ಡಾ.ಕಕ್ಕಿಲ್ಲಾಯರು ನಡೆದುಕೊಂಡಿದ್ದು ತಪ್ಪು ; ಐಎಂಎ ವೈದ್ಯರ ಖಂಡನೆ

19-05-21 07:19 pm       Mangaluru Correspondent   ಕರಾವಳಿ

ಸೂಪರ್ ಮಾರ್ಕೆಟಿನಲ್ಲಿ ಮಾಸ್ಕ್ ಬಗ್ಗೆ ವಾಗ್ವಾದ ನಡೆಸಿರುವ ಡಾ.ಬಿ.ಎಸ್ ಕಕ್ಕಿಲ್ಲಾಯರ ನಡೆಯನ್ನು ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕ ಹಾಗೂ ಮಂಗಳೂರಿನ ಮೆಡಿಕಲ್ ಕನ್ಸಲ್ಟಂಟ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಖಂಡಿಸಿದ್ದಾರೆ.

ಮಂಗಳೂರು, ಮೇ 19: ಸೂಪರ್ ಮಾರ್ಕೆಟಿನಲ್ಲಿ ಮಾಸ್ಕ್ ಬಗ್ಗೆ ವಾಗ್ವಾದ ನಡೆಸಿರುವ ಡಾ.ಬಿ.ಎಸ್ ಕಕ್ಕಿಲ್ಲಾಯರ ನಡೆಯನ್ನು ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕ ಹಾಗೂ ಮಂಗಳೂರಿನ ಮೆಡಿಕಲ್ ಕನ್ಸಲ್ಟಂಟ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಖಂಡಿಸಿದ್ದಾರೆ.

ಸರಕಾರದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಹಾಕದೆ ಜನರಿಗೆ ತಪ್ಪು ಸಂದೇಶ ನೀಡುವಂತೆ ನಡೆದುಕೊಂಡಿರುವುದು ಮತ್ತು ಜವಾಬ್ದಾರಿ ಮರೆತು ವರ್ತಿಸಿರುವುದು ತಪ್ಪು. ವೈದ್ಯರು ನೀಡಿರುವ ಹೇಳಿಕೆ ಮತ್ತು ನಡೆದಿರುವ ಘಟನೆಯ ವಿಚಾರದಲ್ಲಿ ವೈದ್ಯಕೀಯ ಸಂಘ ಯಾವುದೇ ರೀತಿಯ  ಬೆಂಬಲ ನೀಡುವುದಿಲ್ಲ ಎಂದು ಐಎಂಎ ಮಂಗಳೂರು ಘಟಕದ ಹೆಸರಲ್ಲಿ ಸಂಘದ ಕಾರ್ಯದರ್ಶಿ ಡಾ. ಅನಿಮೇಶ್ ಜೈನ್ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಸರಕಾರದ ಮಾರ್ಗಸೂಚಿ, ನಿಯಮಗಳನ್ನು ಸಾರ್ವಜನಿಕ ಜಾಗದಲ್ಲಿ ಪಾಲನೆ ಮಾಡಬೇಕಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನ ಪ್ರಕಾರ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಸ್ಯಾನಿಟೈಸ್ ಮಾಡಿಕೊಳ್ಳುವುದು ಇತ್ಯಾದಿ ನಿಯಮಗಳನ್ನು ಸರಕಾರ ರೂಪಿಸಿದ್ದು ಇದನ್ನು ವೈದ್ಯಕೀಯ ಸಂಘವೂ ಬೆಂಬಲಿಸುತ್ತದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ಸೋಂಕನ್ನು ದೂರ ಮಾಡೋಣ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

IMA Condemns the incident of Mangalore Doctor Srinivas Kamkilaya found without a mask in the supermarket. The Indian Medical Association, Mangalore states that they don't stand by any actions or statements made by the doctor and strongly condemn them.