ಬ್ರೇಕಿಂಗ್ ನ್ಯೂಸ್
16-05-21 09:53 pm Mangaluru Correspondent ಕರಾವಳಿ
ಮಂಗಳೂರು, ಮೇ 16: ಸಮುದ್ರ ಮಧ್ಯೆ ಸಿಕ್ಕಿಬಿದ್ದು ನೀರುಪಾಲಾಗಿದ್ದ ಐಎನ್ಎಸ್ ಎಲಯನ್ಸ್ ಎನ್ನುವ ಟಗ್ ನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಪವಾಡ ಸದೃಶ ಸಮುದ್ರದಲ್ಲಿ ಈಜಾಡಿ ಬದುಕಿ ಬಂದಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಇದನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸ್ಪಷ್ಟ ಪಡಿಸಿದ್ದಾರೆ.
ಎಲಯನ್ಸ್ ಟಗ್ ನಲ್ಲಿ ಎಂಟು ಜನರಿದ್ದು, ಅದರಲ್ಲಿದ್ದ ಇಬ್ಬರು ಟೈರಿನಲ್ಲಿ ಈಜುತ್ತಾ ಶನಿವಾರ ಉಡುಪಿ ಬಳಿಯ ಸಮುದ್ರದಲ್ಲಿ ದಡ ಸೇರಿದ್ದರು. ಇಂದು ಮತ್ತೊಬ್ಬ ಅದೇ ರೀತಿ ಈಜುತ್ತಲೇ ದಡ ಸೇರಿದ್ದಾನೆ. ಶನಿವಾರ ಒಬ್ಬನ ಶವ ಪಡುಬಿದ್ರಿ ಬಳಿ ಸಿಕ್ಕಿದ್ದರೆ, ಇಂದು ಮತ್ತೊಂದು ಶವ ಸಿಕ್ಕಿದೆ. ಇನ್ನೂ ಮೂವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆದಿದೆ. ಬದುಕಿ ಬಂದ ಮೂವರು ಮಲ್ಪೆ ಮತ್ತು ಉಡುಪಿಯಲ್ಲಿ ಆಸ್ಪತ್ರೆಯಲ್ಲಿದ್ದು ಸುರಕ್ಷಿತವಾಗಿದ್ದಾರೆ. ಇದೇ ವೇಳೆ, ಎಲಯನ್ಸ್ ಟಗ್ ಪಡುಬಿದ್ರಿ ಸಮುದ್ರದಲ್ಲಿ ದಡಕ್ಕೆ ಬಂದಿದ್ದು ಅದರಲ್ಲಿ ಯಾರಾದ್ರೂ ಸಿಕ್ಕಿಕೊಂಡಿದ್ದಾರೆಯೇ ಎಂದು ಕೋಸ್ಟ್ ಗಾರ್ಡ್ ಸಿಬಂದಿ ತನಿಖೆ ನಡೆಸುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಮಂಗಳೂರಿನ ಎಂಆರ್ ಪಿಎಲ್ ನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಅಲಯನ್ಸ್ ಟಗ್ ಶುಕ್ರವಾರ ಕೆಲಸ ಮುಗಿಸಿ, ನಿರ್ಗಮಿಸುವ ಹಾದಿಯಲ್ಲಿತ್ತು. ಚಂಡಮಾರುತ ಹಿನ್ನೆಲೆಯಲ್ಲಿ ಎನ್ಎಂಪಿಟಿ ಬಂದರಿನಿಂದ ದಡಕ್ಕೆ ಬರುವಂತೆ ಸೂಚನೆ ನೀಡಲಾಗಿತ್ತೆಂದು ಅಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಅವರು ಯಾಕೆ ಬಂದಿರಲಿಲ್ಲ ಎನ್ನುವುದು ಗೊತ್ತಾಗಿಲ್ಲ. ಈ ಬಗ್ಗೆ ಎನ್ಎಂಪಿಟಿ ಮತ್ತು ಎಂಆರ್ ಪಿಎಲ್ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ನಿರ್ಲಕ್ಷ್ಯದಿಂದ ಈ ಘಟನೆ ಆಗಿದೆಯೋ ಎನ್ನುವ ಬಗ್ಗೆ ರಾಜ್ಯ ಸರಕಾರಕ್ಕೆ ವರದಿ ನೀಡಲಿದ್ದೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
READ: ಎಂಆರ್ ಪಿಎಲ್ ಟಗ್ ಬೋಟ್ ಸಮುದ್ರ ಮಧ್ಯೆ ಪಲ್ಟಿ ; ಆರು ಮಂದಿ ನಾಪತ್ತೆ , ಒಬ್ಬನ ಶವ ಪತ್ತೆ , ಇಬ್ಬರು ಪವಾಡಸದೃಶ ಪಾರು !
MRPL Tug boat capsized due to Cyclone Tauktae one Missing Fishermen swims ashore says Mangalore Dc Dr Rajendra Kumar. The search operation is going on for the missing three.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm