ಹರೇಕಳದಲ್ಲಿ ಕೃತಕ ನೆರೆ; ಅಣೆಕಟ್ಟಿನ ಕಾಮಗಾರಿ ಸಲಕರಣೆ ನದಿಪಾಲು !

16-05-21 11:06 pm       Mangaluru Correspondent   ಕರಾವಳಿ

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು ಹರೇಕಳ ಬಳಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿಯ ಕಬ್ಬಿಣದ ಸಲಕರಣೆಗಳು ನೀರುಪಾಲಾಗಿವೆ.

ಕೊಣಾಜೆ, ಮೇ 16: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗಿದ್ದು ಹರೇಕಳ ಬಳಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿಯ ಕಬ್ಬಿಣದ ಸಲಕರಣೆಗಳು ನೀರುಪಾಲಾಗಿವೆ.

ಹರೇಕಳದಲ್ಲಿ 192 ಕೋಟಿ ವೆಚ್ಚದಲ್ಲಿ ಹರೇಕಳ - ಅಡ್ಯಾರ್ ಸೇತುವೆ ಮತ್ತು ಅಣೆಕಟ್ಟು ಕಾಮಗಾರಿ ನಡೆಯುತ್ತಿದ್ದು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದೆ. ಕಾಮಗಾರಿ‌ ಪ್ರದೇಶದಲ್ಲಿ‌ ನೀರಿನ ಮಟ್ಟ ಏಕಾಏಕಿ ಏರಿಕೆಯಾದ ಹಿನ್ನೆಲೆಯಲ್ಲಿ ‌ಅಪಾರ ಮೌಲ್ಯದ ಕಾಮಗಾರಿ ಪರಿಕರಗಳು ನದಿ ನೀರಿಗೆ ಕೊಚ್ಚಿ ಹೋಗಿರುವುದಾಗಿ ಹೇಳಲಾಗುತ್ತಿದೆ.

ಕಾಮಗಾರಿ ನಿರ್ಮಾಣದ ವೇಳೆ ಹಾಕಲಾಗಿದ್ದ ಮೋರಿ, ಕಬ್ಬಿಣದ ತುಂಡುಗಳು, ಸಿಮೆಂಟ್ ಗೋಣಿಗಳು ನೀರಿಗೆ ಕೊಚ್ಚಿ ಹೋಗಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.

ಅಲ್ಲದೆ ಅಣೆಕಟ್ಟು ನಿರ್ಮಾಣದ ಜಾಗದಲ್ಲಿ ನದಿ‌ ನೀರಿನ ಮಟ್ಟ ಹೆಚ್ಚಾಗಿ ಹಾಗೂ ನೀರು ಕೂಡ ಶೇಖರಣೆಗೊಂಡು ಹರೇಕಳ ಜಂಕ್ಷನ್ ವರೆಗೂ ನೀರು  ತುಂಬಿಕೊಂಡಿದ್ದು ಅಪಾಯ ಮಟ್ಟದಲ್ಲಿ ಹರಿಯಲಾರಂಭಿಸಿತ್ತು. ಭಾನುವಾರ ಮಧ್ಯಾಹ್ನದ ವೇಳೆಗೆ ನೀರಿನ ಮಟ್ಟ ಕಡಿಮೆಯಾಗಿದೆ.

The ongoing work on the Adyar-Harekala vented dam-cum bridge was affected as the Netravati river swelled with heavy flow of water, owing to incessant rainfall caused by cyclone Tauktae.