ಕೊರೊನಾ ಮೃತರಿಗೆ ಮಹಾನಗರ ಪಾಲಿಕೆಯ ಎಲ್ಲ 11 ಸ್ಮಶಾನಗಳಲ್ಲೂ ಉಚಿತ ಅಂತ್ಯಕ್ರಿಯೆ

13-05-21 02:22 pm       Mangalore Correspondent   ಕರಾವಳಿ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ 11 ಸರಕಾರಿ ರುದ್ರಭೂಮಿಗಳಲ್ಲಿ ಉಚಿತವಾಗಿ ಅಂತ್ಯಕ್ರಿಯೆ ನೆರವೇರಿಸಬಹುದು ಎಂದು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ.

ಮಂಗಳೂರು, ಮೇ 13: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳನ್ನು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲ 11 ಸರಕಾರಿ ರುದ್ರಭೂಮಿಗಳಲ್ಲಿ ಉಚಿತವಾಗಿ ಅಂತ್ಯಕ್ರಿಯೆ ನೆರವೇರಿಸಬಹುದು ಎಂದು ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ.

ಈ ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಆದೇಶ ಹೊರಡಿಸಿದ್ದಾರೆ. ಈನತಕ ಅತ್ತಾವರ, ಬೋಳೂರು ಸ್ಮಶಾನಗಳಲ್ಲಿ ಮಾತ್ರ ಅಂತ್ಯಕ್ರಿಯೆಗೆ ಅವಕಾಶ ನೀಡಲಾಗಿತ್ತು. ಮಹಾನಗರ ಪಾಲಿಕೆಯಿಂದಲೇ ಖರ್ಚನ್ನು ಭರಿಸಲಾಗುತ್ತಿದ್ದರೂ, ಆಯಾ ಭಾಗದ ಜನರಿಗೆ ಕಷ್ಟ ಎದುರಾಗಿತ್ತು. ಇದೀಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ಹನ್ನೊಂದು ಸ್ಮಶಾನಗಳಲ್ಲಿಯೂ ಅಂತ್ಯಕ್ರಿಯೆ ನಡೆಸಬಹುದು ಎಂದು ಹೊಸ ಆದೇಶ ಮಾಡಲಾಗಿದೆ.

ಬೋಳೂರು ಭಾಗದವರಿಗೆ ಬೋಳೂರು ಸ್ಮಶಾನ, ಕಾಟಿಪಳ್ಳ ಉತ್ತರ -5ರ ವಾರ್ಡಿನಲ್ಲಿರುವ ಕಾಟಿಪಳ್ಳ 8ನೇ ಬ್ಲಾಕ್ ಮ್ತತು 3ನೇ ಬ್ಲಾಕ್ ನಲ್ಲಿರುವ ಸ್ಮಶಾನ, ಹೊಸಬೆಟ್ಟು ವಾರ್ಡ್ 8ರಲ್ಲಿರುವ ಕುಳಾಯಿ ಕೃಷ್ಣನಗರ ಸ್ಮಶಾನ, ಸುರತ್ಕಲ್ ಇಡ್ಯಾ ಪೂರ್ವ ವಾರ್ಡ್ ಸಂಖ್ಯೆ 6ರಲ್ಲಿರುವ ಸುರತ್ಕಲ್ ಸ್ಮಶಾನ, ಪಂಜಿಮೊಗರು 12 ವಾರ್ಡ್ ನಲ್ಲಿರುವ ಕುಳೂರು ಸ್ಮಶಾನ, ಪಚ್ಚನಾಡಿ ವಾರ್ಡ್ 19ರಲ್ಲಿರುವ ಪಚ್ಚನಾಡಿ ಸ್ಮಶಾನ, ಕದ್ರಿ ಪದವು ವಾರ್ಡ್ 22ರ ಮುಗ್ರೋಡಿ ಗುಣಕುಲಪಾದೆ ಸ್ಮಶಾನ, ಕದ್ರಿ ದಕ್ಷಿಣ ವಾರ್ಡಿನ 33ರಲ್ಲಿ ಇರುವ ಕದ್ರಿ ಸ್ಮಶಾನ, ಪದವು ಸೆಂಟ್ರಲ್ ವಾರ್ಡಿನ 35ರಲ್ಲಿ ಶಕ್ತಿನಗರ ಸ್ಮಶಾನ, ಅತ್ತಾವರ ವಾರ್ಡಿನ 55ರಲ್ಲಿರುವ ನಂದಿಗುಡ್ಡೆ ಸ್ಮಶಾನದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ರೋಗಿಗಳನ್ನು ಉಚಿತವಾಗಿ ಅಂತ್ಯಕ್ರಿಯೆ ನಡೆಸಲು ಮಹಾನಗರ ಪಾಲಿಕೆ ನಿರ್ಧರಿಸಿದೆ.

City corporation commissioner, Akshay Sridhar, said that orders have been issued to perform the funerals of those who die of coronavirus within the city limits free of cost in all the 11 crematoriums located within the city corporation limits.