ನಾಪತ್ತೆಯಾಗಿದ್ದ ತಮಿಳನಾಡಿನ ಬೋಟ್ ಪಾಕಿಸ್ಥಾನ ಬಳಿ ಪತ್ತೆ ; 11 ಮೀನುಗಾರರ ರಕ್ಷಣೆ

29-04-21 12:57 pm       Headline Karnataka News Network   ಕರಾವಳಿ

ಭಾರತೀಯ ಕೋಸ್ಟ್ ಗಾರ್ಡ್ ಅರಬ್ಬೀ ಸಮುದ್ರದಲ್ಲಿ ಮತ್ತೊಂದು ಅಮೋಘ ಕಾರ್ಯಾಚರಣೆಯ ಮೂಲಕ ತಮಿಳುನಾಡಿನ ಮೀನುಗಾರರನ್ನು ರಕ್ಷಣೆ ಮಾಡಿದೆ.

ಮಂಗಳೂರು, ಏ.29: ಭಾರತೀಯ ಕೋಸ್ಟ್ ಗಾರ್ಡ್ ಅರಬ್ಬೀ ಸಮುದ್ರದಲ್ಲಿ ಮತ್ತೊಂದು ಅಮೋಘ ಕಾರ್ಯಾಚರಣೆಯ ಮೂಲಕ ದುರಂತಕ್ಕೀಡಾಗಿದ್ದ ತಮಿಳುನಾಡಿನ ಮೀನುಗಾರರನ್ನು ರಕ್ಷಣೆ ಮಾಡಿದೆ.

ಕಳೆದ ಎಪ್ರಿಲ್ 6ರಂದು ತಮಿಳುನಾಡಿನ ತೆಂಗಪಟ್ಟಣಂ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆಂದು 11 ಮೀನುಗಾರರ ತಂಡ ಅರಬ್ಬೀ ಸಮುದ್ರದ ಕೇರಳ ಪಶ್ಚಿಮ ಭಾಗದ ಆಳ ಸಮುದ್ರಕ್ಕೆ ತೆರಳಿತ್ತು.

ಈ ವೇಳೆ ಬೇರೆ ಎಲ್ಲಾ ಮೀನುಗಾರಿಕಾ ಬೋಟ್‌ಗಳೊಂದಿಗೆ ಸಂಪರ್ಕ ಕಳೆದುಕೊಂಡ ಬೋಟ್ ದಿಕ್ಕು ತಪ್ಪಿ ಬೇರೆ ಕಡೆ ಸಂಚರಿಸಿತ್ತು. ಗಾಳಿಯ ಅಬ್ಬರಕ್ಕೆ ಮೀನುಗಾರರೂ ಕಂಗಲಾಗಿದ್ದರು. ಇತ್ತ ಮೀನುಗಾರಿಕಾ ಬೋಟ್ ಸಂಪರ್ಕಕ್ಕೆ ಸಿಗದೆ, ಬೋಟ್ ಸಮುದ್ರದಲ್ಲಿ ಮುಳುಗಿರುವ ಶಂಕೆ ಎಲ್ಲರಲ್ಲೂ ವ್ಯಕ್ತವಾಗಿತ್ತು.

ಇದೇ ವೇಳೆ ಇಂಡಿಯನ್ ಕೋಸ್ಟ್ ಗಾರ್ಡ್ ಗೆ ಮಾಹಿತಿ ನೀಡಲಾಗಿದ್ದು, ಹಡಗಿನ ಮೂಲಕ ಕಾರ್ಯಚರಣೆ ಆರಂಭಿಸಿದ್ದಾರೆ. ಕೊನೆಗೆ ಗೋವಾ ಬಳಿಯಿಂದ 110 ಕಿಲೋ ಮೀಟರ್ ದೂರದಲ್ಲಿ ಸಮುದ್ರ ಮಧ್ಯೆ ಬೋಟ್ ಪತ್ತೆಯಾಗಿದ್ದು, ಏಪ್ರಿಲ್ 24 ರಂದು ಲಕ್ಷ ದ್ವೀಪದಿಂದ 370 ಕಿಲೋ ಮೀಟರ್ ದೂರದಿಂದ ಕರೆತರಲಾಗುತ್ತಿದೆ. 

ಇಂಡಿಯನ್ ಕೋಸ್ಟ್ ಗಾರ್ಡ್‌ನ ಸಮುದ್ರ ಪ್ರಹರಿ ಎಂಬ ಹೆಸರಿನ ಹಡಗಿನ ಮೂಲಕ ಕಾರ್ಯಚರಣೆ ನಡೆಸಲಾಗಿತ್ತು. ಮೀನುಗಾರಿಕಾ ಬೋಟ್ ಪಾಕಿಸ್ಥಾನಕ್ಕೆ ಸೇರಿದ ಸಮುದ್ರ ವ್ಯಾಪ್ತಿಯಲ್ಲಿ ಇದ್ದ ಕಾರಣ ರಕ್ಷಣಾ ಕಾರ್ಯಚರಣೆಗೆ ಕರಾಚಿಯಿಂದ ನೆರವು ಪಡೆಯಲಾಗಿತ್ತು. ಮೀನುಗಾರಿಕಾ ಬೋಟ್ ಮೇ ೩ರ ಸುಮಾರಿಗೆ  ತಮಿಳುನಾಡು ತಲುಪುವ ಸಾಧ್ಯತೆ ಇದೆ.

The Indian Coast Guard has located 11 Indian fishermen from Tamil Nadu who went missing around April 24, nearly 1,100 km from Goa. The boat had set sail on April 6 for deep sea fishing from the Thengapatnam Fishing harbor in Tamil Nadu for 30 days.