ಬ್ರೇಕಿಂಗ್ ನ್ಯೂಸ್
08-05-21 10:16 am Mangalore Correspondent ಕರಾವಳಿ
ಮಂಗಳೂರು, ಮೇ 8: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಮಸೀದಿಗಳ ಒಕ್ಕೂಟ ಕೊರೊನಾ ಸೋಂಕಿತರ ನೆರವಿಗೆ ಧಾವಿಸಿದೆ. ಸೋಂಕಿತರಿಗಾಗಿ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್, ಐಸೊಲೇಶನ್ ಸೆಂಟರ್ ತೆರೆಯಲು ಮುಂದಾಗಿದೆ.
ಮಂಗಳೂರಿನ ವಿವಿಧ ಮಸೀದಿಗಳ ಆಡಳಿತ ಮಂಡಳಿಗಳು ಸೇರಿಕೊಂಡು ಒಕ್ಕೂಟ ರಚಿಸಿದ್ದು, ಕೋವಿಡ್ ಸೋಂಕಿತರ ನೆರವಿಗಾಗಿ ಮಸೀದಿ ಆಡಳಿತಕ್ಕೆ ಸೇರಿದ ಶಾಲೆಗಳನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬದಲಿಸಲು ಮುಂದಾಗಿದೆ. ಮೊದಲಿಗೆ ಅಡ್ಯಾರ್ ನಲ್ಲಿರುವ ಬರಾಕಾ ಇಂಟರ್ನ್ಯಾಶನಲ್ ಸ್ಕೂಲ್ ಅನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ತಯಾರಿ ನಡೆದಿದೆ.
ಸದ್ಯಕ್ಕೆ ಶಾಲೆ, ಕಾಲೇಜು ತೆರೆಯುವುದಿಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆ, ಶಾಲೆಗಳನ್ನೇ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲು ಮಸೀದಿ ಕಮಿಟಿಗಳು ನಿರ್ಧರಿಸಿವೆ. ಕೋವಿಡ್ ಪಾಸಿಟಿವ್ ಆಗಿದ್ದವರನ್ನು ಮನೆಯಲ್ಲಿ ಇರಿಸಿಕೊಳ್ಳಲು ಸಾಧ್ಯವಾಗಲ್ಲ ಎಂಬ ಸ್ಥಿತಿಯಲ್ಲಿದ್ದರೆ, ಅವರನ್ನು ಕೋವಿಡ್ ಕೇರ್ ಸೆಂಟರಿನಲ್ಲಿ ಇರಿಸಲಾಗುವುದು. ಅದರ ಜೊತೆಗೆ ಐಸೋಲೇಶನ್ ಸೆಂಟರ್ ನಲ್ಲಿ ವೈದ್ಯಕೀಯ ತಜ್ಞರನ್ನು ಒಳಗೊಂಡು ರೋಗಿಗಳ ಆರೈಕೆ ಮಾಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ವೈದ್ಯಕೀಯ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಮಸೀದಿಗಳ ಒಕ್ಕೂಟದ ಕಮಿಟಿಯ ಸದಸ್ಯ ಮಹಮ್ಮದ್ ಹುಸೇನ್ ತಿಳಿಸಿದ್ದಾರೆ.
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಭಾರೀ ವೇಗದಲ್ಲಿ ಹರಡುತ್ತಿದ್ದು, ಈಗ 1500 ಕ್ಕೂ ಹೆಚ್ಚು ಮಂದಿ ಪಾಸಿಟಿವ್ ಬರುತ್ತಿವೆ. ಜಿಲ್ಲಾಡಳಿತದ ಪ್ರಕಾರ, ಒಂದೆರಡು ವಾರಗಳ ನಂತರ ಈ ಸಂಖ್ಯೆ ಎರಡು- ಮೂರು ಸಾವಿರ ಆಗುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಕೋವಿಡ್ ಚಿಕಿತ್ಸೆಗೆ ನಿಗದಿಯಾಗಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಾಧ್ಯವಾಗಲ್ಲ ಎನ್ನುವ ಮಾತು ಕೇಳಿಬರುತ್ತಿದೆ.
ಹೀಗಾಗಿ ಕೋವಿಡ್ ಕೇರ್ ವಿಚಾರದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿರುವ ಮುಸ್ಲಿಂ ಸಂಘಟನೆಗಳು ರೋಗಿಗಳ ಆರೈಕೆಗಾಗಿ ಕೇರ್ ಸೆಂಟರ್ ಮಾಡಲು ಮುಂದಾಗಿದ್ದು ಅದನ್ನು ಮಸೀದಿ ಕಮಿಟಿಗಳ ಮೂಲಕ ಜಾರಿಗೆ ತರಲು ಯೋಜನೆ ಹಾಕಿದೆ. ಈ ಕೇಂದ್ರಗಳಲ್ಲಿ ಜಾತಿ, ಧರ್ಮದ ಭೇದ ಇಲ್ಲದೆ, ಎಲ್ಲರಿಗೂ ಮುಕ್ತವಾಗಿ ಸೌಲಭ್ಯ ನೀಡಲಾಗುವುದು. ವಸತಿ, ಆಹಾರ, ವ್ಯವಸ್ಥೆ ಎಲ್ಲವೂ ಉಚಿತವಾಗಿ ಸಿಗಲಿದೆ ಎಂದು ಮತ್ತೊಬ್ಬ ಸದಸ್ಯ ಇಮ್ತಿಯಾಜ್ ಬೋಳಾರ ತಿಳಿಸಿದ್ದಾರೆ.
Barakah school in Adyar to turn as covid center. The Masjid committee had declared many schools and colleges that comes under them will be turned has covid centers due to spike in Covid-19 cases.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm