ಬ್ರೇಕಿಂಗ್ ನ್ಯೂಸ್
08-05-21 04:59 pm Mangalore Correspondent ಕರಾವಳಿ
ಮಂಗಳೂರು, ಮೇ 8: ಕೋವಿಡ್ ಸೋಂಕು ಕರಾವಳಿಯಲ್ಲಿ ತೀವ್ರವಾಗಿ ಹರಡುತ್ತಿದ್ದು, ಚರ್ಚ್ ಫಾದರ್ ಗಳನ್ನೂ ಬಿಟ್ಟಿಲ್ಲ. ಮಾಹಿತಿ ಪ್ರಕಾರ, ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ 30ಕ್ಕೂ ಹೆಚ್ಚು ಪಾದ್ರಿಗಳು ಹಾಗೂ ಸಿಸ್ಟರ್ ಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಕಾರವಾರ, ಉಡುಪಿ, ಹಾಸನ, ಚಿಕ್ಕಮಗಳೂರು ಹೀಗೆ ವಿವಿಧೆಡೆ ಚರ್ಚ್ ಗಳಲ್ಲಿ ಫಾದರ್ ಆಗಿರುವ 30ಕ್ಕೂ ಹೆಚ್ಚು ಮಂದಿಗೆ ಕೋವಿಡ್ ಸೋಂಕು ತಗಲಿದೆ. ಇದಕ್ಕಾಗಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ.
ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಡಿಎಚ್ಓ ಬಳಿಯೂ ಇಲ್ಲ. ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎನ್ನುತ್ತಿದ್ದಾರೆ. ಆದರೆ, ಖಚಿತ ಮೂಲಗಳ ಪ್ರಕಾರ ಮಂಗಳೂರು ಸೇರಿ ವಿವಿಧ ಕಡೆ ಇರುವ ಚರ್ಚ್ ಫಾದರ್ ಗಳಿಗೆ ಸೋಂಕು ತಗಲಿದೆ.
ಈಗಾಗ್ಲೇ ಗುಜರಾತಿನ ಚರ್ಚ್ ಗಳಲ್ಲಿರುವ ಮಂಗಳೂರು ಮೂಲದ ಹತ್ತಕ್ಕೂ ಹೆಚ್ಚು ಪಾದ್ರಿಗಳು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂಬ ಮಾಹಿತಿಗಳಿವೆ. ಈ ನಡುವೆ ಮಂಗಳೂರಿನಲ್ಲಿಯೂ ಹಲವಾರು ಮಂದಿ ಪಾದ್ರಿಗಳಿಗೆ ಸೋಂಕು ತಗಲಿದೆ ಎನ್ನಲಾಗುತ್ತಿದ್ದು ಆತಂಕ ಮೂಡಿಸಿದೆ.
ಇತ್ತೀಚಿನ ದಿನಗಳಲ್ಲಿ 50 ಜನಕ್ಕೆ ಸೀಮಿತಗೊಳಿಸಿ ಚರ್ಚ್ ಗಳಲ್ಲಿ ಮದುವೆ ನಡೆದಿರುವುದು, ಆ ಸಂದರ್ಭದಲ್ಲಿ ಪಾದ್ರಿಗಳು ಪ್ರಮುಖವಾಗಿ ಕರ್ತವ್ಯ ನಿಭಾಯಿಸುತ್ತಾರೆ. ಇದೇ ವೇಳೆ, ನೇರವಾಗಿ ಪಾದ್ರಿಗಳಿಗೆ ಕೋವಿಡ್ ಸೋಂಕು ತಗಲಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಧಾರ್ಮಿಕ ಕೇಂದ್ರಗಳಿಗೆ ಕಳೆದ 15 ದಿವಸಗಳಿಂದ ಜನರ ಪ್ರವೇಶಕ್ಕೆ ನಿಷೇಧ ಇದ್ದರೂ, ಹೊರ ಜಗತ್ತಿನಲ್ಲಿ ಕಾಣಿಸಿಕೊಳ್ಳದ ಪಾದ್ರಿಗಳಿಗೆ ದಿಢೀರ್ ಆಗಿ ಸೋಂಕು ತಗಲಿರುವುದು ಹೇಗೆ ಎಂಬ ಪ್ರಶ್ನೆ ಸಹಜವಾಗಿ ಕಾಡಿದೆ.
Read: ಬೆಥನಿ ಕಾನ್ವೆಂಟಿಗೆ ವಕ್ಕರಿಸಿದ ಕೊರೊನಾ ! 19 ಮಂದಿಗೆ ಪಾಸಿಟಿವ್
Over 30 Catholic priests and Nuns from Mangalore and various districts of Karnataka serving under the diocese of Mangalore have been positive for covid 19 and have been admitted at Father Mullers Hospital in two separate wards.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
16-05-25 04:45 pm
HK News Desk
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
16-05-25 10:27 pm
Mangalore Correspondent
Siddaramaiah, Cm Mangalore, BJP black flag: ಸ...
16-05-25 06:05 pm
Mangalore, Dinesh Gundurao: ಇಡಿ ದೇಶದಲ್ಲಿ ಅತೀ...
16-05-25 02:47 pm
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
16-05-25 11:06 pm
Mangalore Correspondent
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm