ಬ್ರೇಕಿಂಗ್ ನ್ಯೂಸ್
04-05-21 02:14 pm Udupi Correspondent ಕರಾವಳಿ
Photo credits : newindianexpress
ಉಡುಪಿ, ಮೇ 4 : ಕೊರೊನಾ ಲಾಕ್ಡೌನ್ ಜನಸಾಮಾನ್ಯರ ಮೇಲೆ ಬರೆ ಎಳೆದಿದೆ. ಕರಾವಳಿ ಪಾಲಿಗೆ ಆರ್ಥಿಕತೆಯ ಬೆನ್ನೆಲುಬಾಗಿರುವ ಮೀನುಗಾರಿಕಾ ವಲಯಕ್ಕೆ ಭಾರೀ ನಷ್ಟ ಉಂಟು ಮಾಡಿದೆ.
ವರ್ಷ ಪೂರ್ತಿ ವಹಿವಾಟು ನಡೆಸುವ ಮಲ್ಪೆಯಲ್ಲಿ ಮೀನುಗಾರಿಕೆ ಚಟುವಟಿಕೆಗಳೇ ಸ್ಥಗಿತಗೊಂಡಿವೆ. ಲಾಕ್ಡೌನ್ ಬಳಿಕ ಮೀನುಗಾರಿಕೆಗೆ ಬಹುತೇಕ ಬ್ರೇಕ್ ಬಿದ್ದಿದೆ. ಬೆಳಗ್ಗಿನ ವೇಳೆ ಮಾತ್ರ ಮೀನುಗಾರಿಕೆ ಚಟುವಟಿಕೆ ನಡೆಸಬೇಕೆಂಬ ಸೂಚನೆಯಿಂದಾಗಿ ಮೀನುಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ.
ಸರ್ಕಾರದ ಆದೇಶ ಪ್ರಕಾರ ಬೆಳಗ್ಗೆ 6 ರಿಂದ 10 ಗಂಟೆ ಒಳಗೆ ಅಗತ್ಯ ವಸ್ತುಗಳನ್ನು ಖರೀದಿಸಬೇಕಾಗಿದೆ. ಅದರಂತೆ 10 ಗಂಟೆ ಹೊತ್ತಿಗೆ ಮಲ್ಪೆ ಬಂದರನ್ನು ಖಾಲಿ ಮಾಡಬೇಕಾಗುತ್ತದೆ. ಮೀನು ಹೊತ್ತು ತರುವ ಬೋಟುಗಳನ್ನು ಖಾಲಿ ಮಾಡುವುದಕ್ಕಷ್ಟೇ ಸಮಯ ದೊರಕುತ್ತಿದೆ. ಮರುದಿನದ ಮೀನುಗಾರಿಕೆಗೆ ತೆರಳಲು ಸಿದ್ಧತೆ ಮಾಡಿಕೊಳ್ಳುವುದಾಗಲೀ, ಕಾರ್ಮಿಕರನ್ನು ಜೋಡಿಸುವುದಾಗಲೀ ಸಾಧ್ಯವಾಗದೆ ಸಮಸ್ಯೆಗೆ ಸಿಲುಕುವಂತಾಗಿದೆ.
ಬೋಟುಗಳಿಗೆ ಐಸ್ ತುಂಬಿಸುವುದು, ಬಲೆ, ಬೋಟ್ ರಿಪೇರಿ ಮಾಡಿಕೊಳ್ಳುವುದು ಮುಂತಾದ ಚಟುವಟಿಕೆಗಳಿಗೆ ಅವಕಾಶ ಇಲ್ಲದಿರುವುದು ಮತ್ತೊಂದು ಅಡ್ಡಿಯಾಗಿದೆ. ಹೀಗಾಗಿ ಮೀನುಗಾರಿಕೆಯನ್ನು ಕೂಡ ಕೃಷಿ ಎಂದು ಪರಿಗಣಿಸಿ ಹೆಚ್ಚಿನ ಸಮಯ ನೀಡಿ, ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.
