ಲಸಿಕೆ ಸಂಗ್ರಹ ಖಾಲಿ ; ದಕ್ಷಿಣ ಕನ್ನಡದಲ್ಲಿ ಲಸಿಕಾ ಅಭಿಯಾನ ಸ್ಥಗಿತ

07-05-21 12:14 pm       Mangalore Correspondent   ಕರಾವಳಿ

ಇನ್ನೆರಡು ದಿನಗಳ ಕಾಲ ಕೊರೊನಾ ರೋಗ ನಿರೋಧಕ ಲಸಿಕೆ ಅಭಿಯಾನ ನಡೆಸಲಾಗುವುದಿಲ್ಲ ಎಂದು ಜಿಲ್ಲಾ ಆರೋಗ್ಯಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. 

ಮಂಗಳೂರು, ಮೇ 7: ದ.ಕ. ಜಿಲ್ಲೆಯಲ್ಲಿ ಕೊರೊನಾ ರೋಗ ನಿರೋಧಕ ಲಸಿಕೆಯ ಸಂಗ್ರಹ ಮುಗಿದಿದ್ದು ಇನ್ನೆರಡು ದಿನಗಳ ಕಾಲ ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ನಡೆಸಲಾಗುವುದಿಲ್ಲ ಎಂದು ಜಿಲ್ಲಾ ಆರೋಗ್ಯಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. 

ಜಿಲ್ಲೆಗೆ ಪೂರೈಕೆಯಾದ ಕೋವಿಡ್ ಲಸಿಕೆ ಈಗಾಗ್ಲೇ ಮುಗಿದಿದ್ದು ಇದರಿಂದಾಗಿ ಮುಂದಿನ ಎರಡು ದಿನಗಳಲ್ಲಿ ವೆನ್ಲಾಕ್ ಜಿಲ್ಲಾಸ್ಪತ್ರೆ ಸೇರಿದಂತೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಲಸಿಕಾ ಶಿಬಿರವು ಇರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಲಸಿಕೆ ಲಭ್ಯವಾದ ನಂತರ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಿಕೆಯನ್ನು ಎಂದಿನಂತೆ ಮುಂದುವರಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.