ಮಂಗಳೂರು ಎಸ್ಪಿ ಕಚೇರಿಯಲ್ಲಿದ್ದ ಗರ್ಭಿಣಿ ಮಹಿಳಾ ಅಧಿಕಾರಿ ಕೋವಿಡ್ ಸೋಂಕಿಗೆ ಬಲಿ !

18-05-21 12:25 pm       Mangalore Correspondent   ಕರಾವಳಿ

ಮಂಗಳೂರಿನ ದ.ಕ. ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಪ್ರೊಬೇಶನರಿ ಪಿಎಸ್ಐ ಆಗಿ ಕರ್ತವ್ಯದಲ್ಲಿದ್ದ ಮಹಿಳಾ ಅಧಿಕಾರಿಯೊಬ್ಬರು ಕೋವಿಡ್ ಸೋಂಕಿಗೆ ತುತ್ತಾಗಿ ಸಾವು ಕಂಡಿದ್ದಾರೆ. 

ಮಂಗಳೂರು, ಮೇ 18: ಮಂಗಳೂರಿನ ದ.ಕ. ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಪ್ರೊಬೇಶನರಿ ಪಿಎಸ್ಐ ಆಗಿ ಕರ್ತವ್ಯದಲ್ಲಿದ್ದ ಮಹಿಳಾ ಅಧಿಕಾರಿಯೊಬ್ಬರು ಕೋವಿಡ್ ಸೋಂಕಿಗೆ ತುತ್ತಾಗಿ ಸಾವು ಕಂಡಿದ್ದಾರೆ. 

ಕೋಲಾರ ಮೂಲದ ಶ್ಯಾಮಿಲಿ (24) ಮೃತಪಟ್ಟ ಅಧಿಕಾರಿ. ಕೊರೊನಾ ಸೋಂಕಿಗೆ ಬಲಿಯಾದ ಅತಿ ಕಿರಿಯ ಅಧಿಕಾರಿಯೆಂದು ಡಿಜಿಪಿ ಪ್ರವೀಣ್ ಸೂದ್ ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದಾರೆ. 

ಕಳೆದ 2021ರ ಜನವರಿ 11ರಂದು ಪೊಲೀಸ್ ಇಲಾಖೆ ಸೇರಿದ್ದ ಶ್ಯಾಮಿಲಿ ಅವರನ್ನು ದ.ಕ. ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಆಡಳಿತ ವಿಭಾಗದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕೋಲಾರ ಮೂಲದ ಶ್ಯಾಮಿಲಿ ಗರ್ಭಿಣಿಯಾಗಿದ್ದ ಕಾರಣ ಎರಡು ತಿಂಗಳ ಹಿಂದೆ ಇಲಾಖಾ ರಜೆ ಪಡೆದು ತಮ್ಮ ಊರು ಕೋಲಾರಕ್ಕೆ ತೆರಳಿದ್ದರು. ಊರಲ್ಲಿದ್ದ ವೇಳೆ ಕೋವಿಡ್ ಸೋಂಕಿಗೆ ಒಳಗಾದ ಶ್ಯಾಮಿಲಿ ಅವರನ್ನು ಕಳೆದ ಮೇ 2ರಂದು ಕೋಲಾರದ ಆರ್.ಎಂ. ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಕೊರೊನಾ ಲಸಿಕೆ ನೀಡಿರಲಿಲ್ಲ. 

ಚಿಕಿತ್ಸೆಗೆ ಸ್ಪಂದಿಸದ ಶ್ಯಾಮಿಲಿ ಇಂದು ನಸುಕಿನಲ್ಲಿ ಅಸುನೀಗಿದ್ದಾರೆ ಎಂದು ದ.ಕ. ಎಸ್ಪಿ ಋಷಿಕುಮಾರ್ ಸೋನವಾನೆ ತಿಳಿಸಿದ್ದಾರೆ.

In a tragic incident, a Pregnant woman police constable from Kolar working in SP office Mangalore died of Covid 19. The deceased has been identified as Shamili (24). As she was expecting she did not take the covid vaccine.DGP Praveen Sood has also tweeted.