ಚಾಮರಾಜನಗರ ದುರಂತಕ್ಕೆ ಯಾರು ಹೊಣೆ ? ಮುಖ್ಯಮಂತ್ರಿಯೇ ? ಆರೋಗ್ಯ ಸಚಿವರೇ ? ; ಯುಟಿ ಖಾದರ್ ಕಿಡಿ

04-05-21 05:24 pm       Mangalore Correspondent   ಕರಾವಳಿ

ಸರಕಾರದ ಮಟ್ಟದಲ್ಲಿ ಕೋ ಆರ್ಡಿನೇಶನ್ ಎಂಬುದೇ ಇಲ್ಲ. ಕೋವಿಡ್ ಪರಿಸ್ಥಿತಿ ಎದುರಿಸುವ ಬಗ್ಗೆ ಸ್ಪಷ್ಟ ಪ್ಲಾನ್ ಇಲ್ಲದ ಕಾರಣ ರಾಜ್ಯದ ಜನ ಸಂಕಷ್ಟಕ್ಕೆ ಈಡಾಗಿದ್ದಾರೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಯು.ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು, ಮೇ 4: ಸರಕಾರದ ಮಟ್ಟದಲ್ಲಿ ಕೋ ಆರ್ಡಿನೇಶನ್ ಎಂಬುದೇ ಇಲ್ಲ. ಕೋವಿಡ್ ಪರಿಸ್ಥಿತಿ ಎದುರಿಸುವ ಬಗ್ಗೆ ಸ್ಪಷ್ಟ ಪ್ಲಾನ್ ಇಲ್ಲದ ಕಾರಣ ರಾಜ್ಯದ ಜನ ಸಂಕಷ್ಟಕ್ಕೆ ಈಡಾಗಿದ್ದಾರೆ. ಚಾಮರಾಜನಗರದ ದುರಂತ ಘಟನೆ ಇದಕ್ಕೆ ಸ್ಪಷ್ಟ ಉದಾಹರಣೆ. ಸರಕಾರದ ಲೈಫಲ್ಯ ಇದಕ್ಕೆಲ್ಲ ಕಾರಣ. ಸರಕಾರದ ಜೊತೆ ಅಧಿಕಾರಿಗಳು ಕೂಡ ಈ ಘಟನೆಗೆ ಜವಾಬ್ದಾರರು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಯು.ಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಚಾಮರಾಜನಗರ ದುರಂತಕ್ಕೆ ಯಾರು ಕಾರಣ ? ಮುಖ್ಯಮಂತ್ರಿಯವರು ಕಾರಣವಾ? ಆರೋಗ್ಯ ಸಚಿವರು ಕಾರಣವಾ? ಅಲ್ಲಿನ ಉಸ್ತುವಾರಿ ಸಚಿವರು ಕಾರಣವಾ? ದುರಂತಕ್ಕೆ ಯಾರಾದ್ರೂ ಹೊಣೆ ಹೊತ್ತುಕೊಳ್ಳಬೇಕಲ್ಲಾ.. ಮುಖ್ಯಮಂತ್ರಿ ಇದನ್ನು ಸ್ಪಷ್ಟ ಪಡಿಸಬೇಕು. ಇದರ ಜವಾಬ್ದಾರಿಯನ್ನು ಯಾರಾದರೂ ಹೊರಲೇ ಬೇಕು ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಎದುರಾಗಿರುವ ಕೋವಿಡ್ ಪರಿಸ್ಥಿತಿ ಮತ್ತು ಆತಂಕದ ಹಿನ್ನೆಲೆಯಲ್ಲಿ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಚಿವ ಯು.ಟಿ ಖಾದರ್, ರಾಜ್ಯದಲ್ಲಿ ಕೋವಿಡ್ ವಿಚಾರದಲ್ಲಿ ರಾಜ್ಯ ಸರಕಾರ ವಿಫಲ ಆಗಿರುವ ಬಗ್ಗೆ ಮಾಧ್ಯಮದ ಜೊತೆ ಕಿಡಿಕಾರಿದರು.‌ ಇದಕ್ಕೂ ಮುನ್ನ ವೆನ್ಲಾಕ್ ಅಧಿಕಾರಿಗಳೊಂದಿಗೆ  ಪರಿಸ್ಥಿತಿಯ ಕುರಿತು ಯು.ಟಿ ಖಾದರ್ ಸಭೆ ನಡೆಸಿದರು.‌

ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಎದುರಾಗುವ ಬಗ್ಗೆ ಸರಕಾರದ ಗಮನ ಸೆಳೆದಿದ್ದರು. ಡಿಸೆಂಬರ್ ತಿಂಗಳಲ್ಲಿಯೇ ತಜ್ಞರು ಕೂಡ ಎಚ್ಚರಿಕೆ ನೀಡಿದ್ದರು.‌ ಆದರೆ ಸರಕಾರ ಎಚ್ಚೆತ್ತುಕೊಳ್ಳದೇ‌ ಇದ್ದುದರಿಂದ ಈಗ ದುರಂತ ನಡೆದಿದೆ. ಜನ ಆತಂಕಕ್ಕೆ ಒಳಗಾಗಿದ್ದಾರೆ. ಹೀಗಾಗಿ ಕೋವಿಡ್ ಪರಿಸ್ಥಿತಿ , ಆಸ್ಪತ್ರೆಗಳ ಕಂಡಿಷನ್, ಬೆಡ್, ವೆಂಟಿಲೇಟರ್, ಆಕ್ಸಿಜನ್ ಲಭ್ಯತೆಯ ಬಗ್ಗೆ ರಾಜ್ಯ ಸರಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಖಾದರ್ ಒತ್ತಾಯಿಸಿದರು.


ಬಳ್ಳಾರಿಯ ಸ್ಟೀಲ್ ಕಂಪನಿಯಿಂದ ಪೂರೈಸುತ್ತಿರುವ ಆಕ್ಸಿಜನ್ ಪ್ರಮಾಣವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು.‌ ರಾಜ್ಯಕ್ಕೆ ಅಲಾಟ್ ಮಾಡಿರುವ ವ್ಯಾಕ್ಸಿನ್ ಪ್ರಮಾಣವನ್ನು ಹೆಚ್ಚಿಸಬೇಕು.  ಕೇಂದ್ರದ ಮೇಲೆ ಈ ಬಗ್ಗೆ ಒತ್ತಡ ಹೇರಬೇಕು. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕು.‌ ದಕ್ಷಿಣ ಕನ್ನಡ ಜಿಲ್ಲೆಗೆ 80 ಶೇ. ಆಕ್ಸಿಜನ್ ಜಿಂದಾಲ್ ಕಂಪನಿಯಿಂದ ಬರ್ತಿದೆ. 20 ಶೇ. ಕೇರಳದ ಪಾಲ್ಗಾಟ್ ನಿಂದ ಬರುತ್ತಿದೆ. ಕೇರಳದಲ್ಲಿ ಕರೊನಾ ಕೇಸ್ ಹೆಚ್ಚಾದ್ರೆ ಆಕ್ಸಿಜನ್ ಸರಬರಾಜು ನಿಲ್ಲುವ ಸಾಧ್ಯತೆ ಇದೆ. ಇದಕ್ಕಾಗಿ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು ಮಾಜಿ ಸಚಿವ ಯು.ಟಿ ಖಾದರ್ ಹೇಳಿದರು.

U T Khader makes a surprise visit to Wenlock covid hospital and talks to covid 19 victim families and also collects information regarding Oxygen from the Doctors. Also briefing media he said that CM and the BJP government is solely accountable for the death of 24 covid patients who died in chamarajanagar.