ಬ್ರೇಕಿಂಗ್ ನ್ಯೂಸ್
12-05-21 04:19 pm Mangalore Correspondent ಕರಾವಳಿ
ಬಂಟ್ವಾಳ, ಮೇ 12: ಮನೆ ಬಿಟ್ಟು 26 ವರ್ಷ ಕಳೆದಿತ್ತು. ಮನೆಯವರು ಆತ ಬದುಕಿರಲಿಕ್ಕಿಲ್ಲ ಎಂದೇ ಭಾವಿಸಿದ್ದರು. ಆದರೆ, 26 ವರ್ಷಗಳ ಹಿಂದೆ ಮನೆ ಬಿಟ್ಟು ತೆರಳಿದ್ದ ವ್ಯಕ್ತಿ ಅಚಾನಕ್ಕಾಗಿ ಊರಿಗೆ ವಾಪಸಾಗಿದ್ದಾನೆ. ಹೌದು... ಮನೆಯಲ್ಲಿನ ಬಡತನದಿಂದ ಬೇಸತ್ತು ಊರು ಬಿಟ್ಟು ತೆರಳಿದ್ದ ವ್ಯಕ್ತಿ ಮತ್ತೆ ಊರಿಗೆ ಬರಲು ಕಾರಣವಾಗಿದ್ದು ವಾಟ್ಸಪ್ ಎನ್ನೋ ಮಾಂತ್ರಿಕ ಜಗತ್ತು.
ಆತನ ಹೆಸರು ಶಿವಪ್ಪ ಪೂಜಾರಿ. ಮೂಲತಃ ಉಜಿರೆ ಬಳಿಯ ಬೆಳಾಲಿನ ನಿವಾಸಿ. ಬೆಳಾಲಿನ ಒಡಿಪರೊಟ್ಟು ಮನೆಯ ದಿ. ಕೊರಗಪ್ಪ ಪೂಜಾರಿಯವರ ಮಗ. ಆತನಿಗೆ 18 ವರ್ಷ ಇದ್ದಾಗ ಮನೆಯಲ್ಲಿನ ಬಡತನದಿಂದ ಬೇಸತ್ತು ಊರು ತೊರೆದಿದ್ದ. ಆನಂತರ ಎರಡು ವರ್ಷ ಮಂಗಳೂರಿನಲ್ಲಿ ಏನೋ ಕೆಲಸ ಮಾಡುತ್ತಿದ್ದ. ಈ ವೇಳೆ, ಮನೆಯವರ ಜೊತೆ ಸಂಪರ್ಕದಲ್ಲಿದ್ದ ಶಿವಪ್ಪ ಆನಂತರ ಮಂಗಳೂರನ್ನೂ ಬಿಟ್ಟಿದ್ದ.
ಆಬಳಿಕ ಶಿವಪ್ಪ ಎಲ್ಲಿದ್ದಾನೆ, ಎಲ್ಲಿ ಹೋಗಿದ್ದಾನೆ ಎನ್ನೋದು ಮನೆಯವರಿಗೆ ತಿಳಿದಿರಲಿಲ್ಲ. ಶಿವಪ್ಪನ ಆಪ್ತರು ಆತ ಎಲ್ಲಿದ್ದಾನೆಂದು ಹುಡುಕಾಟವನ್ನೂ ನಡೆಸಿದ್ದರು. ಆದರೆ, ಎಲ್ಲಿದ್ದಾನೆಂದು ಪತ್ತೆಯಾಗಿರಲಿಲ್ಲ. ನಾಪತ್ತೆಯಾಗಿದ್ದ ಶಿವಪ್ಪನ ಬಗ್ಗೆ ಮನೆಯವರು ಮರೆತೇ ಬಿಟ್ಟಿದ್ದರು. ಶಿವಪ್ಪನ ಇತರ ಮೂವರು ಸೋದರರು, ಇಬ್ಬರು ಸೋದರಿಯರು ಒಡಿಪರೊಟ್ಟುವಿನ ಹಳೆ ಮನೆಯಲ್ಲಿ ನೆಲೆಸಿದ್ದರು. ಮೂರು ತಿಂಗಳ ಹಿಂದಿನ ವರೆಗೂ ತಂದೆ ಕೊರಗಪ್ಪ ಪೂಜಾರಿ ಮತ್ತು ಅವರ ಪತ್ನಿಯೂ ಬದುಕಿದ್ದರು. ಅನಾರೋಗ್ಯದಿಂದ ಬಳಿಕ ತೀರಿಕೊಂಡಿದ್ದರು.
ಶಿವಪ್ಪ ಹೇಳುವ ಪ್ರಕಾರ, ಅವರು ಹಾಸನದ ತರೀಕೆರೆ ಮತ್ತು ಮೈಸೂರಿಗೆ ತೆರಳಿದ್ದರು. ತರೀಕೆರೆಯಲ್ಲಿದ್ದಾಗ ಮೀನಾಕ್ಷಿ ಎಂಬವಳನ್ನು ಮದುವೆಯಾಗಿ ಬಳಿಕ ಮೈಸೂರಿನಲ್ಲಿ ಸಂಸಾರ ನಡೆಸಿದ್ದರು. ಹುಡುಗ ಮತ್ತು ಹುಡುಗಿ ಇಬ್ಬರು ಮಕ್ಕಳೂ ಆಗಿದ್ದರು. ಆನಂತರ ಮದುವೆ, ಮಕ್ಕಳಾಗಿದ್ದರಿಂದ ಅವರನ್ನು ಕರೆದುಕೊಂಡು ಮರಳಿ ಊರಿಗೆ ಬರಲು ಧೈರ್ಯ ಆಗಿಲ್ವಂತೆ. ಹೀಗಾಗಿ ಮೈಸೂರಿನಲ್ಲಿಯೇ ನೆಲೆಸಿದ್ದರು. ಇತ್ತೀಚೆಗೆ ಲಾಕ್ಡೌನ್ ಆಗಿದ್ದರಿಂದ ಮತ್ತೆ ಕೆಲಸಕ್ಕಾಗಿ ಕರಾವಳಿಗೆ ಬಂದಿದ್ದರು. ಹೀಗೆ ಬಂದು ಬಂಟ್ವಾಳ ತಲುಪಿದ್ದು, ಮಾರಿಪಳ್ಳದ ಬಸ್ ನಿಲ್ದಾಣದಲ್ಲಿ ಅನಾರೋಗ್ಯಕ್ಕೀಡಾಗಿ ಅಲ್ಲಿಯೇ ಮಲಗಿದ್ದರು.
ಬಸ್ ನಿಲ್ದಾಣದಲ್ಲಿ ಮಲಗಿದ್ದ ವ್ಯಕ್ತಿಯನ್ನು ಸ್ಥಳೀಯರು ನೋಡಿ, ಫೋಟೋ ತೆಗೆದು ವಾಟ್ಸಪ್ ನಲ್ಲಿ ಷೇರ್ ಮಾಡಿದ್ದರು. ಯಾರೋ ಅಪರಿಚಿತ ವ್ಯಕ್ತಿ ಬಸ್ ನಿಲ್ದಾಣದಲ್ಲಿ ಮಲಗಿದ್ದಾರೆಂದು ವಾಟ್ಸಪಲ್ಲಿದ್ದ ಹಾಕಿದ್ದ ಫೋಟೋವನ್ನು ನೋಡಿದ ಸೋದರ, ತನ್ನ ಹಿರಿಯ ಸೋದರ ಶಿವಪ್ಪನೆಂದು ತಿಳಿದು ಅಲ್ಲಿಗೆ ಆಗಮಿಸಿದ್ದ. ಬಳಿಕ ಅಣ್ಣನ ಗುರುತು ಹಿಡಿದು ಮರಳಿ ಮನೆಗೆ ಕರೆದೊಯ್ದಿದ್ದಾನೆ. ಅಚಾನಕ್ಕಾಗಿ ಕರಾವಳಿಗೆ ಬಂದಿದ್ದ ಶಿವಪ್ಪ ಮರಳಿ ಮನೆಗೆ ಬಂದಿದ್ದು, ಮನೆಯವರಿಗೆ ಮತ್ತು ಊರವರಿಗೆ ಅಚ್ಚರಿ ಮೂಡಿಸಿದೆ.
ಮನೆಯ ಸಂಪರ್ಕವನ್ನೇ ಬಿಟ್ಟು ತೆರಳಿದ್ದ ವ್ಯಕ್ತಿಯನ್ನು ವಾಟ್ಸಪ್ ಮತ್ತೆ ಮನೆಯವರ ಜೊತೆ ಬೆಸೆದಿತ್ತು. ಸದ್ಯಕ್ಕೆ, ಒಡಿಪರೊಟ್ಟುವಿನ ಹಳೆಯ ಮನೆಯಲ್ಲಿ ಸೋದರರ ಕುಟುಂಬದ ಜೊತೆ ಶಿವಪ್ಪ ವಾಸವಿದ್ದಾರೆ.
A man who fell down after suffering from giddiness on the road has seen his life-transforming. The man has returned to his native village after a gap of 26 years, but his parents sadly died just three months back. Shivappa is sad that he could have met his parents if he had come back a little earlier.
11-03-25 06:19 pm
Bangalore Correspondent
ರಾಜ್ಯದ ಕಿರು ಫೈನಾನ್ಸ್ ಸಂಸ್ಥೆಗಳಲ್ಲಿ 40 ಸಾವಿರ ಕೋ...
11-03-25 03:41 pm
Ranya Rao gold smuggling case: ರನ್ಯಾ ರಾವ್ ಚಿನ...
11-03-25 02:27 pm
Ranya Rao Latest News: ವಿಧಾನಸಭೆಯಲ್ಲಿ ರನ್ಯಾ ಪ್...
10-03-25 09:51 pm
Yathindra, Muda Site: ಮುಡಾಕ್ಕೆ ಹಿಂತಿರುಗಿಸಿದ್ದ...
10-03-25 02:07 pm
10-03-25 10:17 pm
HK News Desk
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
Cricket Win India, Trophy 2025: ರೋಚಕ ಹಣಾಹಣಿಯಲ...
09-03-25 10:49 pm
Dubai, Kerala, Death Sentence: ದುಬೈನಲ್ಲಿ ಇಬ್ಬ...
08-03-25 04:03 pm
James Harrison, Golden Arm, Death: ಲಕ್ಷಾಂತರ ಮ...
05-03-25 05:38 pm
11-03-25 10:33 pm
Mangalore Correspondent
Mangalore Railway Station News: ರೈಲ್ವೇ ನಿಲ್ದಾ...
11-03-25 10:10 pm
Mangalore MP Brijesh Chowta, ISPRL: ಎಂಟು ವರ್ಷ...
11-03-25 08:42 pm
Katrina Kaif, Kukke Subrahmanya Temple, Mang...
11-03-25 03:19 pm
Mangalore Bakrabailu Subbaiah Shetty Death: ದ...
10-03-25 09:16 pm
11-03-25 07:34 pm
Bangalore Correspondent
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm
Bangalore Suicide, Bank Staff, Crime; ಹಿರಿಯ ಅ...
09-03-25 03:06 pm
Koppal Rape, Crime, Arrest: ಪೆಟ್ರೋಲ್ ದುಡ್ಡು ಕ...
08-03-25 10:44 pm