ಬ್ರೇಕಿಂಗ್ ನ್ಯೂಸ್
13-05-21 05:42 pm Mangalore Correspondent ಕರಾವಳಿ
Photo credits : Representative Image
ಮಂಗಳೂರು, ಮೇ 13: ಕೊರೊನಾ ಸೋಂಕು ಒಂದೆಡೆ ಸಾಮಾನ್ಯ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದರೆ, ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ದಾಖಲಾಗುವ ಸೋಂಕಿತರನ್ನು ಮತ್ತಷ್ಟು ಹಿಂಡುತ್ತಾ ದೋಚುವುದನ್ನೇ ದಂಧೆ ಮಾಡಿಕೊಂಡಿವೆ. ಎಂಟತ್ತು ದಿನ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾದರೆ, ಐದಾರು ಲಕ್ಷ ಬಿಲ್ ಗ್ಯಾರಂಟಿ. ಅಷ್ಟೇ ಅಲ್ಲಾ, ಆಸ್ಪತ್ರೆಯಲ್ಲಿ ಹತ್ತು ದಿನ ಕಳೆದರೆ ಶವ ಖಚಿತ ಅನ್ನುವಷ್ಟರ ಮಟ್ಟಿಗೆ ವೈದ್ಯರು ಮತ್ತು ಆಸ್ಪತ್ರೆ ಬಗ್ಗೆ ಅಪನಂಬಿಕೆ ಬೆಳೆದು ನಿಂತಿದೆ. ಇದಕ್ಕೆ ಕಾರಣವಾಗಿರೋದು, ಖಾಸಗಿ ಆಸ್ಪತ್ರೆಗಳು ಬಿಲ್ ಹೆಸರಲ್ಲಿ ಮಾಡ್ತಿರುವ ಹಗಲು ದರೋಡೆ.
ಮಂಗಳೂರು ಅಂದ್ರೆ ಶಿಕ್ಷಣ ಕಾಶಿ ಹೇಗೋ, ವೈದ್ಯಕೀಯ ವಿಚಾರದಲ್ಲಿ ಜಗತ್ತಿನಲ್ಲೇ ಹೆಸರು ಮಾಡಿರುವ ನಗರ. ಎಂಟು ಮೆಡಿಕಲ್ ಕಾಲೇಜು ಸೇರಿದಂತೆ ದೇಶದಲ್ಲಿ ಹೆಸರು ಮಾಡಿರುವ ಸ್ಪೆಷಾಲಿಟಿ ವೈದ್ಯರು, ವೈದ್ಯಕೀಯ ಆಸ್ಪತ್ರೆಗಳು ಮಂಗಳೂರಿನಲ್ಲಿವೆ. ಆದರೆ, ಎಲ್ಲ ಖಾಸಗಿ ಆಸ್ಪತ್ರೆಗಳ ಸ್ಥಿತಿಯೂ ರಕ್ತ ಹೀರುವ ಜಿಗಣೆಗಳ ರೀತಿಯಾಗಿದೆ. ಆಸ್ಪತ್ರೆಗೆ ದಾಖಲಾದ ಮಂದಿ ಬಿಡುಗಡೆಯಾದ ಹೊತ್ತಿಗೆ ಚಿನ್ನಾಭರಣ ಬ್ಯಾಂಕಿನಲ್ಲಿಟ್ಟು ಹಣ ಹೊಂದಿಸುವ ಸ್ಥಿತಿಯಾಗಿದ್ದು, ಇದಕ್ಕಿಂತ ಆಸ್ಪತ್ರೆಯಲ್ಲೇ ಸಾಯುವುದು ಲೇಸು ಅನ್ನುವ ಮನಸ್ಥಿತಿ ಕೆಲವರದ್ದಾಗಿದೆ.
ಮಂಗಳೂರಿನಲ್ಲಿ ಅತಿ ಪ್ರತಿಷ್ಠಿತ ಎನ್ನುವ ಹೆಗ್ಗಳಿಕೆ ಹೊಂದಿರುವ ಖ್ಯಾತ ಆಸ್ಪತ್ರೆಯೊಂದರಲ್ಲಿ ಕೊರೊನಾ ಸೋಂಕಿತನ ತಲೆಗೆ ಕಟ್ಟಿದ ಬಿಲ್ ಸಿಕ್ಕಿದೆ. 38 ವರ್ಷದ ಯುವಕ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದಾತ. ಸೋಂಕಿನಿಂದ ಆಸ್ಪತ್ರೆಗೆ ದಾಖಲಾದ ವೇಳೆ, ಬೆಂಗಳೂರಿನ ವೈದ್ಯರು ನೀವು ಇಲ್ಲಿರೋದಕ್ಕಿಂತ ಮಂಗಳೂರಿಗೆ ತೆರಳುವುದು ವಾಸಿ. ಅಲ್ಲಿ ಉತ್ತಮ ಚಿಕಿತ್ಸೆಯೂ ಸಿಗುತ್ತದೆ ಎಂದು ಕಳಿಸಿಕೊಟ್ಟಿದ್ದರು. ಹಾಗಾಗಿ ಆಂಬುಲೆನ್ಸ್ ಮಾಡಿಕೊಂಡೇ ಆತನನ್ನು ಮಂಗಳೂರಿಗೆ ಕರೆತರಲಾಗಿತ್ತು. ಊಟ, ತಿಂಡಿ ಚೆನ್ನಾಗಿಯೇ ಮಾಡುತ್ತಿದ್ದ ಆತನಿಗೆ ಒಂದಷ್ಟು ಉಸಿರಾಟದ ತೊಂದರೆ ಇತ್ತು. ಹಾಗಾಗಿ ಮಂಗಳೂರಿನ ಅತಿ ಪ್ರತಿಷ್ಠಿತ ಆಸ್ಪತ್ರೆಯನ್ನೇ ಆಯ್ದುಕೊಂಡು ಐಸಿಯುಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿತ್ತು.
ವೈದ್ಯರು ಆತನಿಗೆ ಆಕ್ಸಿಜನ್ ನೀಡಿದ್ದು, ಐಸಿಯು ಆಗಿದ್ದರಿಂದ ರೋಗಿಯ ಸಂಬಂಧಿತರಿಗೆ ನೋಡಲು ಬಿಡುತ್ತಿರಲಿಲ್ಲ. ಅಲ್ಲಿ ಉಳಿದುಕೊಳ್ಳುವುದಕ್ಕೂ ಅವಕಾಶ ಇರಲಿಲ್ಲ. ಯುವಕನ ಸಂಬಂಧಿಕರು ದಿನವೂ ಬಿಸಿ ಬಿಸಿ ಊಟವನ್ನು ಆತನಿಗೆ ತಂದು ಕೊಡುತ್ತಿದ್ದರು. ನರ್ಸ್ ಗಳು ಅದನ್ನು ಸ್ವೀಕರಿಸಿ, ಒಳಗೆ ಕಳಿಸಿ ಕೊಡುತ್ತಿದ್ದರು. ಇದರ ನಡುವೆ, ಆತನ ಜೊತೆ ಸಂಬಂಧಿಕರು ಫೋನಲ್ಲಿ ಮಾತನ್ನೂ ಆಡುತ್ತಿದ್ದರು. ತಾನು ಉಷಾರಾಗುತ್ತಿರುವ ಬಗ್ಗೆ ಯುವಕ ಹೇಳಿಕೊಂಡಿದ್ದ. ಆದರೆ, ಆಕ್ಸಿಜನ್ ನೀಡುತ್ತಲೇ ಹತ್ತು ದಿನ ಕಳೆದಿದ್ದು, ವೈದ್ಯರು ಬಳಿಕ ವೆಂಟಿಲೇಟರ್ ಗೆ ಹಾಕಿದ್ದಾರಂತೆ. ಊಟ ಕೊಡುವುದನ್ನೂ ನಿಲ್ಲಿಸಿದ್ದಾರೆ. ಆನಂತರ ಎರಡೇ ದಿನದಲ್ಲಿ ಬೇರೆ ಯಾವುದೇ ತೊಂದರೆ ಇಲ್ಲದ, ಗಟ್ಟಿಮುಟ್ಟಾಗಿದ್ದ ಯುವಕ ಅತ್ಯಾಧುನಿಕ ಸೌಲಭ್ಯಗಳಿದ್ದ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾನೆ. ಮನೆಯವರಿಗೆ ಮತ್ತು ಆತನ ಸಂಬಂಧಿಕರಿಗೆ ಯುವಕನ ದಿಢೀರ್ ಸಾವು ಕಂಡಿದ್ದು ಶಾಕ್ ಆಗಿತ್ತು.
ವಿಧಿಯೇ ಅಷ್ಟು ಎಂದು ಹಳಿಯುತ್ತಲೇ ಸಂಬಂಧಿಕರು ಶವದ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದರು. ಆದರೆ, ಆಸ್ಪತ್ರೆಯಿಂದ ನೀಡಿದ್ದ ಆರು ಲಕ್ಷ ರೂಪಾಯಿ ಬಿಲ್ ಕೇಳಿ ಮತ್ತಷ್ಟು ಶಾಕ್ ಆಗಿದ್ದರು. ಕೊರೊನಾ ಸೋಂಕಿತನನ್ನು ಯಾವ ರೀತಿಯೆಲ್ಲಾ ಸುಲಿದು ಹಿಂಡಬಹುದು, ಅದೆಲ್ಲವನ್ನೂ ಈ ಬಿಲ್ ನಲ್ಲಿ ತೋರಿಸಿದ್ದರು. ಔಷಧಿ ಲೆಕ್ಕ 2.48 ಲಕ್ಷ, ಆಸ್ಪತ್ರೆ ವೈದ್ಯರು ಬಂದು ಹೋಗಿದ್ದರ ಬಾಬ್ತು 78 ಸಾವಿರ, ಪಿಪಿಇ ಕಿಟ್ ಚಾರ್ಜ್ ದಿನಕ್ಕೆ 5 ಸಾವಿರದಂತೆ 60 ಸಾವಿರ, ಐಸಿಯು ರೆಂಟ್, ಬಳಿಕ ಸೆಮಿ ಡಿಲಕ್ಸ್ ರೂಂ ರೆಂಟ್ ಪ್ರತ್ಯೇಕ, ಅದು ಬಿಟ್ಟು ರೂಮ್ ಸರ್ವಿಸಸ್ ಹೆಸರಲ್ಲಿ 74 ಸಾವಿರ, ಡಯಾಬಿಟಿಸ್ ಇಲ್ಲದಿದ್ದರೂ ಅದನ್ನು ಚೆಕ್ ಮಾಡಿದ್ದಕ್ಕೆ ಅದರ ವೈದ್ಯರ ಬಿಲ್ 5 ಸಾವಿರ, ದಿನವೂ ಎಕ್ಸ್ ರೇ ನಡೆಸಿದ್ದಕ್ಕಾಗಿ ಬಿಲ್ (ದಿನವೂ ಯಾರನ್ನೂ ಎಕ್ಸ್ ರೇ ಮಾಡಲ್ಲ), ಸಿಟಿ ಸ್ಕ್ಯಾನ್ ದರ 7700, ಮತ್ತೊಂದು ಬಾರಿ ಸಿಟಿ ಸ್ಕ್ಯಾನ್ 4400 ಬಿಲ್, (ಸರಕಾರಿ ದರ ಪ್ರಕಾರ, ಸಿಟಿ ಸ್ಕ್ಯಾನ್ 1500ಕ್ಕಿಂತ ಹೆಚ್ಚು ಬಿಲ್ ಮಾಡಬಾರದೆಂದಿದೆ),ಆಕ್ಸಿಜನ್ ದರ ಗಂಟೆಗೆ 220 ರೂ.ನಂತೆ 272 ಗಂಟೆಗೆ 59,840 ರೂ., ಐಸಿಯು ನರ್ಸಿಂಗ್ ಚಾರ್ಜ್ ಹೆಸರಲ್ಲಿ ದಿನಕ್ಕೆ 2 ಸಾವಿರದಂತೆ 24 ಸಾವಿರ, ಆನಂತರ ಹೆಮಟೋಲಜಿ, ಬಯೋ ಕೆಮಿಸ್ಟ್ರಿ, ಮೈಕ್ರೋ ಬಯೋಲಜಿ ಇತ್ಯಾದಿ ಏನೆಲ್ಲ ಟೆಸ್ಟಿಂಗ್ ವಿಭಾಗ ಇದೆಯೋ ಅದೆಲ್ಲವನ್ನೂ ಪ್ರತ್ಯೇಕವಾಗಿ ಗುರುತಿಸಿ ಅದರ ಹೆಸರಲ್ಲಿ ಬಿಲ್ ಮಾಡಿದ್ದಾರೆ..
ಕೊರೊನಾ ಹೆಸರಲ್ಲಿ ಈ ರೀತಿಯೂ ಆಸ್ಪತ್ರೆ ಬಿಲ್ ಮಾಡಬಹುದೆಂದು ನಿರೂಪಿಸಿಕೊಟ್ಟವನ ತಲೆಗೆ ಕೊಡಬೇಕು ಎನ್ನುವಷ್ಟು ವಿಚಿತ್ರ ಅನ್ನುವಂತಿದೆ ಈ ಬಿಲ್. 12 ದಿನವೂ ಒಂದೇ ಕಡೆ ಮಲಗಿದ್ದು ಹೆಣವಾಗಿ ಹೊರಬಂದ ವ್ಯಕ್ತಿಯ ತಲೆಗೆ ಕಟ್ಟಿದ ಬಿಲ್ಲನ್ನು ಸಾಧಾರಣ ವ್ಯಕ್ತಿಗಳು ನೋಡಿದರೆ ತಲೆ ತಿರುಗಿ ಬೀಳಬೇಕಷ್ಟೆ. ಯಾಕಂದ್ರೆ, ಕೊರೊನಾ ಸೋಂಕಿತನ ಹೆಸರಲ್ಲಿ ಈ ರೀತಿಯೂ ಮನುಷ್ಯರ ರಕ್ತ ಹೀರಬಹುದು ಎಂಬುದನ್ನು ಈ ಬಿಲ್ ತೋರಿಸಿಕೊಟ್ಟಿದೆ. ಸದಾ ಆಕ್ಸಿಜನಲ್ಲಿಟ್ಟು ಮಲಗಿದ್ದ ವ್ಯಕ್ತಿಗೆ ಎರಡೂವರೆ ಲಕ್ಷ ರೂ. ಮೊತ್ತದ ಔಷಧಿ ಕೊಟ್ಟಿದ್ದಾರೆನ್ನುವುದೇ ಸೋಜಿಗ.
ಕೊರೊನಾ ಸೋಂಕಿನಿಂದ ಉಸಿರಾಟದ ಸಮಸ್ಯೆಗೊಳಗಾಗಿ ಶ್ವಾಸಕೋಶ ದುರ್ಬಲ ಆಗಿರುವುದಕ್ಕೆ ನೇರವಾಗಿ ಆಕ್ಸಿಜನ್ ಕೊಟ್ಟು ಒಂದಷ್ಟು ಆಧರಿಸುವ ಕೆಲಸ ಮಾಡಲಾಗುತ್ತದೆ. ಒಬ್ಬ ಆರೋಗ್ಯವಂತ ವ್ಯಕ್ತಿಯಾಗಿದ್ದರೆ, ಆತನಿಗೆ ಬೇರಾವುದೇ ಅಂಗಗಳಿಗೆ ತೊಂದರೆ ಆಗಿರುವುದಿಲ್ಲ. ಇಷ್ಟೊಂದು ಬಿಲ್ ನೀಡಲಾಗಿರುವ ಯುವಕನಿಗೆ ಬೇರೆ ಯಾವುದೇ ತೊಂದರೆಯೂ ಇರಲಿಲ್ಲ. ಹಾಗಿದ್ದರೂ, ಸತ್ತ ಹೆಣವನ್ನು ಮುಂದಿಟ್ಟು ಆಸ್ಪತ್ರೆಯ ಆಡಳಿತ ನಿಷ್ಕರುಣಿಯಾಗಿ ಲಕ್ಷಾಂತರ ಬಿಲ್ಲನ್ನು ಸಂಬಂಧಿಕರ ತಲೆಗೆ ಕಟ್ಟಿದೆ. ಬಿಲ್ ಬಗ್ಗೆ ಆಕ್ಷೇಪ ಎತ್ತಿದರೆ, ಶವ ಕೊಡುವುದಿಲ್ಲ ಎಂಬ ದರ್ಪ ಬೇರೆ.
ಕೊರೊನಾ ಸೋಂಕಿತರ ಹೆಸರಲ್ಲಿ ಮಂಗಳೂರಿನ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಏಕಪ್ರಕಾರದ ದಂಧೆ ನಡೀತಿದೆ. ಈ ರೀತಿಯ ದಂಧೆ, ಆಸ್ಪತ್ರೆ ಧಣಿಗಳ ಆಟಾಟೋಪ ಜಿಲ್ಲಾಡಳಿತಕ್ಕೆ ಮತ್ತು ಈ ಭಾಗದ ಶಾಸಕರು, ಸಂಸದರಿಗೆಲ್ಲ ಗೊತ್ತಿದ್ದರೂ, ತುಟಿ ಪಿಟಕ್ ಎನ್ನದೆ ಕುಳಿತಿದ್ದಾರೆ. ಇವರಿಗೆ ಸಾಮಾನ್ಯ ಜನರ ಜೀವ, ಅವರು ಪಡುವ ಕಷ್ಟ ಮುಖ್ಯವಾಗಿಲ್ಲ. ಅವರನ್ನು ಹೀರುವ ಜಿಗಣೆಗಳಷ್ಟೇ ಮುಖ್ಯವಾಗಿವೆ.
The coronavirus (COVID-19) pandemic continues to expose the naked greed displayed by some private hospitals in Mangalore charging bills to covid patients in lakhs.
05-10-25 08:08 pm
HK News Desk
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
ಮಕ್ಕಳ ಸಿರಪ್ ; ರಾಜ್ಯದಲ್ಲಿ ಪೂರೈಕೆ ಇಲ್ಲ, ಆತಂಕ ಪಡ...
04-10-25 10:54 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm