ಏರ್ಪೋರ್ಟ್ ಭದ್ರತಾ ಸಿಬಂದಿಗೆ ಸೋಂಕು ; 12 ಮಂದಿಗೆ ಪಾಸಿಟಿವ್

30-04-21 05:29 pm       Mangaluru correspondent   ಕರಾವಳಿ

ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ನೋಡಿಕೊಳ್ಳುತ್ತಿರುವ ಸಿಐಎಸ್ಎಫ್ ಸಿಬಂದಿಗೆ ಕೊರೊನಾ ಸೋಂಕು ತಗಲಿದೆ.

ಮಂಗಳೂರು, ಎ.30: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ನೋಡಿಕೊಳ್ಳುತ್ತಿರುವ ಸಿಐಎಸ್ಎಫ್ ಸಿಬಂದಿಗೆ ಕೊರೊನಾ ಸೋಂಕು ತಗಲಿದೆ. 12 ಮಂದಿಗೆ ಸೋಂಕು ಕಾಣಿಸಿಕೊಂಡಿದೆ ಎನ್ನುವ ಮಾಹಿತಿ ಲಭಿಸಿದೆ.

ಮಂಗಳೂರಿನಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಒಂದು ಯುನಿಟ್ ಚಾಲ್ತಿಯಲ್ಲಿದೆ. ಅದರಲ್ಲಿ 270 ಮಂದಿ ಯೋಧರಿದ್ದು, ವಿವಿಧ ಕಡೆಗಳಲ್ಲಿ ಭದ್ರತೆ ನೋಡಿಕೊಳ್ಳುತ್ತಿದ್ದಾರೆ.

Centre okays leasing out Mangalore airport | Deccan Herald

ಎನ್ಎಂಪಿಟಿ ಬಂದರು, ಎಂಸಿಎಫ್, ಎಂಆರ್ ಪಿಎಲ್, ಮಂಗಳೂರು ಏರ್ಪೋರ್ಟ್ ಹೀಗೆ ಪ್ರಮುಖ ಕಂಪನಿಗಳಲ್ಲಿ ಸಿಐಎಸ್ಎಫ್ ಭದ್ರತೆ ಹೊಂದಿದ್ದು, ಪಣಂಬೂರಿನಲ್ಲಿ ಕ್ವಾಟ್ರಸ್ ಹೊಂದಿದ್ದಾರೆ. ಅಲ್ಲಿಂದಲೇ ಸರದಿಯಂತೆ ನಿಯೋಜನೆ ಆಗುತ್ತಿದ್ದು, ಇವೆಲ್ಲವನ್ನೂ ನಿರ್ವಹಿಸಲು ಅದಕ್ಕೊಬ್ಬರು ಕಮಾಂಡರ್ ಇದ್ದಾರೆ.

ಇದೀಗ ಏರ್ಪೋರ್ಟಿನಲ್ಲಿ ಕರ್ತವ್ಯ ನಿರ್ವಹಿಸುವ ಸಿಬಂದಿಗೆ ಸೋಂಕು ತಗಲಿದ್ದು, ಅವರ ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಇಡಲಾಗಿದೆ. ಜೊತೆಗೆ ಇನ್ನೂ ಹಲವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ತಪಾಸಣೆಯಲ್ಲಿ ಇನ್ನಷ್ಟು ಮಂದಿಗೆ ಪಾಸಿಟಿವ್ ಕಂಡುಬಂದರೆ, ಭದ್ರತಾ ಪಡೆಯಲ್ಲಿ ಆತಂಕ ಕಾಡಲಿದೆ.

12 CISF staffs of Mangalore international airport tested psotive for covid 19.