ಕುಡ್ಲದ ಕುವರಿ ಆಡ್ಲಿನ್ ಕ್ಯಾಸ್ಟಲಿನೋಗೆ ವಿಶ್ವಸುಂದರಿ ಥರ್ಡ್ ರನ್ನರ್ ಅಪ್ ಕಿರೀಟ !

17-05-21 04:49 pm       Mangalore Correspondent   ಕರಾವಳಿ

ಮಂಗಳೂರು ಮೂಲದ ಆಡ್ಲಿನ್ ಕ್ಯಾಸ್ಟಲಿನೋ ಅಮೆರಿಕದ ಫ್ಲಾರಿಡಾದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆ- 2021 ರಲ್ಲಿ ಮೂರನೇ ರನ್ನರ್ ಅಪ್ ಕಿರೀಟ ಪಡೆದಿದ್ದು ಹೊಸ ದಾಖಲೆ ಬರೆದಿದ್ದಾರೆ.

Photo credits : beautypageants

ಫ್ಲಾರಿಡಾ, ಮೇ 17:ಭಾರತದ ಸ್ಪರ್ಧಿಯಾಗಿ ಪಾಲ್ಗೊಂಡಿದ್ದ ಮಂಗಳೂರು ಮೂಲದ ಆಡ್ಲಿನ್ ಕ್ಯಾಸ್ಟಲಿನೋ ಅಮೆರಿಕದ ಫ್ಲಾರಿಡಾದಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆ- 2021 ರಲ್ಲಿ ಮೂರನೇ ರನ್ನರ್ ಅಪ್ ಕಿರೀಟ ಪಡೆದಿದ್ದು ಹೊಸ ದಾಖಲೆ ಬರೆದಿದ್ದಾರೆ. 20 ವರ್ಷಗಳ ಬಳಿಕ ಭಾರತದ ಕುವರಿಯೊಬ್ಬಳು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಟಾಪ್ 5ರ ಸ್ಥಾನದಲ್ಲಿ ಗುರುತಿಸಲ್ಪಟ್ಟಿದ್ದಾರೆ.

ಫ್ಲಾರಿಡಾದ ಕ್ಯಾಸಿನೋ ಒಂದರಲ್ಲಿ ನಡೆದ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಜಗತ್ತಿನ ವಿವಿಧ ದೇಶಗಳ 74 ಸುಂದರಿಯರು ಸ್ಪರ್ಧಿಗಳಾಗಿದ್ದರು. ಕೊನೆಯ ಸುತ್ತಿನಲ್ಲಿ ಮೆಕ್ಸಿಕೋ ಸುಂದರಿ ಆಂಡ್ರಿಯಾ ಮೇಝಾ ಮಿಸ್ ಯುನಿವರ್ಸ್ ಆಗಿ ಆಯ್ಕೆಯಾಗಿದ್ದಾರೆ. ಬ್ರೆಜಿಲ್ ದೇಶದ ಜೂಲಿಯಾ ಗಾಮಾ ಮೊದಲ ರನ್ನರ್ ಅಪ್ ಕಿರೀಟ ಎತ್ತಿದರೆ, ಪೆರು ದೇಶದ ಮಸೇಟಾ ಡೆಲ್ ಕ್ಯಾಸ್ಟಿಲ್ಲೋ ದ್ವಿತೀಯ ರನ್ನರ್ ಅಪ್ ಆಗಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಮಿಸ್ ವರ್ಲ್ಡ್ ಅಂತಿಮ ಸುತ್ತಿನ ಕಾರ್ಯಕ್ರಮದಲ್ಲಿ ಹಾಲಿವುಡ್ ನಟಿ ಮರಿಯಾ ಲೋಪೆಜ್ ಮತ್ತು 2012ರ ಮಿಸ್ ಯುನಿವರ್ಸ್ ಒಲಿವಿಯಾ ಕುಲ್ಪೋ ಅತಿಥಿಗಳಾಗಿದ್ದರು.

ಕುಡ್ಲದ ಕುವರಿಗೆ ಪ್ರಶಸ್ತಿಯ ಕಿರೀಟ

ಅಂದಹಾಗೆ, ಥರ್ಡ್ ರನ್ನರ್ ಅಪ್ ಪ್ರಶಸ್ತಿಯ ಗರಿ ಸಿಕ್ಕಿಸಿಕೊಂಡಿರುವ ಆಡ್ಲಿನ್ ಕ್ಯಾಸ್ಟಲಿನೋ ಮೂಲತಃ ಮಂಗಳೂರು ಮೂಲದವರು. ಮಂಗಳೂರು ಮೂಲದ ಕ್ಯಾಥೊಲಿಕ್ ಕುಟುಂಬದ ಕುವರಿ ಆಡ್ಲಿನ್ ಕ್ಯಾಸ್ಟಲಿನೋ. ಅಲ್ಫೋನ್ಸ್ ಮತ್ತು ಮೀರಾ ಕ್ಯಾಸ್ಟಲಿನೋ ದಂಪತಿಯ ಪುತ್ರಿಯಾಗಿರುವ ಆಡ್ಲಿನ್, ಕುವೈಟಿನಲ್ಲಿ ಜನಿಸಿದ್ದರು. ಪ್ರಾಥಮಿಕ ಶಾಲೆಯನ್ನು ಕುವೈಟಿನಲ್ಲಿ ಪೂರೈಸಿದ್ದ ಆಡ್ಲಿನ್ ತನ್ನ 15ನೇ ವರ್ಷದಲ್ಲಿ ಮುಂಬೈಗೆ ಬಂದಿದ್ದು ಅಲ್ಲಿನ ಸೈಂಟ್ ಕ್ಸೇವಿಯರ್ ಹೈಸ್ಕೂಲಿನಲ್ಲಿ ಪ್ರೌಢಶಾಲೆ ಕಲಿತಿದ್ದರು. ಬಳಿಕ ಮುಂಬೈನ ವಿಲ್ಸನ್ ಕಾಲೇಜಿನಲ್ಲಿ ಪದವಿ ಮುಗಿಸಿದ್ದರು. ಇಂಗ್ಲಿಷ್, ಹಿಂದಿ, ಕನ್ನಡದ ಜೊತೆಗೆ ತಾಯಿ ಭಾಷೆ ಕೊಂಕಣಿ ಮಾತನಾಡುವ ಆಡ್ಲಿನ್ ಕ್ಯಾಸ್ಟಲಿನೋ ಕರ್ನಾಟಕದ ಕರಾವಳಿಯ ಹೆಮ್ಮೆಯ ಕುವರಿಯಾಗಿ ವಿಶ್ವದ ಗಮನ ಸೆಳೆದಿದ್ದಾರೆ.

ಬಿಎ ಪದವಿ ಬಳಿಕ ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ಆಡ್ಲಿನ್ 2018ರ ಆನ್ ಲೈನ್ ಮ್ಯಾಗಜಿನ್ನಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ಮುಂಬೈನ ಕೋಕಾಬೆರಿ ಟ್ರೈನಿಂಗ್ ಅಕಾಡೆಮಿಯಲ್ಲಿ ಮಾಡೆಲಿಂಗ್ ಅಭ್ಯಾಸ ನಡೆಸುತ್ತಿದ್ದರು. 2019ರಲ್ಲಿ ಮಿಸ್ ಕೋಕಾಬೆರಿ ದಿವಾ ಆಗಿ ಮೊದಲ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರು. ಈಕೆಯ ಕುಟುಂಬಸ್ಥರು ಉಡುಪಿ ಜಿಲ್ಲೆಯ ಉದ್ಯಾವರದವರಾಗಿದ್ದು ಈಗ ಮುಂಬೈನಲ್ಲಿ ನೆಲೆಸಿದ್ದಾರೆ. 

The world got its 69th Miss Universe in Mexico's Andrea Meza on Monday. The event held in Florida saw India's Adeline Castelino coming in at the fourth spot. The 22-year-old, who traces her roots to Udupi in Karnataka, won Miss Diva 2020 making her India's representative at Miss Universe, this year.