ಅಂತಾರಾಷ್ಟ್ರೀಯ ಸ್ಯಾಕ್ಸೋಫೋನ್ ಕಲಾವಿದ ಡಾ.ಮಚ್ಚೇಂದ್ರನಾಥ ಕೊರೊನಾಗೆ ಬಲಿ 

23-05-21 10:02 pm       Mangaluru Correspondent   ಕರಾವಳಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಮಂಗಳೂರು ಮೂಲದ ಸ್ಯಾಕ್ಸೋಫೋನ್ ಕಲಾವಿದ ಡಾ. ಮಚ್ಚೇಂದ್ರನಾಥ (66) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 

ಮಂಗಳೂರು, ಮೇ 23: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಮಂಗಳೂರು ಮೂಲದ ಸ್ಯಾಕ್ಸೋಫೋನ್ ಕಲಾವಿದ ಡಾ. ಮಚ್ಚೇಂದ್ರನಾಥ (66) ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. 

ಸೋಂಕಿನ ಕಾರಣದಿಂದ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‌ಮೂಲದ ಪ್ರಕಾರ, ಅವರ ಪತ್ನಿಯೂ ಮೂರು ದಿನಗಳ ಹಿಂದೆ ಕೊರೊನಾ ಸೋಂಕಿಗೆ ಒಳಗಾಗಿ ಸಾವು ಕಂಡಿದ್ದರು. 

ಸ್ಯಾಕ್ಸೋಫೋನ್ ಕಲಾವಿದರಾಗಿ ಕದ್ರಿ ಗೋಪಾಲನಾಥರ ರೀತಿಯಲ್ಲೇ ವಿಭಿನ್ನವಾಗಿ ಹೆಸರು ಮಾಡಿದ್ದ ಮಚ್ಚೇಂದ್ರನಾಥರು ಡಾಕ್ಟರೇಟ್ ಬಿರುದು ಪಡೆದಿದ್ದರು.‌ ದೇಶ- ವಿದೇಶದಲ್ಲಿ ಕಛೇರಿ ನಡೆಸಿಕೊಡುವ ಮೂಲಕ ಹೆಸರು ಗಳಿಸಿದ್ದರು. 

ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ಕಳೆದ 25 ವರ್ಷಗಳಿಂದ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ಮೂರು ಹೊತ್ತಿನ ಪೂಜೆಯ ವೇಳೆಗೆ ಸ್ಯಾಕ್ಸೋಫೋನ್ ವಾದನ ಸೇವೆಯನ್ನು ನಡೆಸಿಕೊಂಡು ಬಂದಿದ್ದರು. ಮಚ್ಚೇಂದ್ರನಾಥರ ಕಲಾಸೇವೆಗೆ ಹಲವಾರು ಪ್ರಶಸ್ತಿ, ಬಿರುದುಗಳು ಸಂದಿದ್ದವು. 

ತಂದೆಯಂದೆ ಅವರ ಪುತ್ರಿ ಸಿಂಧು ಭೈರವಿಯೂ ಸ್ಯಾಕ್ಸೋಫೋನ್ ಕಲಾವಿದೆಯಾಗಿದ್ದು ಶಾಸ್ತ್ರೀಯ ಸಂಗೀತದಲ್ಲಿ ಹೆಸರು ಮಾಡಿದ್ದಾರೆ. ಆದರೆ, ಮೂರು ದಿನಗಳ ಅಂತರದಲ್ಲಿ ತಂದೆ- ತಾಯಿಯನ್ನು ಅವರಿಂದ ಕೊರೊನಾ ಸೋಂಕು ಕಿತ್ತುಕೊಂಡಿದೆ.

Internationally acclaimed saxophone artiste Dr Machendranath passed away due to coronavirus on Sunday May 23 evening. As his condition deteriorated due to the infection, he was admitted to a private hospital in Deralakatte.