆಮಿಕಲ್ಸ್ ಎನ್ನುವ ಹೆಸರಿನ ಪರ್ಫ್ಯೂಮ್ ಉತ್ಪಾದಿಸುವ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಧ್ಯಾಹ್ನ 2.30 ರ ಸುಮಾರಿಗೆ ಘಟನೆ ನಡೆದಿದ್ದು ಒಮ್ಮೆಲೇ ಬೆಂಕಿಯ ಜ್ವಾಲೆಗೆ ಭಾರೀ ಪ್ರಮಾಣದಲ್ಲಿ ಹೊಗೆ ಆವರಿಸಿದೆ. ದೂರದಿಂದಲೇ ಕಪ್ಪು ಹೊಗೆ ಏಳುತ್ತಿರುವುದು ಕಂಡುಬಂದಿದ್ದು ಕೆಲವೇ ಕ್ಷಣದಲ್ಲಿ ವಿಡಿಯೋ ವೈರಲ್ ಆಗಿದೆ.


ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಕಾಣಿಸಿದೆ ಎನ್ನಲಾಗುತ್ತಿದ್ದು ಅಗ್ನಿಶಾಮಕ ಸಿಬಂದಿ ಬೆಂಕಿ ಶಮನದ ಕಾರ್ಯಾಚರಣೆ ಆರಂಭಿಸಿದ್ದಾರೆ. ವಾರಾಂತ್ಯದ ಲಾಕ್ಡೌನ್ ಆಗಿದ್ದರಿಂದ ಫ್ಯಾಕ್ಟರಿ ಬಂದ್ ಆಗಿತ್ತು. ಕಾರ್ಮಿಕರು ಕೂಡ ಹೆಚ್ಚಿರಲಿಲ್ಲ. ಕೆಲವು ಮಂದಿ ಮಾತ್ರ ಇದ್ದರು. ಸದ್ಯಕ್ಕೆ ಪ್ರಾಣಾಪಾಯದ ಬಗ್ಗೆ ಮಾಹಿತಿ ಇಲ್ಲ ಎಂದು ಎಸ್ಇಝೆಡ್ ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.



ಪೆಟ್ರೋಲಿಯಂ ಉತ್ಪನ್ನಗಳಿಂದ ಪರ್ಫ್ಯೂಮ್ ಇನ್ನಿತರ ಉಪ ಉತ್ಪನ್ನಗಳ ತಯಾರಿಕೆ ನಡೆದಿತ್ತು. ಈ ಕಂಪನಿ ನಿರ್ಮಾಣಗೊಂದು ಮೂರು ವರ್ಷ ಆಗಿದ್ದು ಕಳೆದ ಒಂದು ವರ್ಷದಿಂದ ಉತ್ಪಾದನೆ ಕಾರ್ಯ ನಡೆಯುತ್ತಿತ್ತು. ಮುಂಬೈ ಮೂಲದ ಕಾರ್ಮುಕರೇ ಹೆಚ್ಚಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ.
ರಫ್ತು ಉದ್ದೇಶಿತ ಕಂಪನಿಯಾಗಿದ್ದು 10ರಿಂದ 15 ಎಕ್ರೆ ವ್ಯಾಪ್ತಿಯಲ್ಲಿ ಫ್ಯಾಕ್ಟರಿಯಿದ್ದು ಹೇಗೆ ಬೆಂಕಿ ಕಾಣಿಸಿಕೊಂಡಿದೆ ಎನ್ನುವುದರ ಖಚಿತ ಮಾಹಿತಿಯಿಲ್ಲ. ಇದರ ಬೆಂಕಿ ಅಲ್ಲಿರುವ ಇತರ ಏಳೆಂಟು ಇದೇ ಮಾದರಿಯ ಕೆಮಿಕಲ್ ಫ್ಯಾಕ್ಟರಿಗಳಿಗೆ ಹರಡಿಕೊಳ್ಳುವ ಸಾಧ್ಯತೆ ಇದೆಯಾ ಎನ್ನುವ ಭಯ ಪರಿಸರದಲ್ಲಿ ಮೂಡಿದೆ.
Mangalore Sez Massive fire breaks out in perfume factory Catasynth Speciality Chemicals. The fire service team has reached the spot. No casualties reported
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm