ಬ್ರೇಕಿಂಗ್ ನ್ಯೂಸ್
01-05-21 05:28 pm Mangalore Correspondent ಕರಾವಳಿ
ಮಂಗಳೂರು, ಮೇ 1: ನದಿಗೆ ತ್ಯಾಜ್ಯ ಎಸೆಯಬಾರದು, ನೀರು ಮಲಿನ ಮಾಡಬಾರದೆಂದು ಅಭಿಯಾನ ನಡೆಸಲಾಗುತ್ತಿದೆ. ಆದರೆ, ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಟೂರಿಸ್ಟ್ ಕಾರಿನಲ್ಲಿ ಬಂದ ಪ್ರವಾಸಿಗರು ಕಾರಿನಿಂದ ಇಳಿದು ತ್ಯಾಜ್ಯದ ಪ್ಯಾಕೆಟನ್ನು ಎಸೆಯುವ ವಿಡಿಯೋ ಸೆರೆಯಾಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಸೇತುವೆಯಲ್ಲಿ ಕಾರಿನಿಂದ ಇಳಿದ ಮಹಿಳೆಯೋರ್ವರು ತಾನು ತಂದಿದ್ದ ತ್ಯಾಜ್ಯದ ಪೊಟ್ಟಣವನ್ನ ಸೇತುವೆ ಉದ್ದಕ್ಕೆ ಕಟ್ಟಿರುವ ತಡೆಬೇಲಿಯ ಮೇಲಿಂದ ಎಸೆದಿರುವ ಘಟನೆ ನಡೆದಿದ್ದು ಅದರ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
KA 03 NB 4648 ನೋಂದಣಿಯ ಕಾರು ನೇತ್ರಾವತಿ ನದಿಯ ಹೊಸ ಸೇತುವೆಯಲ್ಲಿ ನಿಂತಿದ್ದು ಇಬ್ಬರು ಮಹಿಳೆಯರು ಕಾರಿನಿಂದ ಇಳಿದಿದ್ದಾರೆ. ಅದರಲ್ಲಿ ಮಧ್ಯ ವಯಸ್ಕ ಮಹಿಳೆಯೋರ್ವರು ಧಮ್ ಲಗಾಕೆ ಐಸಾ ಅಂತ ಸೇತುವೆಯಲ್ಲಿ ಆತ್ಮಹತ್ಯೆ ತಡೆಗೆಂದು ಹಾಕಲಾಗಿರುವ ಕಬ್ಬಿಣದ ಬೇಲಿಯ ಮೇಲಕ್ಕೆ ತ್ಯಾಜ್ಯದ ಪೊಟ್ಟಣ ಎಸೆಯುತ್ತಿರುವುದನ್ನು ಹಿಂದಿನ ವಾಹನದವರು ಚಿತ್ರೀಕರಿಸಿ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು ನೇತ್ರಾವತಿ ನದಿಯನ್ನ ಬೇಕು, ಬೇಕಂತಲೇ ಮಲಿನಗೊಳಿಸುತ್ತಿರುವ ಸಮಾಜದ ದೊಡ್ಡ ಮನುಷ್ಯರೆಂದುಕೊಂಡಿರುವ ಮಂದಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ.
ಉಳ್ಳಾಲ ಕೋಟೆಪುರದ ಸಮುದ್ರ ತೀರದಲ್ಲಿ ಈ ಹಿಂದೆ ಲಾರಿಯೊಂದರಲ್ಲಿ ಕಸ ತಂದು ಸುರಿದಿದ್ದು ಇದನ್ನು ಸ್ಥಳೀಯರು ಚಿತ್ರೀಕರಿಸಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಪರಿಣಾಮ ಕಸ ಸುರಿದ ಲಾರಿಯ ವಿರುದ್ಧ ಉಳ್ಳಾಲ ನಗರಸಭೆ ಕ್ರಮ ಜರುಗಿಸಿ ಲಾರಿಯನ್ನ ಜಪ್ತಿ ಮಾಡಿತ್ತು.
ಸದ್ಯ ನೇತ್ರಾವತಿಯಲ್ಲಿ ಕಸ ಎಸೆದ ಪ್ರಕರಣ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ. ನಗರ ಪಾಲಿಕೆ ಕಮೀಷನರ್ ಇದರ ವಿರುದ್ಧ ಏನು ಕ್ರಮ ಕೈಗೊಳ್ಳತ್ತಾರೆಂದು ಕಾದು ನೋಡಬೇಕಿದೆ.
Video:
A video of a lady throwing garbage over the fence of Netravati bridge is going viral on social media. In the said viral video, a lady is seen coming out of a car bearing registration number KA 03 NB 4648 and hurling a plastic full of garbage over the fence into Netravati river.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am