MRPL ನಿಂದ ವೆನ್ಲಾಕ್ ಸೇರಿ ಐದು ಕಡೆ ಆಕ್ಸಿಜನ್ ಪ್ಲಾಂಟ್ ; ಮಂಗಳೂರಿನಲ್ಲಿ ಜೂನ್ ವೇಳೆಗೆ ಕಾರ್ಯಾರಂಭ

04-05-21 01:07 am       Mangaluru Correspondent   ಕರಾವಳಿ

ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದಾಗಿ ಆಮ್ಲಜನಕದ ಕೊರತೆ ಎದುರಾಗಿರುವುದರಿಂದ ಎಂಆರ್ ಪಿಎಲ್ ವತಿಯಿಂದ ರಾಜ್ಯದಲ್ಲಿ ಮಂಗಳೂರು ಸೇರಿದಂತೆ ಐದು ಕಡೆ ಆಕ್ಸಿಜನ್ ಪ್ಲಾಂಟ್ ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಮಂಗಳೂರು, ಮೇ 3: ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದಾಗಿ ಆಮ್ಲಜನಕದ ಕೊರತೆ ಎದುರಾಗಿರುವುದರಿಂದ ಎಂಆರ್ ಪಿಎಲ್ ವತಿಯಿಂದ ರಾಜ್ಯದಲ್ಲಿ ಮಂಗಳೂರು ಸೇರಿದಂತೆ ಐದು ಕಡೆ ಆಕ್ಸಿಜನ್ ಪ್ಲಾಂಟ್ ಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ನಿಮಿಷಕ್ಕೆ 930 ಲೀಟರ್ ಆಮ್ಲಜನಕ ಉತ್ಪಾದಿಸುವ ಪ್ಲಾಂಟ್ ಸ್ಥಾಪಿಸಲು ಎಂಆರ್ ಪಿಎಲ್ ಮುಂದಾಗಿದೆ. ಶೆಲ್ ಕಂಪನಿ ಜೊತೆಗೆ ಜಂಟಿ ಪಾಲುದಾರಿಕೆಯಲ್ಲಿ ಪ್ಲಾಂಟ್ ಅಸ್ತಿತ್ವಕ್ಕೆ ಬರಲಿದ್ದು ಇದಕ್ಕಾಗಿ 75 ಲಕ್ಷ ರೂ. ಖರ್ಚು ಬೀಳಲಿದೆ. ಈ ಪ್ಲಾಂಟ್ ಇದೇ ಜೂನ್ ತಿಂಗಳಲ್ಲಿ ಕಾರ್ಯಾರಂಭ ಮಾಡಲಿದೆ.

ಪ್ಲಾಂಟ್ ನಿರ್ಮಾಣಕ್ಕಾಗಿ ಎಂಆರ್ ಪಿಎಲ್ ಈಗಾಗ್ಲೇ 1.12 ಕೋಟಿ ರೂ. ವೆಚ್ಚದಲ್ಲಿ ವಿವಿಧ ಸಲಕರಣೆಗಳನ್ನು ತರಿಸಲು ಹೈಗ್ರೊನಿಕ್ಸ್ ಪ್ರೈವೇಟ್ ಲಿ.ಗೆ ಗುತ್ತಿಗೆ ಕೊಟ್ಟಿದೆ. ಈ ಪ್ಲಾಂಟ್ ನಲ್ಲಿ ಕಂಪ್ರೆಸರ್, ಪಿಎಸ್ ಎ ಟ್ಯಾಂಕ್, ಫಿಲ್ಟರ್, ಟ್ಯಾಂಕ್ಸ್, ಡ್ರೈಯರ್ ಇರಲಿದೆ.

ಇದಲ್ಲದೆ ಎಂಆರ್ ಪಿಎಲ್ ವತಿಯಿಂದ ರಾಜ್ಯದ ಇತರ ನಾಲ್ಕು ಕಡೆ ಆಕ್ಸಿಜನ್ ಪ್ಲಾಂಟ್ ಬರಲಿದ್ದು ಇದಕ್ಕಾಗಿ ಅದರ ಮಾತೃಸಂಸ್ಥೆ ಓಎನ್ ಜಿಸಿ ಕೈಜೋಡಿಸಲಿದೆ. ಓಎನ್ ಜಿಸಿಯಿಂದಲೇ ಪ್ರತ್ಯೇಕ ಎರಡು ಆಕ್ಸಿಜನ್ ಪ್ಲಾಂಟ್ ಅಸ್ತಿತ್ವಕ್ಕೆ ಬರಲಿದೆ.

Mangalore Refinery and Petrochemicals Ltd ( MRPL) Will be establishing 5 oxygen generation plants in Dakshina Kannada and the rest of Karnataka to support the state Governments fight against the second wave of the Covid pandemic.