ಬ್ರೇಕಿಂಗ್ ನ್ಯೂಸ್
23-05-21 01:25 pm Mangaluru Correspondent ಕರಾವಳಿ
ಮಂಗಳೂರು, ಮೇ 23: ನಗರದ ಖ್ಯಾತ ವೈದ್ಯ ಡಾ.ಬಿ.ಎಸ್. ಕಕ್ಕಿಲ್ಲಾಯ ಸೂಪರ್ ಮಾರ್ಕೆಟಿನಲ್ಲಿ ಮಾಸ್ಕ್ ವಿಚಾರದಲ್ಲಿ ಕಿರಿಕ್ ಮಾಡಿದ್ದರ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಇದೀಗ ಡಾ.ಕಕ್ಕಿಲ್ಲಾಯರು ಕೂಡ ಕದ್ರಿ ಠಾಣೆಗೆ ದೂರು ನೀಡಿದ್ದು, ತನ್ನ ವಿರುದ್ಧ ತೇಜೋವಧೆ, ಹೆಸರು ಕೆಡಿಸುವ ಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.
ಕದ್ರಿ ಠಾಣೆಗೆ ನೀಡಿರುವ ದೂರಿನಲ್ಲಿ ಎರಡು ಆಡಿಯೋ ಕ್ಲಿಪ್ ಇರುವ ಸಿಡಿಯ ಜೊತೆಗೆ ತಾನು ಸೂಪರ್ ಮಾರ್ಕೆಟಿನಲ್ಲಿ ಚರ್ಚೆ ಕಮಾಡಿರುವ ಸಿಸಿಟಿವಿ ವಿಡಿಯೋವನ್ನು ಸೂಪರ್ ಮಾರ್ಕೆಟ್ ಮಾಲಕನೇ ಜಾಲತಾಣದಲ್ಲಿ ಹರಿಯಬಿಟ್ಟು ತೇಜೋವಧೆ ಮಾಡಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ಜಿಮ್ಮಿ ಸೂಪರ್ ಮಾರ್ಕೆಟ್ ಮಾಲಕ ಮತ್ತು ಯಾರೋ ಪೈ ಎನ್ನುವ ವ್ಯಕ್ತಿ ಫೋನ್ ಸಂಭಾಷಣೆ ಮಾಡಿರುವ ಆಡಿಯೋ ಇದಾಗಿದ್ದು, ಡಾ. ಕಕ್ಕಿಲ್ಲಾಯರ ವಿರುದ್ಧ ಸುಳ್ಳು ದೂರು ದಾಖಲಿಸುವಂತೆ ಪೈ ಒತ್ತಾಯ ಮಾಡುವುದು ಸೇರಿದಂತೆ ವೈದ್ಯರ ವಿರುದ್ಧ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಆಡಿಯೋ ರೆಕಾರ್ಡನ್ನು ಉದ್ದೇಶಪೂರ್ವಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.
ನಾನು ಕಳೆದ 30 ವರ್ಷಗಳಿಂದ ಮಂಗಳೂರಿನಲ್ಲಿ ವೈದ್ಯನಾಗಿದ್ದು ಸಾಕಷ್ಟು ಗೌರವ ಮತ್ತು ಜನರ ಪ್ರೀತಿ ಗಳಿಸಿದ್ದೇನೆ. ಆದರೆ, ಈ ವ್ಯಕ್ತಿಗಳು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಹೊರಿಸಿ ಹೆಸರು ಕೆಡಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ, ಕದ್ರಿಯ ಜಿಮ್ಮಿ ಸೂಪರ್ ಮಾರ್ಕೆಟ್ ನಲ್ಲಿ ಕಳೆದ ಒಂದು ದಶಕದಿಂದ ನಿತ್ಯದ ಗ್ರಾಹಕನಾಗಿದ್ದೇನೆ. ನನ್ನ ಬಗ್ಗೆ ಅದರ ಮಾಲೀಕನಿಗೆ ಮತ್ತು ಅಲ್ಲಿನ ಸಿಬಂದಿಗೆ ಚೆನ್ನಾಗಿ ಗೊತ್ತಿದೆ.
ನೂರಾರು ಮಂದಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದೇನೆ. ಕೋವಿಡ್ ಸೋಂಕಿನ ಬಗ್ಗೆ ಅಧ್ಯಯನ ಮಾಡಿ, ಪುಸ್ತಕ ಬರೆದು ಜಾಗೃತಿ ಮೂಡಿಸಿದ್ದೇನೆ. ಇದೇ ವೇಳೆ, ಕೋವಿಡ್ ಸೋಂಕು ಹತ್ತಿಕ್ಕುವ ಸಲುವಾಗಿ ಸರಕಾರಕ್ಕೆ ಸಲಹೆಗಳನ್ನು ನೀಡಿದ್ದೇನೆ. ನನ್ನ ಕಠಿಣ ಪರಿಶ್ರಮದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹೊರಭಾಗದಲ್ಲಿ ಗೌರವ ಸಂಪಾದಿಸಿದ್ದೇನೆ. ಹೀಗಿದ್ದರೂ, ಸೂಪರ್ ಮಾರ್ಕೆಟ್ ನಲ್ಲಿ ಆಗಿರುವ ಘಟನೆ ಬಗ್ಗೆ ಸಿಸಿಟಿವಿ ವಿಡಿಯೋವನ್ನು ಜಾಲತಾಣದಲ್ಲಿ ಹರಿಯಬಿಟ್ಟು ಹೆಸರು ಕೆಡಿಸುವ ಕೆಲಸ ಮಾಡಿದ್ದಾರೆ. ನನ್ನ ಘನತೆಗೆ ಇದರಿಂದ ಕುಂದು ಬಂದಿದೆ. ಮನಸ್ಸಿಗೆ ತುಂಬ ನೋವು ಉಂಟುಮಾಡಿದೆ.
ಕಳೆದ ಮೂರು ದಿನಗಳಲ್ಲಿ ಎರಡು ಆಡಿಯೋ ರೆಕಾರ್ಡ್ ವೈರಲ್ ಆಗುತ್ತಿದೆ. ಅದರಲ್ಲಿ ಒಂದು ಪೈ ಎನ್ನುವ ವ್ಯಕ್ತಿ ಮತ್ತು ಜಿಮ್ಮಿ ಸೂಪರ್ ಮಾರ್ಕೆಟ್ ಮಾಲೀಕ ಮಾತನಾಡಿರುವ ಸಂಭಾಷಣೆ. ಮತ್ತೊಂದರಲ್ಲಿ ನನ್ನ ನೆರೆಮನೆಯ ವ್ಯಕ್ತಿಯೆಂದು ಹೇಳಿಕೊಳ್ಳುವಾತನ ಆಡಿಯೋ ಇದೆ. ಇವೆರಡು ಆಡಿಯೋವನ್ನು ಸಿಡಿಯಲ್ಲಿ ಸೇರಿಸಿದ್ದು, ನನ್ನ ಘನತೆಗೆ ಕುಂದು ತಂದಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಡಾ.ಕಕ್ಕಿಲ್ಲಾಯರು ಕದ್ರಿ ಠಾಣೆಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.
ಡಾ.ಕಕ್ಕಿಲ್ಲಾಯರ ವಿರುದ್ಧ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಪ್ರಕಾರ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Dr Kukkillaya files a complaint at Kadri Police Station for circulating an audio message in Conversation with Jimmys Owner by a Mangalorean pressuring the owner of the market to file a case against the doctor.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm