ವೀಕೆಂಡ್ ಕರ್ಫ್ಯೂ ಅಂತ್ಯ ; ಹಾಫ್ ಲಾಕ್ಡೌನ್ ಮುಂದುವರಿಕೆ ! ವಾಹನ, ಬಸ್ ಸಂಚಾರ ಯಥಾಸ್ಥಿತಿ

25-04-21 10:31 pm       Mangaluru correspondent   ಕರಾವಳಿ

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಮುಗಿಯುತ್ತಿದ್ದಂತೆ ರಾಜ್ಯಾದ್ಯಂತ ಲಾಕ್ಡೌನ್ ಹೇರುವ ಮಾತುಗಳು ಕೇಳಿಬಂದಿದ್ದವು. ಆದರೆ, ಸಂಜೆ ವರೆಗೂ ರಾಜ್ಯ ಸರಕಾರ ಆ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ

ಮಂಗಳೂರು, ಎ.25: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಮುಗಿಯುತ್ತಿದ್ದಂತೆ ರಾಜ್ಯಾದ್ಯಂತ ಲಾಕ್ಡೌನ್ ಹೇರುವ ಮಾತುಗಳು ಕೇಳಿಬಂದಿದ್ದವು. ಆದರೆ, ಸಂಜೆ ವರೆಗೂ ರಾಜ್ಯ ಸರಕಾರ ಆ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. 

ಹಾಗಾಗಿ ನಾಳೆ ಮತ್ತೆ ಎಂದಿನ ರೀತಿ ಜನ ಮತ್ತು ವಾಹನಗಳ ಸಂಚಾರ ತೆರೆದುಕೊಳ್ಳಲಿದೆ. ಮಂಗಳೂರಿನಲ್ಲಿ ಎರಡು ದಿನ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ವಾಹನಗಳು ಓಡಾಟ ನಡೆಸಿರಲಿಲ್ಲ. ಖಾಸಗಿ ಮತ್ತು ಕೆಎಸ್ಸಾರ್ಟಿಸಿ ಬಸ್ ಗಳೂ ಸಂಚಾರ ನಡೆಸಿಲ್ಲ. ಆದರೆ, ಎ.26ರಿಂದ ಬಸ್ ಸೇರಿದಂತೆ ಟ್ಯಾಕ್ಸಿ ಮತ್ತು ಖಾಸಗಿ ವಾಹನಗಳು ಸಂಚಾರ ನಡೆಸಲಿವೆ. 

6 Shopping Places in Mangalore, Best Places for Mangalore Shopping

ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ಮಂಗಳೂರಿನಲ್ಲಿ ಖಾಸಗಿ ಬಸ್ ಗಳು ಎಂದಿನಂತೆ ಸಂಚಾರ ನಡೆಸಲಿವೆ ಎಂದು ಹೇಳಿದ್ದಾರೆ. 

ಇದೇ ವೇಳೆ, ನಾಳೆ ಬೆಳಗ್ಗೆ ಸಿಎಂ ಯಡಿಯೂರಪ್ಪ ಸಚಿವ ಸಂಪುಟದ ಸಭೆಯನ್ನು ಕರೆದಿದ್ದಾರೆ ಎನ್ನಲಾಗುತ್ತಿದೆ. ಸಚಿವರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ತಳೆಯಲಿದ್ದಾರೆ. ಬಹುತೇಕ ಬೆಂಗಳೂರು ನಗರದಲ್ಲಿ ಲಾಕ್ಡೌನ್ ಮುಂದುವರಿಸುವ ಸಾಧ್ಯತೆ ಇದೆ. 

ಮಂಗಳೂರು ಸೇರಿದಂತೆ ರಾಜ್ಯದ ಉಳಿದೆಲ್ಲ ಜಿಲ್ಲೆಗಳಲ್ಲಿ ಹಾಫ್ ಲಾಕ್ಡೌನ್ ಮುಂದುವರೆಯಲಿದೆ. ಆದರೆ, ಅಗತ್ಯ ಸಾಮಗ್ರಿಗಳ ಶಾಪ್ ಹೊರತುಪಡಿಸಿ ಉಳಿದೆಲ್ಲವು ಕ್ಲೋಸ್ ಆಗಲಿದೆ. ಜನ ಸಂಚಾರಕ್ಕೆ ತೊಂದರೆ ಇರುವುದಿಲ್ಲ.

Mangalore City Buses and Shops to resume tomorrow after weekend curfew. Only essential services to open from tomorrow as usual till May 4th.