ಕರ್ಫ್ಯೂ ನಡುವೆ ಬ್ರಹ್ಮರಥೋತ್ಸವ; ಎಫ್ಐಆರ್‌ಗೆ ಜಿಲ್ಲಾಧಿಕಾರಿ ಸೂಚನೆ

27-04-21 08:24 pm       Mangaluru correspondent   ಕರಾವಳಿ

ಕೋವಿಡ್ ನಿಯಮ ಉಲ್ಲಂಘಿಸಿ ಬ್ರಹ್ಮರಥೋತ್ಸವ ನಡೆಸಿದ ಮಂಗಳೂರಿನ ಸೋಮೇಶ್ವರ ಸೋಮನಾಥೇಶ್ವರ ದೇವಾಲಯದ ಆಡಳಿತ‌ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ವಿ ರಾಜೇಂದ್ರ ಸೂಚಿಸಿದ್ದಾರೆ.

ಮಂಗಳೂರು, ಏಪ್ರಿಲ್ 27: ಕೋವಿಡ್ ನಿಯಮ ಉಲ್ಲಂಘಿಸಿ ಬ್ರಹ್ಮರಥೋತ್ಸವ ನಡೆಸಿದ ಮಂಗಳೂರಿನ ಸೋಮೇಶ್ವರ ಸೋಮನಾಥೇಶ್ವರ ದೇವಾಲಯದ ಆಡಳಿತ‌ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ವಿ ರಾಜೇಂದ್ರ ಸೂಚಿಸಿದ್ದಾರೆ.

Phone In Programme With Dakshina Kannada DC Dr Rajendra K V: Check Out The  Details -

ಬ್ರಹ್ಮರಥೋತ್ಸವದ ವಿಡಿಯೋವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಮಂಗಳೂರು ತಹಶೀಲ್ದಾರ್‌ಗೆ ಸೂಚನೆ ‌ನೀಡಿದ್ದಾರೆ. ಅಲ್ಲದೆ ದೇವಾಲಯದ ಆಡಳಿತ ಮಂಡಳಿಯವರ ವಿರುದ್ಧ ಎಫ್‌ಐಆರ್ ದಾಖಲು ಮಾಡುವಂತೆ ನಿರ್ದೇಶನ ನೀಡಿದ್ದಾರೆ.

ಸರ್ಕಾರದ ಕಠಿಣ ನಿಯಮದ ನಡುವೆಯೂ ಬ್ರಹ್ಮಕಲಶೋತ್ಸವ ಮತ್ತು ಬ್ರಹ್ಮರಥೋತ್ಸವ ನಡೆಸಿದ ಆಡಳಿತ ಮಂಡಳಿ ವಿರುದ್ಧ ಸುಮ್ಮನ್ನಿದ್ದ ದೇವಾಲಯದ ಕಾರ್ಯನಿರ್ವಹಣಾಧಿಕಾರಿಗೂ ಶೋಕಾಸ್ ನೋಟಿಸ್ ನೀಡಲಾಗಿದೆ. ನಿಯಮ ಪಾಲನೆ ಮಾಡದಿದ್ದರೂ ಯಾಕೆ ಕ್ರಮ ಕೈಗೊಂಡಿಲ್ಲ ಎಂಬುವುದರ ಬಗ್ಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ.

ಸೋಮವಾರ ಮಂಗಳೂರಿನ ಸೋಮೇಶ್ವರ ಸೋಮನಾಥ ದೇವಸ್ಥಾನದಲ್ಲಿ ಬ್ರಹ್ಮರಥೋತ್ಸವ ಕಾರ್ಯಕ್ರಮ ನಡೆದಿತ್ತು. ಸರ್ಕಾರದ ಆದೇಶವನ್ನು ಮೀರಿಯೂ ದೇವಾಲಯದ ಆಡಳಿತ ಮಂಡಳಿ ಬ್ರಹ್ಮರಥೋತ್ಸವ ವನ್ನು ಮಾಡಿತ್ತು.

ಸೋಮೇಶ್ವರ: ಬ್ರಹ್ಮಕಲಶ ಸಂಪನ್ನದ ಬೆನ್ನಲ್ಲೇ ಕ್ಷೇತ್ರಕ್ಕೆ ಅಧಿಕಾರಿಗಳ ತಂಡ ಎಂಟ್ರಿ ! ಕೋವಿಡ್ ನೀತಿ ಉಲ್ಲಂಘನೆಗೆ ಗರಂ

Mangalore DC Rajendra Kumar has ordered to file FIR against Someshwara temple committee for breaking covid violation and conducting Brahma rathotsava.