ಬ್ರೇಕಿಂಗ್ ನ್ಯೂಸ್
01-05-21 05:04 pm Mangalore Correspondent ಕರಾವಳಿ
ಮಂಗಳೂರು, ಮೇ 1: ಲಾಕ್ಡೌನ್ ಸಂದರ್ಭದಲ್ಲಿ ಪೊಲೀಸರಿಗೆ ತಲೆನೋವು ಹೆಚ್ಚು. ಎಷ್ಟು ಜಾಗ್ರತೆ ವಹಿಸಿದ್ರೂ ಸೋಂಕು ಬರದು ಎನ್ನುವುದಕ್ಕಾಗಲ್ಲ. ಹೀಗಾಗಿ ಯಾವುದೇ ಸಂದರ್ಭದಲ್ಲೂ ಮಾಸ್ಕ್ ಹಾಕದೇ ಇರುವಂತಿಲ್ಲ ಎಂದು ಗೈಡ್ ಲೈನ್ಸ್ ಇದೆ. ಇದಕ್ಕಾಗಿ ಪೊಲೀಸರಿಗೆ ತಮ್ಮ ಸಮವಸ್ತ್ರದ ರೀತಿಯದ್ದೇ ಖಾಕಿ ಬಣ್ಣದ ಮಾಸ್ಕ್ ರೆಡಿ ಮಾಡಲು ಇಲಾಖೆ ಮುಂದಾಗಿದ್ದು, ಈ ಕೆಲಸಕ್ಕೆ ಕುಟುಂಬಸ್ಥರೇ ಮುಂದೆ ಬಂದಿದ್ದಾರೆ. ಮಂಗಳೂರಿನ ಪೊಲೀಸ್ ಕ್ವಾಟ್ರಸ್ ನಲ್ಲಿ ಪೊಲೀಸರ ಪತ್ನಿಯರು ಮಾಸ್ಕ್ ರೆಡಿ ಮಾಡಲು ಆರಂಭಿಸಿದ್ದಾರೆ.
ನಗರದ ಪಾಂಡೇಶ್ವರದಲ್ಲಿರುವ ಪೊಲೀಸ್ ಕ್ವಾಟ್ರಸ್ ಬಳಿ ಜ್ಞಾನೋದಯ ಮಹಿಳಾ ಮಂಡಲದ ಸದಸ್ಯರು ಸೇರಿ ಮಾಸ್ಕ್ ರೆಡಿ ಮಾಡುತ್ತಿದ್ದಾರೆ. ಕಳೆದ ಐದು ದಿನಗಳಿಂದ ಮಾಸ್ಕ್ ರೆಡಿಯಾಗುತ್ತಿದ್ದು, ಎಂಟು ಮಂದಿ ತೊಡಗಿಸಿಕೊಂಡಿದ್ದಾರೆ. ಭಾಗೀರಥಿ, ಸುಶೀಲಾ, ಸುನೀತಾ, ಪೂರ್ಣಿಮಾ, ಪೂರ್ಣಿಮಾ ರವಿಕುಮಾರ್, ನೇತ್ರಾವತಿ, ತನುಜಾ ಮತ್ತು ಆಶಾ ಈ ಕೆಲಸದಲ್ಲಿ ತೊಡಗಿಸಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸಿಬಂದಿಗೆ ಹತ್ತು ಸಾವಿರ ಮಾಸ್ಕ್ ರೆಡಿ ಮಾಡಲು ಕಮಿಷನರ್ ಗುತ್ತಿಗೆ ನೀಡಿದ್ದಾರೆ.
