ಬ್ರೇಕಿಂಗ್ ನ್ಯೂಸ್
12-05-21 05:26 pm Mangalore Correspondent ಕರಾವಳಿ
ಮಂಗಳೂರು, ಮೇ 12: ಥೀಮ್ ಕಾಸ್ ಎನ್ನುವ ಹೆಸರಲ್ಲಿ ಯುವಕರೇ ಸೇರಿಕೊಂಡು ರಚಿಸಿರುವ ಸಂಘಟನೆಯ ಸದಸ್ಯರು ಈ ಬಾರಿಯೂ ಲಾಕ್ಡೌನಲ್ಲಿ ಅನಾಥರು, ನಿರಾಶ್ರಿತರು ಮತ್ತು ಬಡವರ ಉದರ ತಣಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಕಳೆದ 14 ದಿನಗಳಿಂದ 250 ರಷ್ಟು ಮಂದಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ನೀಡುತ್ತಿದ್ದಾರೆ. ಪ್ರತಿ ದಿನ ಮಂಗಳೂರಿನ ನೆಹರು ಮೈದಾನ, ಸ್ಟೇಟ್ ಬ್ಯಾಂಕ್ ಪರಿಸರ, ಸೆಂಟ್ರಲ್ ರೈಲು ನಿಲ್ದಾಣ, ಕಂಕನಾಡಿ ಜಂಕ್ಷನ್ ರೈಲು ನಿಲ್ದಾಣ, ಬೈಕಂಪಾಡಿ, ಕುಳೂರು, ಸೆಂಟ್ರಲ್ ಮಾರುಕಟ್ಟೆ ಪರಿಸರ, ಉರ್ವಾ ಸ್ಟೋರ್ ಹೀಗೆ ನಿರಾಶ್ರಿತರು ಇರುವ ಸ್ಥಳಕ್ಕೆ ತೆರಳಿ ಊಟ ನೀಡುವ ಕಾರ್ಯ ಮಾಡುತ್ತಿದ್ದಾರೆ. ಇದೇ ಜಾಗದಲ್ಲಿ ಸಂಜೆಯ ಹೊತ್ತಿಗೆ ಚಹಾ ಮತ್ತು ಬಿಸ್ಕೆಟ್ ಕೂಡ ನೀಡುತ್ತಿದ್ದಾರೆ.
ಇದರ ಜೊತೆಗೆ, ಚೆಕ್ ಪೋಸ್ಟ್ ಗಳಲ್ಲಿ ಇರುವ ಪೊಲೀಸರಿಗೆ ಕಾಸ್ ಸಂಘಟನೆಯ ಸದಸ್ಯರು ಸಂಜೆ ಹೊತ್ತಿಗೆ ಚಹಾ ಮತ್ತು ಬಿಸ್ಕೆಟ್ ವಿತರಿಸುತ್ತಿದ್ದಾರೆ. ದಿನವೂ ಬಿಸಿಲಿಗೆ ನಿಂತು ಜನರನ್ನು ಬರದಂತೆ ತಡೆದು, ಕೊರೊನಾ ಹರಡದಂತೆ ಕರ್ತವ್ಯ ಮಾಡುತ್ತಿರುವುದರಿಂದ ಅವರ ಸೇವೆಯನ್ನು ಮರೆಯಬಾರದು ಎನ್ನುವ ನೆಲೆಯಲ್ಲಿ ಚಹಾ ನೀಡುತ್ತಿದ್ದೇವೆ ಎಂದು ಸಂಘಟನೆ ಸದಸ್ಯ ಸುಹಾನ್ ಆಳ್ವ ಹೇಳುತ್ತಾರೆ.
ಪೊಲೀಸರಿಗೆ ಕಮಿಷನರೇಟ್ ಕಚೇರಿಯ ಹಿಂಭಾಗದ ಮೈದಾನದಲ್ಲಿ ಊಟ ರೆಡಿಯಾಗುತ್ತಿದೆ. ಪೊಲೀಸರಿಗೆ ಊಟ ತಯಾರಿಸಲು ಒಂದೂವರೆ ಕ್ವಿಂಟಾಲ್ ಅಕ್ಕಿ, ಹತ್ತು ಕೇಜಿ ದಾಲ್ ಮತ್ತು 300 ಮೊಟ್ಟೆಗಳನ್ನು ನೀಡಿದ್ದೇವೆ. ನಗರ ಪೊಲೀಸರಿಗೆ ನೆರವಾಗುವ ನಿಟ್ಟಿನಲ್ಲಿ 800 ಮಾಸ್ಕ್ ಹಾಗೂ 800 ಸ್ಯಾನಿಟೈಸರ್ ಬಾಟಲಿಗಳನ್ನು ಕೂಡ ನೀಡಿದ್ದೇವೆ. ಇವನ್ನು ಮಂಗಳೂರು ನಗರ ಡಿಸಿಪಿ ಹರಿರಾಮ್ ಶಂಕರ್ ಅವರ ಮೂಲಕ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಸುಹಾನ್ ತಿಳಿಸಿದ್ದಾರೆ.
ನಮ್ಮ ಸಂಘಟನೆಯಲ್ಲಿ ಹಿಂದು, ಮುಸ್ಲಿಂ, ಕ್ರಿಸ್ತಿಯನ್ ಭೇದ ಇಲ್ಲದೆ ಎಲ್ಲ ಮತೀಯ ಸದಸ್ಯರಿದ್ದು, 15ರಷ್ಟು ಮಂದಿ ಸಕ್ರಿಯವಾಗಿದ್ದಾರೆ. ಬಲ್ಮಠದ ಹೊಟೇಲ್ ಒಂದರಲ್ಲಿ ಅಡುಗೆ ತಯಾರಿಸಿ ಕೊಡುತ್ತಾರೆ. ಜ್ಯೋತಿ ಬಳಿ ಮತ್ತೊಂದು ಕಡೆ ನಾವೇ ಸೇರಿಕೊಂಡು ಸಂಜೆ ಊಟವನ್ನು ರೆಡಿ ಮಾಡುತ್ತೇವೆ ಎಂದು ಹೇಳುವ ಸುಹಾನ್, ಬಡವರಿಗೆ ನೇರವಾಗಿ ರೇಷನ್ ತಲುಪಿಸುವ ಕಾರ್ಯವನ್ನೂ ಮಾಡುತ್ತಿದ್ದೇವೆ. ಇದಕ್ಕಾಗಿ ಕೆಲವರು ನಮಗೆ ಹಣದ ರೂಪದಲ್ಲಿ ನೆರವು ನೀಡಿದ್ದಾರೆ. ಉಳಿದಂತೆ, ನಾವೇ ಕೈಯಿಂದಲೇ ಹಣವನ್ನು ಸೇರಿಸಿಕೊಂಡು ಊಟ, ರೇಷನ್ ತಲುಪಿಸುತ್ತೇವೆ ಎಂದಿದ್ದಾರೆ.
ಕಾಸ್ ಸಂಘಟನೆಯಿಂದ ಕಳೆದ ವರ್ಷವೂ ಲಾಕ್ಡೌನ್ ಸಂದರ್ಭದಲ್ಲಿ 45 ದಿನಗಳ ಕಾಲ ಮಂಗಳೂರಿನಲ್ಲಿ ಅನಾಥರಿಗೆ ಊಟ ಕೊಡಲಾಗಿತ್ತು. ಉತ್ಸಾಹಿ ಯುವಕರು ಸೇರಿಕೊಂಡು ಸ್ವಯಂಸೇವೆಯ ನೆಲೆಯಲ್ಲಿ ಈ ಮಾನವೀಯ ಕಾರ್ಯವನ್ನು ಮಾಡುತ್ತಿದ್ದಾರೆ. ಕೋವಿಡ್ ಸೋಂಕಿನ ಭಯದ ನಡುವೆ, ಇವರ ಸಂಘಟನೆಯ ಕೆಲಸದಲ್ಲಿ ಯುವತಿಯರು ಕೂಡ ಸೇರಿಕೊಂಡಿದ್ದು ವಿಶೇಷ.
Cause a social organization lead by Suhan Alva and team provide food to daily wagers, homeless and other people affected by the curfew imposed in Mangalore in view of the coronavirus pandemic.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
27-11-24 08:50 pm
Mangalore Correspondent
Mangalore MP Captain Brijesh Chowta, Chouhan...
27-11-24 08:39 pm
Mangalore News: ಬ್ರಿಟಿಷರ ಕಾಲದ ಜಿಲ್ಲಾಧಿಕಾರಿ ಕಚ...
27-11-24 08:28 pm
Mangalore, Lokayukta Complaint: ಸರಕಾರಿ ಕೆಲಸ ವ...
27-11-24 08:16 pm
Drowning, Barkaje dam, Mangalore News: ಬರ್ಕಜೆ...
27-11-24 08:04 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm