ಬ್ರೇಕಿಂಗ್ ನ್ಯೂಸ್
26-04-21 09:38 pm Mangaluru correspondent ಕರಾವಳಿ
ಮಂಗಳೂರು, ಎ.26: ಕರ್ನಾಟಕದಲ್ಲಿ 14 ದಿನಗಳ ಲಾಕ್ಡೌನ್ ಹೇರಿಕೆಯಾದ ಬೆನ್ನಲ್ಲೇ ಉತ್ತರ ಭಾರತ ಮತ್ತು ಉತ್ತರ ಕರ್ನಾಟಕ ಮೂಲದ ಕಾರ್ಮಿಕರು ಮತ್ತೆ ಗುಳೇ ಹೊರಟಿದ್ದಾರೆ. ಸಂಜೆಯಾಗುತ್ತಲೇ ಕಾರ್ಮಿಕರು ಗಂಟು ಮೂಟೆ ಕಟ್ಟಿದ್ದು ಬಸ್, ರೈಲಿನಲ್ಲಿ ಹೊರಡಲು ಅಣಿಯಾಗಿದ್ದಾರೆ.
ಇಂದು ರಾತ್ರಿ 9.30 ಕ್ಕೆ ಮಂಗಳೂರಿನಿಂದ ದೆಹಲಿಗೆ ಹೊರಡುವ ರೈಲಿಗಾಗಿ ಕಾರ್ಮಿಕರು ಧಾವಿಸಿ ಬಂದಿದ್ದರು. ಆದರೆ, ಅದಾಗಲೇ ದೆಹಲಿಗೆ ತೆರಳುವ ಅಮರಾವತಿ ಎಕ್ಸ್ ಪ್ರೆಸ್ ರೈಲಿನ ಟಿಕೆಟ್ ಎಲ್ಲವೂ ಸೋಲ್ಡ್ ಔಟ್ ಆಗಿತ್ತು. ಕಾರ್ಮಿಕರು ಮಾತ್ರ ನಾವು ಅದೇ ರೈಲಿನಲ್ಲಿ ಹೋಗುತ್ತೇವೆಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಮಂಗಳೂರು ರೈಲು ನಿಲ್ದಾಣದಲ್ಲಿ ನೂರಾರು ಮಂದಿ ಸೇರಿದ್ದು ತಮ್ಮ ಮೂಟೆಗಳನ್ನು ಹೊತ್ತುಕೊಂಡು ಹೊರಟಿದ್ದಾರೆ. ನಿಲ್ದಾಣ ವೆರಾಂಡದಲ್ಲಿ ಮತ್ತು ಹೊರಗಿನ ರಸ್ತೆ ಬದಿಯಲ್ಲೇ ಕಾದು ಕುಳಿತಿದ್ದಾರೆ. ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರಾಗಿದ್ದು ಮಂಗಳೂರಿನಲ್ಲಿ ಕಟ್ಟಡ ಮತ್ತು ಟೈಲ್ಸ್ ಕೆಲಸ ಮಾಡುತ್ತಿದ್ದರು. ಈ ಬಗ್ಗೆ ಕೆಲಸಗಾರರನ್ನು ಪ್ರಶ್ನೆ ಮಾಡಿದರೆ, ಕೆಲಸ ಇಲ್ಲ. ಧಣಿಗಳು ನೀವು ಬೇಕಾದ್ರೆ ಊರಿಗೆ ಹೋಗಿ, ಕೆಲಸ ಮಾಡಿಸೋಕಾಗಲ್ಲ ಎಂದ್ರು. ನಾವು ಇಲ್ಲಿ ಉಳಿದುಕೊಂಡರೆ ನಮ್ಮದೇ ಖರ್ಚು ಮಾಡ್ಕೊಂಡು ಉಳೀಬೇಕಾಗುತ್ತದೆ. ಸುಮ್ನೆ ಖರ್ಚು. ಇನ್ನೆಷ್ಟು ದಿನಾಂತ ಹೀಗೆ ಉಳೀಬೇಕು ಎಂದು ಪ್ರಶ್ನೆ ಮಾಡುತ್ತಾರೆ. ನಮ್ಮಲ್ಲೂ ಲಾಕ್ಡೌನ್ ಇದೆಯಂತೆ. ಈ ರೈಲಲ್ಲಿ ಎಲ್ಲಿ ವರೆಗೆ ಹೋಗೋಕಾಗುತ್ತೆ ಅಲ್ಲೀ ವರೆಗೆ ಹೋಗ್ತೀವಿ ಎಂದ್ರು.
ಅಲ್ಲಿನ ಟಿಕೆಟ್ ಚಕ್ಕರ್ ಭಾಸ್ಕರ ಎಂಬವರ ಪ್ರಕಾರ, ಕಳೆದ ಬಾರಿ ಲಾಕ್ಡೌನ್ ಆಗಿದ್ದಾಗಲೂ ಇದೇ ರೀತಿ ವಲಸೆ ಕಾರ್ಮಿಕರು ಬಂದಿದ್ದರು. ಗುಳೇ ಎದ್ದು ಹೋದ ರೀತಿ ಊರು ಕಡೆ ನಡೆದಿದ್ದರು. ಅದರಲ್ಲಿ ಹೆಚ್ಚಿನ ಮಂದಿ ತಿರುಗಿ ಬಂದಿಲ್ಲ. ಒಂದಷ್ಟು ಹೊಸಬರು ಬಂದಿದ್ದರು. ಈಗ ಅವರೂ ತೆರಳುತ್ತಿದ್ದಾರೆ. ಮುಂದೇನೋ ಮಂಗಳೂರಿನ ಪರಿಸ್ಥಿತಿ ಎಂದು ಹಲುಬಿಕೊಂಡರು.
ರೈಲು ನಿಲ್ದಾಣ ಆವರಣದ ಆಟೋ ರಿಕ್ಷಾ ಚಾಲಕರು ಇದೇ ವೇಳೆ, ತಮಗಾದ ಪೊಲೀಸರ ಕಾಟದ ಬಗ್ಗೆ ದೂರಿಕೊಂಡರು. ರೈಲಿನ ಟಿಕೆಟ್ ಇದೆ ಅಂತ ತೋರಿಸಿದರೂ, ರಾತ್ರಿಯಲ್ಲಿ ಪೊಲೀಸರು ಕಿರಿಕಿರಿ ಮಾಡುತ್ತಾರೆ. ಹೆಚ್ಚಿನ ಮಂದಿ ಉತ್ತರ ಕರ್ನಾಟಕ ಭಾಗದ ಪೊಲೀಸರನ್ನು ರಾತ್ರಿಗೆ ಇರುತ್ತಾರೆ. ನಾವು ಪ್ರಯಾಣಿಕರನ್ನು ಬಿಟ್ಟು ಬರುತ್ತಿರುವುದು ಗೊತ್ತಿದ್ದರೂ, ವಿನಾಕಾರಣ ಬೈಯುತ್ತಾರೆ. ನಿಲ್ಲಿಸಿ, ನೀವ್ಯಾಕ್ರೀ ಆಟೋ ತೆಗೆದು ಕಾಟ ಕೊಡುತ್ತೀರಾ ಎಂದು ಪ್ರಶ್ನೆ ಮಾಡುತ್ತಾರೆ. ನಾವೇನು ಮಾಡಬೇಕು ಎನ್ನುತ್ತಾ ನೋವು ತೋಡಿಕೊಂಡರು.
ಇದೇ ವೇಳೆ, ಒಬ್ಬ ಆಟೋ ಚಾಲಕ ಲಾಕ್ಡೌನ್ ಕಾರಣ ತನಗಾದ ಪರಿಸ್ಥಿತಿಯ ಬಗ್ಗೆನೇ ಹೇಳಿಕೊಂಡಿದ್ದಾರೆ. ನನ್ನಲ್ಲಿ ಸ್ವಂತ ಕಾರು ಇತ್ತು. ಕಳೆದ ಬಾರಿ ಲಾಕ್ಡೌನ್ ಆಗಿ ಸಾಲ ಕಟ್ಟಲಾಗದೆ ಕಾರು ಹೋಯ್ತು. ಆನಂತರ ಆಟೋ ತೆಗೆದು ಜೀವನ ಮಾಡುತ್ತಿದ್ದೇನೆ. ರಾತ್ರಿ ಸ್ವಲ್ಪ ಬಾಡಿಗೆ ಸಿಗುತ್ತೆ ಅಂತ ರೈಲು ನಿಲ್ದಾಣದಲ್ಲಿ ಬಾಡಿಗೆ ಮಾಡುತ್ತೇವೆ. ಈಗ ಮತ್ತೆ ಲಾಕ್ಡೌನ್ ಬಂದಿದೆ, ಇದರ ಮಧ್ಯೆ ಪೊಲೀಸರು ಕಾಟ ಕೊಡುತ್ತಿದ್ದಾರೆ. ಜೀವನ ಹೇಗೆ ಸಾಗಿಸಬೇಕು ಎಂದು ವ್ಯವಸ್ಥೆಯ ಬಗ್ಗೆ ನೋವು ಹೇಳಿಕೊಂಡರು.
ಮಂಗಳೂರಿನ ಲಾಲ್ ಬಾಗ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿಯೂ ಅದೇ ಸ್ಥಿತಿ. ಉತ್ತರ ಕರ್ನಾಟಕ ಮೂಲದ ಕಾರ್ಮಿಕ ದಂಪತಿ ಮೂಟೆ ಹೊತ್ತುಕೊಂಡು ಧಾವಿಸಿ ಬರುತ್ತಿದ್ದರು. ಮಕ್ಕಳು, ಮಹಿಳೆಯರು, ಪುರುಷರು ಹೀಗೆ ಎಲ್ಲ ವಯೋಮಾನದವರೂ ಗುಳೇ ಹೊರಟಿದ್ದರು. ಕಳೆದ ಬಾರಿಯಾದ ಲಾಕ್ಡೌನ್ ಭಯದಿಂದ ಕಾರ್ಮಿಕರು ತಮ್ಮೂರಿಗೆ ಸೇರುವ ಧಾವಂತಕ್ಕೆ ಬಿದ್ದಿದ್ದಾರೆ.
Hundreds of daily wage labourers found in railway stations and bus stand leaving Mangalore city soon after lockdown news was spread.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm