ಬ್ರೇಕಿಂಗ್ ನ್ಯೂಸ್
22-05-21 02:42 pm Mangalore Correspondent ಕರಾವಳಿ
ಮಂಗಳೂರು, ಮೇ 22: 25 ವರ್ಷಗಳ ಹಿಂದೆ ಸುರತ್ಕಲ್ ನಲ್ಲಿ ಎಂಆರ್ ಪಿಎಲ್ ಸ್ಥಾಪನೆಯಾದಾಗ ಸಾವಿರಾರು ಎಕ್ರೆ ಭೂಮಿ ಸ್ವಾಧೀನ ಆಗಿತ್ತು. ಆ ಸಂದರ್ಭದಲ್ಲಿ ರಾಜಕಾರಣಿಗಳು ದೊಡ್ಡ ಕೈಗಾರಿಕೆಗಳು ನಮ್ಮೂರಿಗೆ ಬರಬೇಕು, ನಮ್ಮ ಯುವಕರಿಗೆ ಉದ್ಯೋಗ ಸಿಗಬೇಕು ಎಂದು ಭರವಸೆಯ ಮಾತುಗಳನ್ನಾಡಿದ್ದರು. ಹೌದು.. ಸಾವಿರಾರು ಎಕ್ರೆ ವ್ಯಾಪ್ತಿಯಲ್ಲಿರುವ ಎಂಆರ್ ಪಿಎಲ್ ರಿಫೈನರಿ ಫ್ಯಾಕ್ಟರಿಯಲ್ಲಿ ಸಾವಿರಾರು ಜನರಿಗೆ ಉದ್ಯೋಗ ಸಿಕ್ಕಿದೆ. ಆದರೆ, ಅದರಲ್ಲಿ ಕರಾವಳಿ ಭಾಗದ ಮಂದಿಗೆ ಉದ್ಯೋಗ ಸಿಕ್ಕಿದ್ದು ಜುಜುಬಿ ಮಾತ್ರ.
ಕರಾವಳಿಯ ಶಾಸಕರು ಮತ್ತು ಸಂಸದರ ನಿರ್ಲಕ್ಷ್ಯದಿಂದಾಗಿ ಈ ಭಾಗದ ಯುವಕರಿಗೆ ಎಂಆರ್ ಪಿಎಲ್ ಉದ್ಯೋಗ ಗಗನ ಕುಸುಮವಾಗಿದೆ. ಎಂಆರ್ ಪಿಎಲ್ ಮೂರನೇ ವಿಸ್ತರಣಾ ಘಟಕದಲ್ಲಿ ಈ ಬಾರಿ 250ಕ್ಕೂ ಹೆಚ್ಚು ಉದ್ಯೋಗಿಗಳ ನೇಮಕ ಪ್ರಕ್ರಿಯೆ ಆಗುತ್ತಿದೆ. ಆದರೆ, ಈ ಪೈಕಿ ಕರ್ನಾಟಕದ ಜನಕ್ಕಾಗಲೀ, ಸ್ಥಳೀಯರಿಗಾಗಲೀ ಯಾವುದೇ ಮೀಸಲು ಲಭ್ಯವಾಗಿಲ್ಲ. ಇದೀಗ 183 ಮಂದಿಗೆ ಆಯ್ಕೆ ಪ್ರಕ್ರಿಯೆ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಅದರಲ್ಲಿ ರಾಜ್ಯದವರು ಆಯ್ಕೆಯಾಗಿದ್ದು ಕೇವಲ 13 ಮಂದಿ ಮಾತ್ರ. ಇದರಿಂದ ಕ್ರುದ್ಧರಾಗಿರುವ ಯುವಕರು ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದು ಈ ಭಾಗದ ಶಾಸಕರು ಮತ್ತು ಸಂಸದರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಬಗ್ಗೆ ಬರೆದುಕೊಂಡಿದ್ದಾರೆ.
ಇದು ಬುದ್ದಿವಂತರ ಜಿಲ್ಲೆಯೆಂದು ಗುರುತಿಸಲ್ಟಟ್ಟ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ದುಸ್ಥಿತಿ. ನಮ್ಮ ಊರಿನಲ್ಲಿ MRPL ಎಂಬ ಅತಿ ದೊಡ್ಡ ಕಂಪನಿ...
Posted by Deekshith Shettigar Konaje on Thursday, May 20, 2021
ಎಂಆರ್ ಪಿಎಲ್ ಕೇಂದ್ರ ಸರಕಾರದ ಅಧೀನ ಸಂಸ್ಥೆಯಾಗಿದ್ದು ಉದ್ಯೋಗ ಆಯ್ಕೆ ಪ್ರಕ್ರಿಯೆ ಸಂದರ್ಭದಲ್ಲಿ ಕರಾವಳಿ ಮತ್ತು ಕರ್ನಾಟಕದ ಜನರಿಗೆ ಇಂತಿಷ್ಟು ಹುದ್ದೆಗಳನ್ನು ಮೀಸಲಿಡುವಂತೆ ಈ ಭಾಗದ ಶಾಸಕರು ಒತ್ತಡ ಹೇರಬಹುದು. ರಾಜ್ಯ ಸರಕಾರದ ಮೂಲಕ ಉದ್ಯೋಗ ಆಯ್ಕೆಯಲ್ಲಿ ಮೀಸಲು ನೀಡುವಂತೆ ಕೇಂದ್ರ ಸರಕಾರಕ್ಕೆ ಒತ್ತಡ ತರಬಹುದು. ಸಂಸದರು ಕೂಡ ಈ ಭಾಗದ ಮಂದಿಗೆ ಉದ್ಯೋಗ ನೀಡುವಂತೆ ಸಲಹೆ, ಸೂಚನೆಗಳನ್ನು ನೀಡಬಹುದು. ಆದರೆ, ಹೋದ ಬಸವ, ಹೌದಾ ಬಸವ ಎನ್ನುವಂತಾಗಿರುವ ಈ ಭಾಗದ ಸಂಸದರು ನಾಡಿನ ಜ್ವಲಂತ ಸಮಸ್ಯೆಗಳಿಗೆ ಕಿವಿಯಾಗಿದ್ದೇ ಇಲ್ಲ.
MRPL ನಲ್ಲಿ ತುಳುವರಿಗೆ ಮತ್ತು ಕರ್ನಾಟಕಕ್ಕೆ ಅನ್ಯಾಯ!! ಇದು ಬುದ್ದಿವಂತರ ಜಿಲ್ಲೆಯೆಂದು ಗುರುತಿಸಲ್ಟಟ್ಟ ನಮ್ಮ ಜಿಲ್ಲೆಯ ದುಸ್ಥಿತಿ. ನಮ್ಮ...
Posted by United Tulunadu on Thursday, May 20, 2021
ಉಡುಪಿ ಮತ್ತು ದಕ್ಷಿಣ ಕನ್ನಡ ಸಂಸದರಾಗಿರುವ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಕಳೆದ ಎರಡು, ಮೂರು ಅವಧಿಗಳಲ್ಲಿ ಜನಪ್ರತಿನಿಧಿಗಳಾಗಿದ್ದಾರೆ. ಆದರೆ, ಎಂಆರ್ ಪಿಎಲ್ ಉದ್ಯೋಗ ಆಯ್ಕೆ ಪ್ರಕ್ರಿಯೆಯಲ್ಲಿ ಇವರಿಂದ ಕನಿಷ್ಠ ಮಟ್ಟದ ಕೈಯಾಡಿಸಲೂ ಸಾಧ್ಯವಾಗಿಲ್ಲ. ಈ ವಿಚಾರದ ಬಗ್ಗೆ ಜಾಲತಾಣದಲ್ಲಿ ಆಕ್ರೋಶಿತ ಯುವಕರು ಪಕ್ಷ ಭೇದ ಮರೆತು ಆಕ್ರೋಶ ತೋಡಿಕೊಂಡಿದ್ದಾರೆ. ಕೈಗಾರಿಕೆಗಳ ಅಭಿವೃದ್ಧಿಗೆ ನಮ್ಮ ಭೂಮಿ ಬೇಕು, ನಿಮ್ಮ ಉದ್ಯೋಗಕ್ಕೆ ನಾವು ಬೇಕಿಲ್ಲ ಎಂದು ಸಿಟ್ಟು ತೋರಿಸಿದ್ದಾರೆ. ಈ ಬಗ್ಗೆ ಕೇಳಿದರೆ, ಉದ್ಯೋಗದ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ನೀವು ಸಮರ್ಥರಾಗಿದ್ದರೆ ಕೆಲಸ ಲಭಿಸುತ್ತದೆ ಎಂಬ ಪುಕ್ಕಟೆ ಸಲಹೆಯನ್ನೂ ಜನಪ್ರತಿನಿಧಿಗಳು ನೀಡಿದ್ದಾಗಿ ಕೆಲವರು ಬರೆದುಕೊಂಡಿದ್ದಾರೆ.
ನಾವು ನಿಮ್ಮಲ್ಲಿ ಭಿಕ್ಷೆ ಬೇಡಿಲ್ಲ. ನಿಮ್ಮ ಭಿಕ್ಷೆಯೂ ಬೇಕಿಲ್ಲ. ನೀವು ಮತಕ್ಕಾಗಿ ಭಿಕ್ಷೆ ಎತ್ತಿದ್ದರಲ್ಲಾ. ನಾವು ಮತ ಹಾಕಿದ ಕರ್ಮಕ್ಕಾಗಿಯಾದರೂ ನೀವು ನಮ್ಮ ಜೊತೆ ನಿಲ್ಲಬೇಕು. ಯಾವುದೋ ಉತ್ತರ ಭಾರತದ ಸಂಸ್ಥೆಯವರು ಆಯ್ಕೆ ಪ್ರಕ್ರಿಯೆ ನಡೆಸುತ್ತಾರೆ. ಸಹಜವಾಗೇ ಉತ್ತರ ಭಾರತದ ಮಂದಿಗೆ ಉದ್ಯೋಗವೂ ಸಿಗುತ್ತಿದೆ. ಹಾಗಾದರೆ, ನಮ್ಮ ಕರಾವಳಿ ಜನ, ಕನ್ನಡಿಗರು ಉತ್ತರ ಭಾರತದವರಷ್ಟು ಸಮರ್ಥರಿಲ್ಲವೇ ? ನಾವು ಅವರಿಗಿಂತ ದಡ್ಡರೇ ಎಂದು ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡಿದ್ದಾರೆ. ಆಯ್ಕೆ ಪ್ರಕ್ರಿಯೆ ವೇಳೆ ಪ್ರಶ್ನೆ ಪತ್ರಿಕೆಯನ್ನೇ ಉತ್ತರ ಭಾರತೀಯ ಕೋಚಿಂಗ್ ಸೆಂಟರ್ ಗಳಿಗೆ ಸೋರಿಕೆ ಮಾಡಲಾಗುತ್ತಿದೆ ಎನ್ನುವ ಅನುಮಾನವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ.
ಕರಾವಳಿ ಭಾಗದ ಶಾಸಕರು, ಸಂಸದರ ಮಾನ, ಮರ್ಯಾದೆಯನ್ನು ಹರಾಜು ಹಾಕಿರುವ ಸೋಶಿಯಲ್ ಮೀಡಿಯಾಗಳು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇದ್ದರೂ, ನಿಮ್ಮ ಬೇಳೆ ಬೇಯಿಸಲ್ಲ ಅಂದ್ರೆ ನೀವ್ಯಾಕೆ ಇರಬೇಕ್ರೀ ಎಂದು ಬುಡಕ್ಕೇ ಕೊಳ್ಳಿಯಿಡುವ ಕೆಲಸವನ್ನೂ ಮಾಡಿದ್ದಾರೆ. ಸಂಸದ ನಳಿನ್ ಕುಮಾರ್ ಭಾಷಣಕ್ಕೆ ಮಾತ್ರ, ಕೈಲಾಗದ ವ್ಯಕ್ತಿ ಎನ್ನುವ ಆಕ್ರೋಶವನ್ನೂ ಕೆಲವರು ಹೊರಹಾಕಿದ್ದಾರೆ.
BJP Naleen Kumar Kateel, BJP Leaders, and MRPL slammed on Social Media for giving Job opportunities to other states than allowing Mangalore youths. Last time the Naleen Kumar Kateel had promised youths of first Job opportunities to Mangaloreans in MRPL but now outsiders from other states of India have got opportunities.
27-12-24 11:24 am
Bangalore Correspondent
ಹೊಸ ವರ್ಷಕ್ಕೆ ಮತ್ತೆ ಜನರಿಗೆ ಗ್ಯಾರಂಟಿ ಶಾಕ್ ? ಲೀಟ...
26-12-24 11:39 pm
Bidar Contractor Suicide, Priyank Kharge: ಪ್ರ...
26-12-24 08:03 pm
ಹೆಚ್ಚು ಮೊಬೈಲ್ ನೋಡ್ಬೇಡ ಎಂದು ಬುದ್ಧಿ ಹೇಳಿದ್ದ ತಾಯ...
26-12-24 05:11 pm
Bangalore Case, Advocate Dhahina Bhanu, Fraud...
26-12-24 04:45 pm
27-12-24 10:38 am
Yatish Kumar, Headline Karnataka
Manmohan Singh Death; ಆರ್ಥಿಕ ಕ್ರಾಂತಿಯ ಹರಿಕಾರ...
27-12-24 10:15 am
Dr Manmohan Singh, passes away: ಮಾಜಿ ಪ್ರಧಾನಿ,...
26-12-24 11:15 pm
Ajay Bhalla, Arif Khan: ಗಲಭೆ ಪೀಡಿತ ಮಣಿಪುರಕ್ಕೆ...
25-12-24 04:21 pm
Mohan Bhagwat: ಮೋಹನ್ ಭಾಗವತ್ ಸಂಘವನ್ನು ನಡೆಸುತ್ತ...
24-12-24 09:17 pm
26-12-24 11:18 pm
Mangalore Correspondent
Mangalore Kambala 2024, MP Brijesh Chowta: ಡಿ...
26-12-24 09:39 pm
Anoop Poojary, Udupi: ಹವಾಲ್ದಾರ್ ಅನೂಪ್ ಪೂಜಾರಿ...
26-12-24 07:07 pm
Mangalore, Martyr Anoop Poojary, Mp Brijesh C...
26-12-24 11:57 am
DJ artist Sajanka, Mangalore, New Year Party:...
25-12-24 10:55 pm
26-12-24 07:41 pm
Bangalore Correspondent
Fake Gold Loan, Mangalore Samaja seva sahakar...
25-12-24 02:41 pm
ಸೈಬರ್ ವಂಚಕರ ನಕಲಿ ಷೇರು ಮಾರುಕಟ್ಟೆ ಜಾಲ ; ಕೇರಳದಲ್...
24-12-24 11:05 pm
Bangalore cyber fraud, Crime: ಬೆಂಗಳೂರಿನ ಸಾಫ್ಟ...
22-12-24 07:23 pm
Mangalore Police, Cyber Fraud: ಕಮಿಷನ್ ಆಸೆಗೆ ಬ...
22-12-24 04:44 pm