ಪಾಂಡವರಕಲ್ಲು ಗರಡಿ ಕ್ಷೇತ್ರ ಅಪವಿತ್ರ ; ಬಾಟಲಿಗಳನ್ನು ಒಡೆದು ಕಿಡಿಗೇಡಿ ಕೃತ್ಯ !

15-05-21 10:38 am       Mangaluru Correspondent   ಕರಾವಳಿ

ಬಡಗ ಕಜೆಕಾರು ಗ್ರಾಮದ ಪಾಂಡವರಕಲ್ಲು ಎಂಬಲ್ಲಿ ಕೊಡಮಣಿತ್ತಾಯ ಗರಡಿಯನ್ನು ದುಷ್ಕರ್ಮಿಗಳು ಅಪವಿತ್ರಗೊಳಿಸಿರುವ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ಬಂಟ್ವಾಳ, ಮೇ 15: ಇಲ್ಲಿನ ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯ ಬಡಗ ಕಜೆಕಾರು ಗ್ರಾಮದ ಪಾಂಡವರಕಲ್ಲು ಎಂಬಲ್ಲಿ ಕೊಡಮಣಿತ್ತಾಯ ಗರಡಿಯನ್ನು ದುಷ್ಕರ್ಮಿಗಳು ಅಪವಿತ್ರಗೊಳಿಸಿರುವ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ಕೊಡಮಣಿತ್ತಾಯ ಪಿಲಿಚಾಮುಂಡಿ ಮತ್ತು ಬ್ರಹ್ಮಬೈದರ್ಕಳ ದೈವಸ್ಥಾನವಿದ್ದು ಅದರ ಸುತ್ತಲೂ ಕಿಡಿಗೇಡಿಗಳು 20 ಕ್ಕೂ ಅಧಿಕ ಬಾಟಲಿಗಳನ್ನು ಒಡೆದು ಚೂರು ಮಾಡಿದ್ದಲ್ಲದೆ, ಸುತ್ತಲೂ ಎಸೆದು ಯಾರೂ ಅಲ್ಲಿ ನಡೆಯಲಾಗದಂತೆ ಮಾಡಿದ್ದಾರೆ.

ಪಾಂಡವರಕಲ್ಲು ಗರಡಿ ಇತಿಹಾಸ ಪ್ರಸಿದ್ಧ ಮತ್ತು ಕಾರಣಿಕದ ಕ್ಷೇತ್ರವಾಗಿದೆ. ಸ್ಥಳೀಯ ಹಿಂದುಗಳು ಸೇರಿದಂತೆ ಮತ ಭೇದ ಇಲ್ಲದೆ ಭಯಭಕ್ತಿಯಿಂದ ನಂಬುವ ಕ್ಷೇತ್ರವಾಗಿದೆ. ಇಂತಹ ಕ್ಷೇತ್ರದಲ್ಲಿ ಕಿಡಿಗೇಡಿ ಕೃತ್ಯ ನಡೆದಿರುವುದು ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು ಹಿಂದು ಸಂಘಟನೆ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೃತ್ಯಕ್ಕೆ ಕಾರಣವಾದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಹಿಂದು ಜಾಗರಣ ವೇದಿಕೆಯ ಮುಖಂಡರು ಒತ್ತಾಯಿಸಿದ್ದಾರೆ.

Bantwal miscreants place glass pieces inside Pandavarakallu Shree Brahma Baidarkala garodi temple. The temple authorities are to file a case in Punjalkatte police station. Recently miscreants have placed condoms and hatred letter in the temple offering box in Mangalore.