ಎಂಆರ್ ಪಿಎಲ್ ಟಗ್ ದುರಂತ ; ತನಿಖೆ ನಡೆಸಿ ವರದಿ ನೀಡಲು ಜಿಲ್ಲಾಧಿಕಾರಿಗೆ ಸಚಿವರ ಸೂಚನೆ

17-05-21 11:29 pm       Mangaluru Correspondent   ಕರಾವಳಿ

ಸಮುದ್ರ ಮಧ್ಯೆ ಎಂಆರ್ ಪಿಎಲ್ ಕಂಪನಿಯ ಗುತ್ತಿಗೆ ಕಾರ್ಮಿಕರಿದ್ದ ಟಗ್ ವೆಸಲ್ಸ್ ದುರಂತಕ್ಕೀಡಾದ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ದ.ಕ. ಜಿಲ್ಲಾಧಿಕಾರಿಗೆ ಕಂದಾಯ ಸಚಿವ ಆರ್. ಅಶೋಕ್ ಸೂಚನೆ ನೀಡಿದ್ದಾರೆ. 

ಮಂಗಳೂರು, ಮೇ 17: ಸಮುದ್ರ ಮಧ್ಯೆ ಎಂಆರ್ ಪಿಎಲ್ ಕಂಪನಿಯ ಗುತ್ತಿಗೆ ಕಾರ್ಮಿಕರಿದ್ದ ಟಗ್ ವೆಸಲ್ಸ್ ದುರಂತಕ್ಕೀಡಾದ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ದ.ಕ. ಜಿಲ್ಲಾಧಿಕಾರಿಗೆ ಕಂದಾಯ ಸಚಿವ ಆರ್. ಅಶೋಕ್ ಸೂಚನೆ ನೀಡಿದ್ದಾರೆ. 

ಚಂಡಮಾರುತದ ಪರಿಶೀಲನೆಗಾಗಿ ಇಂದು ಮಂಗಳೂರಿಗೆ ಆಗಮಿಸಿದ್ದ ಸಚಿವ ಅಶೋಕ್, ಎನ್ಎಂಪಿಟಿ ಬಂದರಿಗೆ ತೆರಳಿ ಪರಿಶೀಲನೆ ಕೈಗೊಂಡರು. ಕಾರ್ಮಿಕರ ಬಳಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ದುರಂತ ಮತ್ತು ಚಂಡಮಾರುತ ವೈಪರೀತ್ಯದಿಂದ ಆಗಿರುವ ಹಾನಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. 

ಘಟನೆ ಬಗ್ಗೆ ಬೋಟ್ ಕಂಪನಿ ಆರೋಪ- ಪ್ರತ್ಯಾರೋಪ ಮಾಡುತ್ತಿದೆ. ಹೀಗಾಗಿ ತನಿಖೆ ನಡೆಸಲು ಆದೇಶ ಮಾಡಲಾಗಿದೆ. ತನಿಖಾ ವರದಿ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಅಲ್ಲದೆ, ಬೋಟ್ ದುರಂತದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂ. ಪರಿಹಾರ ನೀಡುವಂತೆ ಎಂಆರ್ ಪಿಎಲ್ ಗೆ ಅಶೋಕ್ ಸೂಚನೆ ನೀಡಿದ್ದಾರೆ. 

ಇದೇ ವೇಳೆ, ಚಂಡಮಾರುತದಿಂದ ದ.ಕ. ಜಿಲ್ಲೆಯಲ್ಲಿ ಹಾನಿಗೊಳಗಾದ 182 ಮನೆಗಳಿಗೆ ತಲಾ ಹತ್ತು ಸಾವಿರ ರೂ., ಭಾಗಶಃ ಮನೆ ಹಾನಿಯಾದವರಿಗೆ 1 ಲಕ್ಷ ರೂ., ಪೂರ್ತಿ ಮನೆ ಹಾನಿಯಾದವರಿಗೆ 5 ಲಕ್ಷ ಪರಿಹಾರ ನೀಡುವಂತೆ ಸಚಿವರು ದ.ಕ. ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ.

Cyclone Tauktae that brought with it strong winds and rains caused heavy damages to the coastal belt of Karnataka. Speaking on this matter, revenue minister R Ashok said,