ಫಾದರ್‌ ಮುಲ್ಲರ್‌ ಆಸ್ಪತ್ರೆಯ ಮಾಜಿ ನಿರ್ದೇಶಕ ಫಾದರ್ ಪೀಟರ್ ನೊರೊನ್ಹಾ ನಿಧನ

05-05-21 12:01 pm       Mangalore Correspondent   ಕರಾವಳಿ

ಫಾದರ್ ಮುಲ್ಲರ್ ಚಾರಿಟೇಬಲ್ ಆಸ್ಪತ್ರೆಯ ಮಾಜಿ ನಿರ್ದೇಶಕರಾದ ಫಾ. ಪೀಟರ್ ಎಸ್ ಅವರು ಇಂದು ಬೆಳಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.‌ 

ಮಂಗಳೂರು, ಮೇ 5 : ನಗರದ ಫಾದರ್ ಮುಲ್ಲರ್ ಚಾರಿಟೇಬಲ್ ಆಸ್ಪತ್ರೆಯ ಮಾಜಿ ನಿರ್ದೇಶಕರಾದ 85 ವರ್ಷದ ಫಾ. ಪೀಟರ್ ಎಸ್ ಅವರು ಇಂದು ಬೆಳಗ್ಗೆ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.‌ 

ನಗರದ ಬೋಂದೆಲ್‌ ಮೂಲದವರಾದ ಫಾ. ಪೀಟರ್‌ ಅವರು ಜನವರಿ 31, 1936 ರಂದು ಜನಿಸಿದರು. 1961 ಡಿಸೆಂಬರ್ 4 ರಂದು ಪಾದ್ರಿಯಾಗಿ ನೇಮಕಗೊಂಡಿದ್ದರು. 

ಫಾ. ಪೀಟರ್‌ ಅವರು ಬಜ್ಪೆ ಹಾಗೂ ಬಿಜೈ ಪ್ರಾಂತ್ಯದ ಸಹಾಯಕ ಪಾದ್ರಿಯಾಗಿ ಹಾಗೂ ಕಾಟಿಪಳ್ಳ, ಉಡುಪಿ, ಬಂಟ್ವಾಳ (ಮೊಡಂಕಾಪು) ಹಾಗೂ ಬೆಂದೂರು ಪ್ರಾಂತ್ಯದಲ್ಲಿ ಪಾದ್ರಿಯಾಗಿ ಸೇವೆ ಸಲ್ಲಿಸಿದ್ದರು.

ಅವರು 1978 ರಿಂದ 1988 ರ ವರೆಗೆ ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ನಂತರ, ಅವರು ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನಲ್ಲಿ ಪಾದ್ರಿಯಾಗಿ ಸೇವೆ ಸಲ್ಲಿಸಿದ್ದು ಬಳಿಕ ನಿವೃತ್ತರಾಗಿದ್ದರು.  ನಿವೃತ್ತಿಯ ನಂತರ ಅವರು ಜೆಪ್ಪುವಿನ ಸೇಂಟ್ ಝೂಝ್‌ ವಾಝ್‌ ನಿವಾಸದಲ್ಲಿ ವಾಸಿಸುತ್ತಿದ್ದರು.

Fr Peter S Noronha, the former director of Father Muller Hospital, passed away on Wednesday, May 5 at Father Muller Hospital. He was 85.Fr Peter, from Bondel in the city, was born on January 31, 1936. He was ordained as a priest on December 4, 1961.