ತರಕಾರಿ ಮಾರಾಟಕ್ಕೆ ಸಂಜೆಯ ವರೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಮೀನು ಮಾರುಕಟ್ಟೆಗಳು 10 ಗಂಟೆಗೆ ಬಂದ್ ಆಗುತ್ತಿರುವುದು ಕೂಡ ಮತ್ತೊಂದು ಸಂಕಷ್ಟಕ್ಕೆ ಕಾರಣವಾಗಿದೆ. ಕಡಲಿನಿಂದ ತಂದ ಮೀನು ಮಾರುಕಟ್ಟೆಗೆ ತಲುಪುವಷ್ಟರಲ್ಲಿ ಬಂದ್ ಆಗುವುದರಿಂದ ಮೀನು ಗ್ರಾಹಕರಿಗೆ ತಲುಪುತ್ತಿಲ್ಲ.
ಕರಾವಳಿಯ ಆರ್ಥಿಕತೆಗೆ ಇದರಿಂದ ಭಾರಿ ಹೊಡೆತ ಬಿದ್ದಿದೆ. ಕನಿಷ್ಠ ಪಕ್ಷ 12 ಗಂಟೆಯ ವರೆಗಾದರೂ ಮೀನುಗಾರಿಕಾ ಚಟುವಟಿಕೆ ನಡೆಸಲು ಅವಕಾಶ ಕೊಡಿ ಎಂದು ಮೀನುಗಾರ ಮಹಿಳೆಯರು ಒತ್ತಾಯಿಸಿದ್ದಾರೆ.
ಈಗಾಗಲೇ ಡೀಸೆಲ್ ಸಬ್ಸಿಡಿ ಸಿಗದೇ ಬೋಟ್ ಮಾಲಕರು ಸಂಕಷ್ಟದಲ್ಲಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಹತ್ತಾರು ಕೋಟಿ ರೂಪಾಯಿ ಡೀಸೆಲ್ ಸಬ್ಸಿಡಿ ಬಿಡುಗಡೆಯಾಗಿಲ್ಲ. ಕೋಟ್ಯಾಂತರ ಮೌಲ್ಯದ ಡೀಸೆಲ್ ಹಾಕಿ ಮೀನುಗಾರಿಕೆ ನಡೆಸಿದ ಮೀನುಗಾರರು ಸಬ್ಸಿಡಿ ಹಣ ಪಾವತಿಯಾಗದೆ ಸಂಕಷ್ಟದಲ್ಲಿದ್ದಾರೆ. ಇದೀಗ ಲಾಕ್ಡೌನ್ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೀನುಗಾರಿಕೆಗೆ ಪೂರ್ತಿ ಅವಕಾಶ ನೀಡಬೇಕು ಹಾಗೂ ಮೀನು ಮಾರಾಟಕ್ಕೂ ಅವಧಿ ವಿಸ್ತರಣೆ ಆಗಬೇಕು ಎನ್ನುವುದು ಸದ್ಯ ಮೀನುಗಾರಿಕೆ ನಂಬಿದ ಮಂದಿಯ ಬೇಡಿಕೆಯಾಗಿದೆ.
The covid lockdown has brought the immense effect of loss on Fishermen in Udupi by no sales and raise in Diesel rates.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
27-11-24 12:31 pm
Mangalore Correspondent
Brahmavara Police Station, Udupi: ಪೊಲೀಸರ ವಶದ...
26-11-24 11:23 pm
Mangalore, Suicide, Belthangady: ಬೆಳ್ತಂಗಡಿ ;...
26-11-24 10:58 pm
Mangalore Baby, Lady goschen Hospital: ಲೇಡಿಗೋ...
26-11-24 10:50 pm
Tamil Actor Surya, Jyothika, Udupi temple: ಕೊ...
26-11-24 08:23 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm