ಬ್ರೇಕಿಂಗ್ ನ್ಯೂಸ್
27-05-21 12:37 pm Mangalore Correspondent ಕರಾವಳಿ
ಮಂಗಳೂರು, ಮೇ 27: ಕ್ರಿಕೆಟ್ ಆಡುತ್ತಿದ್ದ ಯುವಕರು ಮಾಸ್ಕ್ ಹಾಕದೇ ಗುಂಪು ಸೇರಿದ್ದನ್ನು ಪ್ರಶ್ನೆ ಮಾಡಿದ್ದ ಪಿಡಿಓ ಅಧಿಕಾರಿ ಮೇಲೆ ಹಲ್ಲೆಗೈದಿದ್ದ ನಾಲ್ವರು ಯುವಕರನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಫರಂಗಿಪೇಟೆಯ ಮಹಮ್ಮದ್ ಇದಾಯತುಲ್ಲಾ (25), ಪುದು ನಿವಾಸಿ ಅಹ್ಮದ್ ಬಸೀರ್ (30), ಕುತ್ತಾರ್ ನಿವಾಸಿ ಅಬುಬಕ್ಕರ್ ಸಿದ್ದಿಕ್(26), ಪರಂಗಿಪೇಟೆಯ ಅಹ್ಮದ್ ಸಿದ್ದಿಕ್ (33) ಬಂಧಿತರು.
ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಪಿಡಿಓ ಆಗಿರುವ ರಾಜೇಂದ್ರ ಶೆಟ್ಟಿಗೆ ಮಲ್ಲೂರಿನಲ್ಲಿ ಪಿಡಿಓ ಮತ್ತು ಕೋವಿಡ್ ನಿಯಂತ್ರಣದ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿತ್ತು. ಮಲ್ಲೂರು ಗ್ರಾಪಂ ಕಚೇರಿ ಬಳಿಯಲ್ಲಿ ಮೇ 25ರಂದು ಯುವಕರು ಕ್ರಿಕೆಟ್ ಆಡುತ್ತಿದ್ದ ವೇಳೆ ಗುಂಪು ಕೂಡಿದ್ದರು. ಈ ವೇಳೆ ಸ್ಥಳಕ್ಕೆ ತೆರಳಿದ್ದ ರಾಜೇಂದ್ರ ಶೆಟ್ಟಿ, ಕೊರೊನಾ ಇರುವುದರಿಂದ ಮಾಸ್ಕ್ ಹಾಕದೇ ಗುಂಪು ಸೇರುವುದು ಸರಿಯಲ್ಲ ಎಂದಿದ್ದರು. ಆದರೆ, ಯುವಕರು ತನ್ನ ಮಾತನ್ನು ಕೇಳದೇ ಇದ್ದಾಗ ರಾಜೇಂದ್ರ ಶೆಟ್ಟಿ ಮೊಬೈಲಿನಲ್ಲಿ ವಿಡಿಯೋ ಮಾಡಲು ಯತ್ನಿಸಿದ್ದಾರೆ.
ವಿಡಿಯೋ ಮಾಡಿದ್ದನ್ನು ಪ್ರಶ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಯುವಕರು ರಾಜೇಂದ್ರ ಶೆಟ್ಟಿಯ ಕೆನ್ನೆಗೆ ಹೊಡೆದಿದ್ದು ದೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲಿ ಮಲ್ಲೂರು ಗ್ರಾಪಂ ಕಚೇರಿಯಲ್ಲಿದ್ದ ಸಿಬಂದಿ ಗಿರೀಶ್ ಮತ್ತು ಅಧ್ಯಕ್ಷ ಇಸ್ಮಾಯಿಲ್ ಓಡಿ ಬಂದಿದ್ದು, ಆರೋಪಿಗಳು ತಮ್ಮ ಬೈಕಿನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಮನ್ಸೂರ್ ಆಲಿ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಿದ್ದಾನೆ.
ಪೊಲೀಸ್ ಕಮಿಷನರ್ ಶಶಿಕುಮಾರ್ ಸುದ್ದಿಗೋಷ್ಠಿ ಕರೆದು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಕೆಲವು ಒಳ ಪ್ರದೇಶಗಳಲ್ಲಿ ಯುವಕರು ಕ್ರಿಕೆಟ್, ವಾಲಿಬಾಲ್ ಆಡುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಇದಕ್ಕಾಗಿ ಆಯಾ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸರ ಗಸ್ತನ್ನು ಹೆಚ್ಚಿಸುವಂತೆ ಸೂಚಿಸಿದ್ದೇನೆ. ಯುವಕರು ಕ್ರಿಕೆಟ್ ಆಡುವುದು ಪತ್ತೆಯಾದರೆ ಬಂಧಿಸಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
Read: ಮಾಸ್ಕ್ ಹಾಕದ್ದನ್ನು ಪ್ರಶ್ನಿಸಿದ ಪಿಡಿಓ ಮೇಲೆ ಯುವಕರಿಂದ ಹಲ್ಲೆ ; ಮಲ್ಲೂರಿನಲ್ಲಿ ಘಟನೆ
In connection to assault on Ulaibettu Gram Panchyath PDO the Mangalore City Police have arrested four youths. The incident took place when the youths were found playing cricket violating covid rules.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 02:45 pm
Mangalore Correspondent
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
Yenepoya Hospital, Mangalore: ಯೆನಪೋಯ ಆಸ್ಪತ್ರೆ...
10-09-25 08:46 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm