ಜಿಲ್ಲೆಯಲ್ಲಿ 10 ಪೊಲೀಸ್ ಸಿಬಂದಿಗೆ ಕೊರೊನಾ ಸೋಂಕು ; ಭೀತಿಯ ನಡುವೆ ಕರ್ಫ್ಯೂ ಕರ್ತವ್ಯ !

27-04-21 11:56 am       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿದ್ದು 17 ಮಂದಿ ಪೊಲೀಸ್ ಸಿಬ್ಬಂದಿ ಕೊರೊನಾ ಪಾಸಿಟಿವ್ ಆಗಿದ್ದಾರೆ. 

Photo credits : crainsdetroit

ಮಂಗಳೂರು, ಎ.27: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿದ್ದು ಕರ್ಫ್ಯೂ ಕರ್ತವ್ಯದಲ್ಲಿದ್ದ 17 ಮಂದಿ ಪೊಲೀಸ್ ಸಿಬ್ಬಂದಿ ಕೊರೊನಾ ಪಾಸಿಟಿವ್ ಆಗಿದ್ದಾರೆ. 

ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಇಬ್ಬರು ಅಧಿಕಾರಿಗಳು ಸೇರಿದಂತೆ 10 ಪೊಲೀಸರಿಗೆ ಸೋಂಕು ತಗುಲಿದೆ. ಇನ್ಸ್ ಪೆಕ್ಟರ್ ಹಾಗು ಸಬ್ ಇನ್ಸ್ ಪೆಕ್ಟರ್ ಸೇರಿದಂತೆ 8 ಮಂದಿ ಸಿಬ್ಬಂದಿಗಳಾಗಿದ್ದಾರೆ. 10 ಕೊರೊನಾ ಪಾಸಿಟಿವ್ ಪ್ರಕರಣಗಳ ಪೈಕಿ 8 ಮಂದಿ ಹೋಂ ಐಸೊಲೇಷನ್ ಹಾಗೂ ಇಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 

ಕರ್ಫ್ಯೂ ಬಂದೋಬಸ್ತಿಗೆ ನಿಯೋಜನೆಗೊಂಡಿದ್ದ ಇಬ್ಬರು ಕೆ ಎಸ್ ಆರ್ ಪಿ ಪೊಲೀಸ್ ಸಿಬ್ಬಂದಿಗಳಿಗೆ ಸೋಂಕು ಆಗಿದೆ. ಮೂರು ಮಂದಿ ಜಿಲ್ಲಾ ಪೊಲೀಸರಿಗೂ ಕೊರೊನಾ ಸೋಂಕು ಆಗಿದ್ದು ಸೋಂಕಿನ ಆತಂಕದ ನಡುವೆ ಕರ್ಫ್ಯೂ ಪೊಲೀಸ್ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

Ten Police Personnel of Dakshina Kannada have been tested positive for Covid 19 including two from Police staff of Mangalore City Commission rate