ಬ್ರೇಕಿಂಗ್ ನ್ಯೂಸ್
19-05-21 04:50 pm Mangalore Correspondent ಕರಾವಳಿ
ಉಳ್ಳಾಲ, ಮೇ 19: ಲಾಕ್ ಡೌನ್ ಮಾಡಿ ಕೊರೊನಾ ಕಡಿಮೆ ಆಗಿಲ್ಲ, ಮೂರು ಸಾವಿರ ಸಂಖ್ಯೆಯಲ್ಲಿದ್ದಾಗ ಕಡಿಮೆ ಆಗದ ಕೊರೊನಾ ಮೂರು ಲಕ್ಷ ಪ್ರಕರಣ ಇರುವಾಗ ಹತೋಟಿಗೆ ಬರ್ತದಾ? ಸರಕಾರಕ್ಕೆ ಬದ್ಧತೆ, ಜನರ ಬಗ್ಗೆ ಕಾಳಜಿ ಇಲ್ಲ. ಪ್ರತಿ ಮನೆಗೂ 10,000 ರೂಪಾಯಿ ಮತ್ತು ಆಹಾರ ಕಿಟ್ ನೀಡಿ ಸಂಪೂರ್ಣ ಲಾಕ್ ಡೌನ್ ಮಾಡಿ ಎಂದು ಮಾಜಿ ಸಚಿವ, ಶಾಸಕ ಯು.ಟಿ ಖಾದರ್ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಕುರ್ನಾಡು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಭಾರತೀಯರಿಗೆ ಲಸಿಕೆ ಕೊಡದೆ ಬಾಂಗ್ಲಾ , ಪಾಕಿಸ್ತಾನಕ್ಕೆ ಲಸಿಕೆ ಕೊಡಲು ಯಾಕೆ ಮುಂದಾದಿರಿ ಎಂದು ಪ್ರಶ್ನಿಸಿದ ಅವರು ಇತರ ದೇಶದಲ್ಲಿ ಜನರ ಆರೋಗ್ಯ ನೋಡಿಕೊಂಡು ಮದ್ದು ವಿತರಿಸಿದರೆ ಬಿಜೆಪಿ ಸರಕಾರದಲ್ಲಿ ದಾಸ್ತಾನು ನೋಡಿ ಮದ್ದು ವಿತರಿಸಲಾಗುತ್ತದೆ ಎಂದು ಲೇವಡಿ ಮಾಡಿದರು.
ಕೊರೊನಾ ನಿಯಂತ್ರಣಕ್ಕಾಗಿ ಸ್ಥಳೀಯ ಸಂಸ್ಥೆಗಳ ಜೊತೆಗೆ ಚರ್ಚಿಸಿಕೊಂಡು ಕ್ಷೇತ್ರದ ಎಲ್ಲ ಗ್ರಾಮ ಪಂಚಾಯಿತಿ, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ಭೇಟಿ ಮಾಡಿದ್ದೇವೆ. ಕೊರೊನಅ ನಿಯಂತ್ರಣಕ್ಕೆ ಮುಖ್ಯವಾಗಿ ಟಾಸ್ಕ್ ಫೋರ್ಸ್ ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕಿದೆ ಎಂದವರು ಹೇಳಿದರು.
ಲ್ಯಾಬ್ ಗೆ ಕೊರೊನಾ ಟೆಸ್ಟ್ ಗೆ ಹೋದವರ ಮಾಹಿತಿ ತಕ್ಷಣ ಗ್ರಾಮ ಪಂಚಾಯಿತಿಗೆ ತಲುಪಬೇಕು. ವರದಿ ಬರೋ ತನಕ ಎಲ್ಲೂ ಹೋಗದಂತೆ ರೋಗಿಯ ಮನವೊಲಿಸಬೇಕು. ಪಾಸಿಟಿವ್ ಕಂಡುಬಂದರೆ ಫಾ. ಮುಲ್ಲರ್ ವಿಶ್ರಾಂತಿ ಕೇಂದ್ರ, ಕೊಣಾಜೆಯ ಲೇಡೀಸ್ ಹಾಸ್ಟೆಲ್, ದೇರಳಕಟ್ಟೆಯ ಯೇನಪೊಯ ಹಸನ್ ಚೇಂಬರ್ ಅಥವಾ ಮನೆಯಲ್ಲಿ ಉಳಿಯುವವರಿಗೆ ಸಹಕಾರ ಕೊಡುವುದರ ಮೂಲಕ ನಿಯಂತ್ರಿಸಲು ಸಾಧ್ಯ ಎಂದರು.
ಅಂಗನವಾಡಿ ,ಆಶಾ ಕಾರ್ಯಕರ್ತೆಯರಿಗೆ ಎನ್ - 90 ಮಾಸ್ಕ್ ವಿತರಣೆಗೆ ಪಂಚಾಯಿತಿಗೆ ಅವಕಾಶ ನೀಡಲಾಗಿದೆ. ಸರಕಾರ ಆಶಾ ಕಾರ್ಯಕರ್ತರು, ಅಂಗನವಾಡಿ, ದಾದಿಯರ ವೇತನವನ್ನು ಆದಷ್ಟು ಶೀಘ್ರದಲ್ಲಿ ನೀಡಬೇಕು. ಈ ಕಾಲಘಟ್ಟದಲ್ಲೂ ಪಡಿತರ ಕಟ್ ಮಾಡುವುದು ಸರಿಯಲ್ಲ, ಸರಕಾರವು ಅವ್ಯವಸ್ಥೆಗಳನ್ನ ಸರಿಪಡಿಸಬೇಕಿದೆ ಎಂದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಕುರ್ನಾಡು ಗ್ರಾಪಂ ಅಧ್ಯಕ್ಷ ಗಣೇಶ್ ನಾಯ್ಕ್ ಕುರ್ನಾಡು, ಉಪಾಧ್ಯಕ್ಷೆ ಪ್ರೇಮಾ ಗಟ್ಟಿ , ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ದೇವದಾಸ್ ಭಂಡಾರಿ ಕುರ್ನಾಡು, ಖಾಸಿಂ, ಲೋಲಾಕ್ಷಿ ಮೊದಲಾದವರು ಇದ್ದರು.
Read: ಪಡಿತರ ವಿತರಣೆಯಲ್ಲೂ ಸಮಸ್ಯೆ ; ರಾಜ್ಯ ಸರಕಾರದ ವಿರುದ್ಧ ಖಾದರ್ ವಾಗ್ದಾಳಿ
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
27-11-24 11:04 pm
Mangalore Correspondent
Muneer Katipalla, Mangalore, Anupam Agarwal;...
27-11-24 09:36 pm
Dr Chinnappa Gowda, Mangalore: 25 ಕೋಟಿ ವ್ಯಯಿಸ...
27-11-24 08:50 pm
Mangalore MP Captain Brijesh Chowta, Chouhan...
27-11-24 08:39 pm
Mangalore News: ಬ್ರಿಟಿಷರ ಕಾಲದ ಜಿಲ್ಲಾಧಿಕಾರಿ ಕಚ...
27-11-24 08:28 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm