ಬ್ರೇಕಿಂಗ್ ನ್ಯೂಸ್
26-05-21 05:21 pm Mangalore Correspondent ಕರಾವಳಿ
ಮಂಗಳೂರು, ಮೇ 26: ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಫೋನ್ ಮಾಡಿ ವಾಗ್ವಾದ ಮಾಡಲು ಸಾಧ್ಯವೇ ? ಅನುದಾನದ ಬಳಕೆ, ಅದರ ಕಾನೂನು ಬಾಧ್ಯತೆಗಳ ಬಗ್ಗೆ ನೇರವಾಗಿ ಉಸ್ತುವಾರಿ ಸಚಿವರಲ್ಲೇ ಚರ್ಚೆ ಮಾಡಲು ಸಾಧ್ಯವೇ ? ಸಾಮಾನ್ಯವಾಗಿ ಈ ರೀತಿಯ ಸಂವಾದ, ಸಂಭಾಷಣೆ ಸಾಧ್ಯವಾಗಲ್ಲ. ಫೋನ್ ಮಾಡಿದ್ರೂ ಸಚಿವರ ಜೊತೆ ಪಿಡಿಓ ಅಧಿಕಾರಿ ಪ್ರಶ್ನೆ ಮಾಡುವುದು ಸಾಧ್ಯವಾಗಲ್ಲ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೂ ಸಾಧ್ಯ !
ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ, ಸರಳ ಜೀವಿ ಕೋಟ ಶ್ರೀನಿವಾಸ ಪೂಜಾರಿಯವರ ಜೊತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು ಆಹಾರದ ಕಿಟ್ ವಿಚಾರದಲ್ಲಿ ಪ್ರಶ್ನೆ ಮಾಡುವುದು, ಅನುದಾನದ ಬಳಕೆ ವಿಚಾರದಲ್ಲಿ ಚರ್ಚೆ ಮಾಡಿದ್ದಲ್ಲದೆ ವಾಗ್ವಾದ ರೂಪದಲ್ಲಿ ಸಂಭಾಷಣೆ ನಡೆಸಿದ ಆಡಿಯೋ ರೆಕಾರ್ಡ್ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರು ತಾಲೂಕಿನ ಕಂದಾವರ ಪಂಚಾಯತ್ ಪಿಡಿಓ ಯಶವಂತ ಎಂಬವರು ಫೋನಲ್ಲಿ ಸಚಿವರ ಜೊತೆಗೇ ಕಾನೂನು ಮಾತನಾಡಿ ಸುದ್ದಿಯಾಗಿದ್ದಾರೆ.
ಕೊರೊನಾ ಪೀಡಿತರಿಗೆ ಆಹಾರ ಕಿಟ್ ಗಳನ್ನು ನೀಡುವ ಬಗ್ಗೆ ಉಸ್ತುವಾರಿ ಸಚಿವರಲ್ಲಿ ಯಾರೋ ಒಬ್ಬರು ಪಿಡಿಓಗೆ ಫೋನ್ ಮಾಡಿಸಿದ್ದಾರೆ. ಆಹಾರ ಕಿಟ್ ನೀಡುವ ಬಗ್ಗೆ ಸರಕಾರದ ಸೂಚನೆಯಿದೆ, ನಿಮ್ಮಲ್ಲಿ ಏನೋ ಹಣ ಇಲ್ಲಾ ಅಂತಾ ಹೇಳಿದ್ದೀರಂತಲ್ಲಾ.. ಎಂದು ಸಚಿವರು ಕೇಳಿದ್ದಾರೆ. ಅಷ್ಟಕ್ಕೇ ಪಿಡಿಓ ಯಶವಂತ, ಕಾನೂನು ಕಟ್ಟಳೆಯನ್ನು ಹೇಳಿಕೊಂಡಿದ್ದಾರೆ. ಎಷ್ಟು ಕಿಟ್ ಆಗಬೇಕೆಂದು ಸ್ಪಷ್ಟವಾಗಿಲ್ಲ, ನಾವು ಕೊಟೇಷನ್ ಪಡೆಯಬೇಕಾ.. ಒಂದು ಲಕ್ಷಕ್ಕಿಂತ ಹೆಚ್ಚು ಮೊತ್ತದ್ದಾದರೆ ಟೆಂಡರ್ ಪಡೆಯಬೇಕೆಂದಿದೆ, ಅದರ ಬಗ್ಗೆ ಸ್ಪಷ್ಟತೆಯಿಲ್ಲದೆ ನಾವೇನು ಮಾಡಕ್ಕಾಗುತ್ತೆ ಎಂದು ಪ್ರಶ್ನಿಸಿದ್ದಾರೆ. ನೀವು ಏನು ಮಾಡಬೇಕೋ.. ಅದನ್ನು ಮಾಡಿ, ಬೇರೆ ಪಂಚಾಯತ್ ನಲ್ಲಿ ಹೇಗೆ ಮಾಡಿದ್ದಾರೋ ಅದನ್ನಾದ್ರೂ ನೋಡಿಕೊಂಡು ಮಾಡಿಯಪ್ಪಾ.. ಎಂದು ಸಚಿವ ಕೋಟ ಹೇಳಿದಾಗ, ಪಿಡಿಓ ಮತ್ತೆ ಕಾನೂನಿನ ಪ್ರಶ್ನೆ ಮಾಡಿದ್ದಾರೆ.
ಅದಕ್ಕೆ ಗರಂ ಆದ ಸಚಿವ ಕೋಟ, ನೀವು ಯಾರ ಜೊತೆ ಮಾತನಾಡುತ್ತಿದ್ದೀರಿ ಎಂದು ಗೊತ್ತಲ್ಲ, ನೀವ್ಯಾಕೆ ಹೀಗೆ ಮಾಡ್ತೀರಿ ಎಂದು ಗದರಿದ್ದಾರೆ. ಆದ್ರೂ ಪಿಡಿಓ ಯಶವಂತ ಹಳೇ ರಾಗವನ್ನೇ ಮತ್ತೆ ಎಳೆದಿದ್ದಾರೆ. ಕೊನೆಗೆ, ಸಚಿವ ಕೋಟ ಅವರೇ, ನಿಮಗ್ಯಾರು ಹೇಳೋದ್ರೀ. ಸರಕಾರದ ಸೂಚನೆಯನ್ನು ಪಾಲನೆ ಮಾಡಬೇಕು ಅಂತ ಹೇಳಿ ಕರೆ ಕಟ್ ಮಾಡಿದ್ದಾರೆ.
ಸಚಿವರ ಜಾಗದಲ್ಲಿ ಬೇರೆ ಯಾರೇ ಆಗಿದ್ದರೂ, ಪಿಡಿಓ ಅಧಿಕಾರಿಯ ಸ್ಥಿತಿ ಗೋತಾ ಆಗುತ್ತಿತ್ತು. ರಮಾನಾಥ ರೈಯೋ, ಅಭಯಚಂದ್ರ ಜೈನ್ ಯಾರಾದ್ರೂ ಇರುತ್ತಿದ್ದರೆ, ಭಾಷೆಯೂ ಬೇರೆ ಇರುತ್ತಿತ್ತು. ಪಂಚಾಯತ್ ಮಟ್ಟದ ಅಧಿಕಾರಿಯೇ ಆಗಿದ್ದರೂ, ಸಚಿವ ಕೋಟ ಶ್ರೀನಿವಾಸ ಪೂಜಾರಿ ತಾನೊಬ್ಬ ಜಿಲ್ಲಾ ಮಂತ್ರಿ ಎಂಬ ಬಿಗುಮಾನ ಇಟ್ಟುಕೊಳ್ಳದೆ ಸಾವಧಾನವಾಗಿ ಹೇಳಿದ್ದಾರೆ. ಆದರೆ, ಪಿಡಿಓ ಮಾತ್ರ ತನ್ನದೇ ರಾಗ, ತನ್ನದೇ ತಾಳ ಎನ್ನುವ ರೀತಿ ನಡೆದುಕೊಂಡಿದ್ದಾರೆ.
ಈ ಬಗ್ಗೆ ಸಚಿವ ಕೋಟ ಅವರನ್ನು ಪ್ರತಿನಿಧಿಸುವ ಮಂಗಳೂರಿನ ಮೀಡಿಯಾ ಗ್ರೂಪಿನಲ್ಲೂ ಚರ್ಚೆ ಆಗಿತ್ತು. ಸಚಿವರ ವಿರುದ್ಧವೇ ಎರ್ರಾಬಿರ್ರಿ ಮಾತನಾಡಿದ ಪಿಡಿಓ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೆಲವರು ಹೇಳಿಕೊಂಡಿದ್ದರೆ, ಇನ್ನು ಕೆಲವರು ಆ ಪಿಡಿಓ ಹಾಗೆಯೇ.. ಎಲ್ಲಿ ಹೋದರೂ ಕಾನೂನು, ನಿಯಮ ಅನ್ನುವ ತಕರಾರು ಮಾಡುತ್ತದೆ. ಬೇರೆ ವಿಚಾರದಲ್ಲಿ ಒಳ್ಳೆದೇ ಜನ, ಎಕ್ಸ್ ಮಿಲಿಟರಿ ಆಗಿದ್ರಿಂದ ಕಾನೂನು ಬಿಟ್ಟು ಆಚೀಚೆ ಕದಲಲ್ಲ ಎಂದು ಹೇಳಿಕೊಂಡಿದ್ದರು.
ಸಚಿವರ ಜೊತೆ ದುರ್ನಡತೆ ತೋರಿದ ವಿಚಾರ ಜಿಲ್ಲಾ ಪಂಚಾಯತ್ ಸಿಇಓ ಕುಮಾರ್ ಅವರ ಗಮನಕ್ಕೆ ಬಂದಿದ್ದು, ಪಿಡಿಓ ಅಧಿಕಾರಿಯನ್ನು ಕರೆದು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಮಂಗಳವಾರ ಮಂಗಳೂರಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಭೆಗೆ ಆಗಮಿಸಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಪಿಡಿಓ ಯಶವಂತರಲ್ಲಿ ಭೇಟಿಯಾಗಿಸಿ ಕ್ಷಮಾಪಣೆ ಕೇಳಿಸಿದ್ದಾರೆ. ಪಿಡಿಓ ಮಾಜಿ ಸೈನಿಕನಾಗಿರುವುದರಿಂದ ಮತ್ತು ಮುಂದೆ ಈ ರೀತಿ ವರ್ತಿಸುವುದಿಲ್ಲ ಎಂದು ಕ್ಷಮಾಪಣೆ ಕೇಳಿದ್ದರಿಂದ ಸಚಿವರು ಬುದ್ಧಿಹೇಳಿ ಕಳುಹಿಸಿಕೊಟ್ಟಿದ್ದಾರಂತೆ..
ಕೋಟ ಶ್ರೀನಿವಾಸ ಪೂಜಾರಿಯವರ ರೀತಿಯ ಔದಾರ್ಯ ಬೇರೆ ಸಚಿವರಿಗೆ ಇರಲಿಕ್ಕಿಲ್ಲ. ತಪ್ಪು ಮಾಡಿದ ಅಧಿಕಾರಿಗೆ ಸಸ್ಪೆಂಡ್ ಶಿಕ್ಷೆ ಖಚಿತ ಅನ್ನುವ ಕಾಲದಲ್ಲಿ ಸಚಿವ ಕೋಟ ದುರ್ನಡತೆ ತೋರಿದ ಅಧಿಕಾರಿಯನ್ನೂ ಮನ್ನಿಸಿ, ಕಳುಹಿಸಿಕೊಟ್ಟು ದೊಡ್ಡತನ ಮೆರೆದಿದ್ದಾರೆ. ಆದರೆ, ಈ ರೀತಿಯ ಆಡಿಯೋ ರೆಕಾರ್ಡ್ ಮಾಡಿ ಹಂಚಿದ ವೀರಾಧಿವೀರ ಯಾರೆಂಬುದು ಮಾತ್ರ ಗೊತ್ತಾಗಿಲ್ಲ.
Audio:
Kandavara PDO Yashwanth talks Rudely to Minister Kota Srinivas Poojary. Audio of this has gone viral on Social Media.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm