ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 218 ಮಂದಿ ಗುಣಮುಖರಾಗಿದ್ದಾರೆ.

26-08-20 01:01 am       Mangalore Reporter   ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 218 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 247 ಮಂದಿಗೆ ಕೊರೊನಾ ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದಾರೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 247 ಮಂದಿಗೆ ಕೊರೊನಾ ದೃಢಪಟ್ಟಿದೆ. ಮೂವರು ಮೃತಪಟ್ಟಿದ್ದಾರೆ. ಒಟ್ಟು ಮೃತರ ಸಂಖ್ಯೆ 319ಕ್ಕೇರಿದೆ. ಮಂಗಳವಾರ 218 ಮಂದಿ ಗುಣಮುಖರಾಗಿದ್ದಾರೆ.

85 ಮಂದಿಗೆ ಸೋಂಕಿತರ ಸಂಪರ್ಕದಿಂದ, 72 ಮಂದಿ ಇನ್‌ಫ್ಲೂಯೆನ್ಜ ಲೈಕ್‌ ಇಲ್‌ನೆಸ್‌, 11 ಮಂದಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದ, ಓರ್ವನಿಗೆ ಡೊಮೆಸ್ಟಿಕ್‌ ಟ್ರಾವೆಲ್‌ ಮೂಲಕ ಸೋಂಕು ತಗಲಿದೆ. 78 ಮಂದಿಯ ಸೋಂಕಿನ ಮೂಲ ಪತ್ತೆಹಚ್ಚಲಾಗುತ್ತಿದೆ.

ಸೋಂಕಿತರಲ್ಲಿ 171 ಮಂದಿ ಮಂಗಳೂರು, 45 ಮಂದಿ ಬಂಟ್ವಾಳ, 6 ಮಂದಿ ಪುತ್ತೂರು, ನಾಲ್ವರು ಸುಳ್ಯ, 10 ಮಂದಿ ಬೆಳ್ತಂಗಡಿ ಹಾಗೂ 8 ಮಂದಿ ಹೊರ ಜಿಲ್ಲೆಯವವರು. ಇವರಲ್ಲಿ 62 ಮಂದಿ ಪುರುಷರು, 36 ಮಹಿಳೆಯರು ರೋಗ ಲಕ್ಷಣಗಳನ್ನು ಹೊಂದಿದ್ದಾರೆ. 98 ಮಂದಿ ಪುರುಷರು, 51 ಮಂದಿ ಮಹಿಳೆಯರು ಯಾವುದೇ ರೋಗ ಲಕ್ಷಣ ಹೊಂದಿಲ್ಲ. ಮೃತರಲ್ಲಿ ಓರ್ವ ಮಂಗಳೂರು, ಓರ್ವ ಪುತ್ತೂರು ಹಾಗೂ ಓರ್ವ ಇತರ ಜಿಲ್ಲೆಯವರಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 10,778 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಪೈಕಿ 8,136 ಮಂದಿ ಬಿಡುಗಡೆಯಾಗಿದ್ದಾರೆ. 2,323 ಮಂದಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.