ಎ.24ರಿಂದ ಮಾಸ್ಕ್ ತಯಾರಿಯಲ್ಲಿ ತೊಡಗಿರುವ ಮಹಿಳೆಯರು ದಿನದಲ್ಲಿ 75-80 ಮಾಸ್ಕ್ ರೆಡಿ ಮಾಡುತ್ತಾರೆ. ಈವರೆಗೆ 3 ಸಾವಿರದಷ್ಟು ಮಾಸ್ಕ್ ರೆಡಿಯಾಗಿದೆ. ಮಾಸ್ಕ್ ರೆಡಿ ಮಾಡುತ್ತಿರುವ ಜಾಗಕ್ಕೆ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿ, ಕುಟುಂಬಸ್ಥರ ಕೆಲಸದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಸಾಮಾನ್ಯವಾಗಿ ಟೈಲರಿಂಗ್ ತಿಳಿದವರು ಅದರಿಂದ ತಮ್ಮ ಖರ್ಚಿಗಾಗುವಷ್ಟು ಮಾಡಿಕೊಳ್ಳುತ್ತಾರೆ. ಆದರೆ, ಲಾಕ್ಡೌನ್ ಸಂದರ್ಭದಲ್ಲಿ ಅವರಿಗೆ ಯಾವುದೇ ಕೆಲಸ ಸಿಗಲ್ಲ. ಕಮಿಷನರೇಟ್ ವ್ಯಾಪ್ತಿಯಲ್ಲಿ 2 ಸಾವಿರ ಪೊಲೀಸರಿದ್ದು ತಲಾ 5 ಮಾಸ್ಕ್ ನೀಡಲು ನಿರ್ಧರಿಸಿದ್ದೇವೆ. ಈ ವೇಳೆ ನಮ್ಮ ಸಿಬಂದಿಯ ಕುಟುಂಬಸ್ಥರೇ ಮಾಸ್ಕ್ ರೆಡಿ ಮಾಡಲು ಸ್ವಯಂ ಆಗಿ ಮುಂದೆ ಬಂದಿದ್ದಾರೆ ಎಂದರು ಕಮಿಷನರ್.
ಖಾಕಿ ಸಮವಸ್ತ್ರ ಹಾಕ್ಕೊಂಡ ಪೊಲೀಸರು ಒಂದೊಂದು ಬಣ್ಣದ ಮಾಸ್ಕ್ ಹಾಕ್ಕೊಳ್ಳುವುದು ಚೆನ್ನಾಗಿ ಕಾಣಲ್ಲ. ನಾವು ಖಾಕಿ ಬಟ್ಟೆಯನ್ನು ಇಲಾಖೆಯಿಂದ ಒದಗಿಸುತ್ತಿದ್ದು, ಮಹಿಳೆಯರು ಅದರಿಂದ ಮಾಸ್ಕ್ ತಯಾರಿಸುತ್ತಿದ್ದಾರೆ. ಮೊದಲಿಗೆ ಹತ್ತು ಸಾವಿರದ ಟಾರ್ಗೆಟ್ ಕೊಟ್ಟಿದ್ದೇವೆ. ಅದು ಪೂರ್ತಿಯಾದ ಬಳಿಕ ಇತರ ಕಡೆಯಿಂದ ಆರ್ಡರ್ ಪಡೆಯುತ್ತೇವೆ. ಫಲಾಪೇಕ್ಷೆ ಇಲ್ಲದೆ ಮಾಡಿಕೊಡುತ್ತೇವೆ ಎಂದರೂ, ನಾವು ಹಾಗೇ ಬಿಡುವುದಿಲ್ಲ. ಗೌರವಧನ ರೂಪದಲ್ಲಿ ಒಂದಷ್ಟು ಮೊತ್ತ ಕೊಡುತ್ತೇವೆ ಎಂದು ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.
ಇದಲ್ಲದೆ, ದ.ಕ. ಜಿಲ್ಲೆಯಲ್ಲಿ ಎಸ್ಪಿ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಪೊಲೀಸರಿಗಾಗಿ ಐದು ಸಾವಿರ ಮಾಸ್ಕ್ ರೆಡಿ ಮಾಡಲು ಆರ್ಡರ್ ಬಂದಿದೆ. ಉಡುಪಿ ಜಿಲ್ಲೆಯಿಂದಲೂ 5 ಸಾವಿರ ಮಾಸ್ಕ್ ಬೇಕೆಂದು ಕೇಳಿಕೊಂಡಿದ್ದಾರೆ. ಮಂಗಳೂರಿನ ಅಗತ್ಯದ ಮಾಸ್ಕ್ ರೆಡಿಯಾದ ಬಳಿಕ ಹೊರಗಿನ ಆಫರ್ ಪಡೆಯಲಿದ್ದಾರೆ.
Families of police personnel serving under the Mangaluru city police commissioner have taken up the initiative of stitching washable masks for 2,000 police personnel at police lane, Pandeshwar.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm