ಬೀಚ್ ಹೌಸ್ ನಲ್ಲಿ ಅದ್ದೂರಿ ಮದುವೆ ಪಾರ್ಟಿ ; ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲು

05-05-21 11:02 am       Mangalore Correspondent   ಕರಾವಳಿ

ಲಾಕ್ಡೌನ್ ನಿಯಮ ಉಲ್ಲಂಘಿಸಿ ಸುರತ್ಕಲ್ ಬಳಿಯ ಕುಳಾಯಿ ಶೋರ್ ಬೀಚ್ ಹೌಸ್​ನಲ್ಲಿ ಮದುವೆ ಪಾರ್ಟಿ ನಡೆಸಿದ ಘಟನೆ ನಡೆದಿದ್ದು ಬೀಚ್ ಹೌಸ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಂಗಳೂರು, ಮೇ 5 : ಲಾಕ್ಡೌನ್ ನಿಯಮ ಉಲ್ಲಂಘಿಸಿ ಸುರತ್ಕಲ್ ಬಳಿಯ ಕುಳಾಯಿ ಶೋರ್ ಬೀಚ್ ಹೌಸ್​ನಲ್ಲಿ ಮದುವೆ ಪಾರ್ಟಿ ನಡೆಸಿದ ಘಟನೆ ಮಂಗಳವಾರ ರಾತ್ರಿ ನಡೆದಿದ್ದು ಪೊಲೀಸರು ಆಯೋಜಕರು ಮತ್ತು ಬೀಚ್ ಹೌಸ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸುರತ್ಕಲ್ ಬಳಿಯ ಕುಳಾಯಿ ಶೋರ್ ಬೀಚ್ ಹೌಸ್​ನಲ್ಲಿ ಮಂಗಳವಾರ ರಾತ್ರಿ ಮದುವೆ ರಿಸೆಪ್ಷನ್ ನಡೆದಿತ್ತು. ಕಾರ್ಯಕ್ರಮದ ಆಯೋಜನೆಗಾಗಿ ಮಹಾನಗರ ಪಾಲಿಕೆ ವತಿಯಿಂದ ಅನುಮತಿಯನ್ನೂ ಪಡೆಯಲಾಗಿತ್ತು. ಆದರೆ, ನಿಯಮ ಮೀರಿ ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ ಸೇರಿದ್ದು ರಾತ್ರಿ ವರೆಗೂ ಪಾರ್ಟಿ ನಡೆಸಲಾಗಿತ್ತು.‌ ಈ ಬಗ್ಗೆ ಸ್ಥಳೀಯರು ನೀಡಿದ ದೂರಿನ ಮೇರೆಗೆ ಮಂಗಳೂರು ಉಪ ವಿಭಾಗಾಧಿಕಾರಿ ಮದನ್ ಮೋಹನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ರಾಜ್ಯ ಸರಕಾರ ವಿಧಿಸಿರುವ ಲಾಕ್ಡೌನ್ ನಿಬಂಧನೆಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಮದುವೆ ಆಯೋಜಕರು ಮತ್ತು ಬೀಚ್ ಹೌಸ್ ಮಾಲೀಕರ ವಿರುದ್ಧ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಲಾಕ್ಡೌನ್ ಸಂದರ್ಭದಲ್ಲಿ ಮೊದಲೇ ಆಯೋಜನೆಯಾಗಿದ್ದ ಮದುವೆ, ಇನ್ನಿತರ ಶುಭ ಕಾರ್ಯಗಳಿಗೆ ಅವಕಾಶ ನೀಡಲಾಗಿತ್ತು.‌ ಆದರೆ, ಕಾರ್ಯಕ್ರಮದಲ್ಲಿ 50 ಮಂದಿಗಷ್ಟೇ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತಿದೆ. ಇದರ ಪ್ರಕಾರ ಅದ್ದೂರಿಯಾಗಿ ಮದುವೆ ರಿಸೆಪ್ಷನ್ ಬೀಚ್ ಹೌಸ್ ನಲ್ಲಿ ಆಯೋಜಿಸಿದ್ದು ಸಾಕಷ್ಟು ಜನರೂ ಸೇರಿದ್ದರು. ಆದರೆ, ನಿಮಯಕ್ಕಿಂತ ಹೆಚ್ಚು ಜನ ಸೇರಿದ್ದಾರೆಂದು ಅಧಿಕಾರಿಗಳಿಗೆ ದೂರು ಹೋದ ಕಾರಣಕ್ಕೆ ಪೊಲೀಸರು ಪ್ರಕರಣ ದಾಖಲಾಗಿದೆ.

A marriage reception had been organized at Kulai Shores Beach House in Surathkal exceeding peoples entry limit in Mangalore. The Surathkal police and MCC have registered a case against the client and owner of party house.