ಬ್ರೇಕಿಂಗ್ ನ್ಯೂಸ್
25-05-21 05:13 pm Mangalore Correspondent ಕರಾವಳಿ
ಮಂಗಳೂರು, ಮೇ 25: ಒಬ್ಬ ಬಡಪಾಯಿ ಪೊಲೀಸ್ ಠಾಣೆಗೆ ಹೋದರೆ, ನಮ್ಮ ಪೊಲೀಸರು ಎಷ್ಟು ಮರ್ಯಾದೆ ಕೊಡುತ್ತಾರೆ ಗೊತ್ತಲ್ಲ. ಆತ ತನ್ನ ದೂರು ಹೇಳಿಕೊಳ್ಳುವುದಕ್ಕೂ, ಹೇಳಿಕೊಂಡರೆ ಅದನ್ನು ಕೇಳಿಸಿಕೊಳ್ಳುವುದಕ್ಕೂ ಕೆಲವು ಠಾಣೆಗಳ ಪೊಲೀಸರಿಗೆ ವ್ಯವಧಾನವೇ ಇರುವುದಿಲ್ಲ. ಉರ್ವಾ ಠಾಣೆ ವ್ಯಾಪ್ತಿಯ ಚಿಲಿಂಬಿಯ ನಿವಾಸಿಯೊಬ್ಬರು ಇತ್ತ ಅಪಾರ್ಟ್ಮೆಂಟ್ ನಿವಾಸಿಗಳು, ಅತ್ತ ಪೊಲೀಸರು, ಮತ್ತೊಂದು ಕಡೆ ತನ್ನ ಸ್ವಂತ ಪತ್ನಿಯಿಂದಲೇ ಪೀಡನೆಗೆ ಒಳಗಾಗಿದ್ದಲ್ಲದೆ, ಕೇಸು ಜಡಿಸಿಕೊಂಡು ಮಾನಸಿಕ ಹಿಂಸೆ ಅನುಭವಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ನೋಯಿಲ್ ಲೆವಿಸ್ ಎಂಬ ಇವರು ಮೂಲತಃ ಮುಂಬೈನವರು. ಹಿಂದೆ ವಿದೇಶದಲ್ಲಿ ಒಳ್ಳೆ ಉದ್ಯೋಗದಲ್ಲಿದ್ದು ಮಂಗಳೂರು ಮೂಲದ ಯುವತಿಯನ್ನು ಮದುವೆಯಾಗಿದ್ದರು. ಮದುವೆಯ ಬಳಿಕ 2009-10ರಲ್ಲಿ ಚಿಲಿಂಬಿಯಲ್ಲಿ 45 ಲಕ್ಷಕ್ಕೆ ಫ್ಲ್ಯಾಟ್ ಖರೀದಿಸಿದ್ದರು. ಆನಂತರ ಪತ್ನಿಯ ಜೊತೆಗೆ ವಿರಸವಾಗಿ ಕೆಲವು ವರ್ಷಗಳ ಬಳಿಕ ಆಕೆ ಪತಿಯನ್ನು ಬಿಟ್ಟು ಬೇರೆಯಾಗಿದ್ದರು. ಆದರೆ, ಈ ದಂಪತಿಗೆ ಮಗಳಿದ್ದು ಆಕೆಗೀಗ 17 ವರ್ಷ. ನೋಯಿಲ್ ಮತ್ತು ಮಗಳು ಸದ್ರಿ ಫ್ಲಾಟ್ ನಲ್ಲಿ ವಾಸವಿದ್ದಾರೆ. ಇಬ್ಬರಿಗೂ ಕನ್ನಡ ಆಗಲೀ, ಸ್ಥಳೀಯ ಭಾಷೆ ತುಳುವಾಗಲೀ ಬರುವುದಿಲ್ಲ. ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಇವರಿಗೆ ತಿಳಿದಿರುವುದು.
ಈ ನಡುವೆ, ಅಪಾರ್ಟ್ಮೆಂಟ್ ಅಸೋಸಿಯೇಶನ್ ಮತ್ತು ನೋಯಿಲ್ ನಡುವೆ ಮನಸ್ತಾಪ ಎದ್ದಿದ್ದು, ತಿಂಗಳ ಮೇಂಟೆನೆನ್ಸ್ ವಿಚಾರದಲ್ಲಿ ತಕರಾರು ಉಂಟಾಗಿತ್ತು. ಇದೇ ಕಾರಣಕ್ಕೆ ಅಸೋಸಿಯೇಶನ್ನವರು ಸೇರಿ ಕಳೆದ ಒಂದು ವರ್ಷದಿಂದ ನೋಯಿಲ್ ಮನೆಗೆ ನೀರು ಪೂರೈಕೆ ಮಾಡದೇ ಹಿಂಸೆ ಕೊಡುತ್ತಿದ್ದಾರಂತೆ. ಕರೆಂಟ್ ಕಟ್ ಮಾಡುವುದು, ನೀರು ಸಪ್ಲೈ ಕೊಡದೇ ಹಿಂಸೆ ನೀಡುತ್ತಿದ್ದಾರೆ. ಇತ್ತೀಚೆಗೆ ನೋಯಿಲ್ ಕಾರಿನ ಮೇಲೆ ಸೈಕಲನ್ನು ಎಸೆದು ಹಾನಿ ಮಾಡುವ ಕೃತ್ಯವನ್ನೂ ಮಾಡಿದ್ದರು.
ಇದೇ ಕಾರಣಕ್ಕೆ, ಮೇ 13ರಂದು ನೋಯಿಲ್ ಮತ್ತು ಅವರ ಪುತ್ರಿ ಅಪಾರ್ಟ್ಮೆಂಟ್ ಅಸೋಸಿಯೇಶನ್ ಅಧ್ಯಕ್ಷ ಗಣೇಶ್ ಮನೆಗೆ ತೆರಳಿದ್ದು ನೀರು ಕೊಡದೆ ಸತಾಯಿಸುತ್ತಿರುವುದನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ, ಗಣೇಶ್ ಮತ್ತು ಅವರ ಮಗ ಸೇರಿ 52 ವರ್ಷದ ನೋಯಿಲ್ ಅವರನ್ನು ಹಗ್ಗದಿಂದ ಕಟ್ಟಿ ಹಲ್ಲೆಗೈದಿದ್ದಲ್ಲದೆ, 17 ವರ್ಷದ ಪುತ್ರಿಯ ಮೇಲೂ ಹಲ್ಲೆ ನಡೆಸಿದ್ದಾರೆ. ತಂದೆಯನ್ನು ಕೋಣೆಯಲ್ಲಿ ಕೂಡಿ ಹಾಕಿದ್ದರಿಂದ ಅವರನ್ನು ಬಿಡಿಸಲು ಮಗಳು ಪ್ರಯತ್ನ ಪಟ್ಟಿದ್ದಾಳೆ. ಆಕೆಯ ಮೈಗೆ ಕೈಹಾಕಿ ಹಲ್ಲೆ ನಡೆಸಿದ್ದು ಗಾಯಗಳಾಗಿದ್ದವು. ನೋಯಿಲ್ ತಲೆಗೂ ದೊಣ್ಣೆಯಲ್ಲಿ ಬಡಿದು ಹಲ್ಲೆ ನಡೆಸಿದ್ದರು. ಈ ವೇಳೆ, ಬಾಲಕಿ 100 ನಂಬರಿಗೆ ಫೋನ್ ಮಾಡಿ ಇಂಗ್ಲಿಷ್ ನಲ್ಲಿ ಅಳಲು ತೋಡಿಕೊಂಡಿದ್ದಾಳೆ. ಆದರೆ, ಫೋನ್ ಕರೆ ಸ್ವೀಕರಿಸಿದ ಸಿಬಂದಿಗೆ ಈಕೆಯ ಮಾತು ಅರ್ಥವಾಗಲಿಲ್ಲ. (ಇದರ ಆಡಿಯೋ ರೆಕಾರ್ಡ್ ಇದೆ)
ಹಲ್ಲೆ, ಕಿರುಕುಳಕ್ಕೆ ಪೊಲೀಸ್ ಸಿಬಂದಿ ಸಾಕ್ಷಿ !
ಇದೇ ವೇಳೆ, ಅಪಾರ್ಟ್ಮೆಂಟ್ ನಿವಾಸಿಗಳು ಉರ್ವಾ ಠಾಣೆಗೆ ಕರೆ ಮಾಡಿ ತಿಳಿಸಿದ್ದು, ಒಬ್ಬರು ಪೇದೆ ಸ್ಥಳಕ್ಕೆ ಬಂದಿದ್ದರು. ಪೇದೆ ಅಪಾರ್ಟ್ಮೆಂಟಿಗೆ ಬಂದು ಮೊಬೈಲಿನಲ್ಲಿ ವಿಡಿಯೋ ಚಿತ್ರೀಕರಿಸಿದ್ದು, ಮನೆಯ ಒಳಗೆ ಕೂಡಿಹಾಕಿದ್ದ ನೋಯಿಲ್ ನನ್ನು ಬಿಡಿಸಿದ್ದಾರೆ. ಪೇದೆಯೇ ಸ್ವತಃ ನೋಯಿಲ್ ನನ್ನು ಕೂಡಿಹಾಕಿದ್ದ ಸ್ಥಳದಿಂದ ಹಗ್ಗ ಬಿಚ್ಚಿ ಹೊರಗೆ ತಂದಿದ್ದರೂ, ಆತನ ದೂರು ಪಡೆಯಲು ನಿರಾಕರಿಸಿದ್ದಾರೆ. ಇಷ್ಟೆಲ್ಲ ಹಲ್ಲೆ, ಕಿರುಕುಳ ನಡೆದ ಬಳಿಕ ನೋಯಿಲ್ ಮತ್ತವರ ಪುತ್ರಿ ಉರ್ವಾ ಠಾಣೆಗೆ ತೆರಳಿದ್ದು ದೂರು ನೀಡಿದ್ದಾರೆ. ಆದರೆ, ಪೊಲೀಸರು ಇನ್ ಸ್ಪೆಕ್ಟರ್ ಬರದೆ ದೂರು ದಾಖಲು ಮಾಡಿಕೊಳ್ಳಲು ಆಗೋದಿಲ್ಲ ಅಂತ ಹೇಳಿ ಹಾಗೇ ಕೂರಿಸಿದ್ದಾರೆ. ಇನ್ ಸ್ಪೆಕ್ಟರ್ ಶರೀಫ್ ಠಾಣೆಗೆ ಬರದೇ ಇದ್ದುದರಿಂದ ಹಲ್ಲೆಗೊಳಗಾಗಿದ್ದ ನೋಯಿಲ್ ಮತ್ತು ಪುತ್ರಿ ನೇರವಾಗಿ ವೆನ್ಲಾಕ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆಯನ್ನು ಪಡೆದಿದ್ದಾರೆ. ಪೊಲೀಸರಲ್ಲಿ ಮರುದಿನ ಹೇಳಿದರೂ, ಇವರ ಅಳಲನ್ನು ಕೇಳಲಿಲ್ಲ.
ನೋಯಿಲ್ ನೆರವಿಗೆ ಬಂತು ಜಾಲತಾಣ !
ಕಳೆದ ಒಂದು ವರ್ಷದಿಂದ ನೀರಿನ ಸಪ್ಲೈ ಇಲ್ಲದೆ, ಹಿಂಸೆಗೆ ಒಳಗಾಗಿರುವ ನೋಯಿಲ್ ಮತ್ತು ಆತನ ಪುತ್ರಿ ಅಗತ್ಯ ಖರ್ಚಿಗೆಂದು ಹತ್ತಿರದ ಚರ್ಚ್ ನಿಂದ ನೀರು ಒಯ್ಯುತ್ತಿದ್ದಾರೆ. ಈ ರೀತಿಯ ಹಿಂಸೆ ನೀಡುತ್ತಿದ್ದರೂ, ಪೊಲೀಸರು ಸಂತ್ರಸ್ತನ ದೂರನ್ನೇ ಆಲಿಸದೆ ನಿರ್ಲಕ್ಷಿಸಿದ್ದಾರೆ. ತನಗಾದ ಹಿಂಸೆಯನ್ನು ನೋಯಿಲ್ ಬಳಿಕ ಜಾಲತಾಣದಲ್ಲಿ ಬರೆದು ಅಲವತ್ತುಕೊಂಡಿದ್ದರು. ಅಲ್ಲದೆ, ತನ್ನನ್ನು ಹಗ್ಗದಲ್ಲಿ ಕಟ್ಟಿರುವ ಚಿತ್ರವನ್ನೂ ಪೋಸ್ಟ್ ಮಾಡಿದ್ದರು. ಮಂಗಳೂರು, ಮುಂಬೈನಲ್ಲಿರುವ ಸಾಮಾಜಿಕ ಕಾರ್ಯಕರ್ತರು ಇರೋ ಗ್ರೂಪಿನಲ್ಲಿ ಷೇರ್ ಆಗಿದ್ದರಿಂದ ಹಲವರು ಮಂಗಳೂರಿನ ಪೊಲೀಸರಿಗೆ ಫೋನ್ ಮಾಡಿ, ಪ್ರಶ್ನೆ ಮಾಡಿದ್ದಾರೆ.
ಹೈದರಾಬಾದ್ ನಲ್ಲಿ ಸಾಮಾಜಿಕ ಕಾರ್ಯಕರ್ತರಾಗಿರುವ ಮತ್ತು ವೃತ್ತಿಯಲ್ಲಿ ಪೈಲಟ್ ಆಗಿರುವ ರಾಘವೇಂದ್ರ ರೆಡ್ಡಿ ಎಂಬವರು ಮಂಗಳೂರು ಪೊಲೀಸರಿಗೆ ಒತ್ತಡ ಹೇರಿದ್ದಲ್ಲದೆ, 17 ವರ್ಷದ ಬಾಲಕಿಯ ಮೇಲೆ ಕೈಮಾಡಿದ್ದ ಬಗ್ಗೆ ದೂರು ನೀಡಿದ್ರೂ ಕೇಸು ದಾಖಲಿಸಿಕೊಳ್ಳದ ಉರ್ವಾ ಪೊಲೀಸರ ವಿರುದ್ಧ ಕಿಡಿಕಾರಿದ್ದರು. ಕಳೆದ ಎರಡು ದಿನಗಳಲ್ಲಿ ಪೊಲೀಸ್ ಹಿರಿಯಧಿಕಾರಿಗಳಿಗೆ ಫೋನ್ ಬಂದಿದ್ದರಿಂದ ಆತನ ದೂರನ್ನು ಪರಿಗಣಿಸಿ ಎಫ್ಐಆರ್ ಮಾಡುವಂತೆ ಸೂಚನೆ ನೀಡಲಾಗಿತ್ತು. ಕೊನೆಗೆ ಉರ್ವಾ ಠಾಣೆಯಲ್ಲಿ ನಿನ್ನೆ (ಮೇ 24) ಪ್ರತ್ಯೇಕ ದೂರು ದಾಖಲಾಗಿದೆ.
ಅಪಾರ್ಟ್ಮೆಂಟ್ ಅಸೋಸಿಯೇಶನ್ ಅಧ್ಯಕ್ಷನ ವಿರುದ್ಧ ನೋಯಿಲ್ ಲೆವಿಸ್ ಪುತ್ರಿ ನೀಡಿರುವ ದೂರನ್ನು ಆಧರಿಸಿ ಕೇಸು ದಾಖಲಾಗಿದ್ದರೆ, ಅಪಾರ್ಟ್ಮೆಂಟ್ ನಿವಾಸಿಗಳು ಸೇರಿ ಅಲ್ಲಿಯೇ ಸೆಕ್ಯುರಿಟಿ ಗಾರ್ಡ್ ಆಗಿದ್ದ ಮಹಿಳೆಯ ಹೆಸರಲ್ಲಿ ನೋಯಿಲ್ ವಿರುದ್ಧ ಕೇಸು ದಾಖಲಿಸಿದ್ದಾರೆ. ಅಪಾರ್ಟ್ಮೆಂಟಿನ ಸೆಕ್ಯುರಿಟಿ ಮಹಿಳೆ ಎಸ್ಸಿಯಾಗಿದ್ದು ಆಕೆಯನ್ನು ಜಾತಿನಿಂದನೆ ಮಾಡಿ, ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ಮಹಿಳೆಯ ಮೂಲಕ ಅಪಾರ್ಟ್ಮೆಂಟ್ ಅಧ್ಯಕ್ಷನೇ ದೂರು ಕೊಡಿಸಿದ್ದಾನೆ. ಉರ್ವಾ ಪೊಲೀಸರು ಎರಡೂ ಕಡೆಯಿಂದ ದೂರು ಪಡೆದು ಉಭಯರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ನೋಯಿಲ್ ಮತ್ತು ಅವರ ಪುತ್ರಿ ಕಳೆದ ಎರಡು ವರ್ಷಗಳಿಂದ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ಅಪಾರ್ಟ್ಮೆಂಟ್ ನಲ್ಲಿ ನೀರು ಇಲ್ಲದೆ ಈಗಲೂ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಇದರ ನಡುವೆ, ಪೊಲೀಸರು ತಂದೆ ಮತ್ತು ಅಪ್ರಾಪ್ತ ಮಗಳನ್ನು ಠಾಣೆಗೆ ಕರೆಸಿ, ವಿಚಾರಣೆ ನೆಪದಲ್ಲಿ ಹಿಂಸೆ ನೀಡುತ್ತಿದ್ದಾರೆ. ಏನೇ ಕೇಸು ದಾಖಲು ಮಾಡಿಕೊಳ್ಳೋದಿದ್ದರೂ, ಇಷ್ಟು ದಿನ ಸತಾಯಿಸುವ ಅಗತ್ಯವಿತ್ತೇ ಪೊಲೀಸರೇ ?
Father and Minor girl have been assaulted by a falt president and his family at Chilimbi in Mangalore. The 17-year-old daughter also has been molested but Urva Police are least bothered to file a case or provide justice. The incident took place on the 14th of May but FIR was registered on the 24th.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
27-11-24 11:04 pm
Mangalore Correspondent
Muneer Katipalla, Mangalore, Anupam Agarwal;...
27-11-24 09:36 pm
Dr Chinnappa Gowda, Mangalore: 25 ಕೋಟಿ ವ್ಯಯಿಸ...
27-11-24 08:50 pm
Mangalore MP Captain Brijesh Chowta, Chouhan...
27-11-24 08:39 pm
Mangalore News: ಬ್ರಿಟಿಷರ ಕಾಲದ ಜಿಲ್ಲಾಧಿಕಾರಿ ಕಚ...
27-11-24 08:28 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm