ಬ್ರೇಕಿಂಗ್ ನ್ಯೂಸ್
29-05-21 01:25 pm Mangalore Correspondent ಕರಾವಳಿ
ಮಂಗಳೂರು, ಮೇ 29: ಪಂಪ್ವೆಲ್ ಫ್ಲೈಓವರ್ ಬಳಿಯ ಸರ್ವಿಸ್ ರಸ್ತೆಗಳು ಇಂದು ಬೆಳಗ್ಗೆ ನೆರೆಯಿಂದ ಆವೃತ ಆಗಿತ್ತು. ಬೆಳ್ಳಂಬೆಳಗ್ಗೆ ಸುರಿದ ಭಾರೀ ಮಳೆಗೆ ಸರ್ವಿಸ್ ರಸ್ತೆ ಬ್ಲಾಕ್ ಆಗಿದ್ದರಿಂದ ವಾಹನಗಳು ಸಂಚರಿಸಲಾಗದೆ ನೀರಿನಲ್ಲಿ ತೇಲುತ್ತಾ ಸಾಗುವಂತಾಗಿತ್ತು. ಎಕ್ಕೂರು ಕಡೆಯಿಂದ ಬರುತ್ತಿದ್ದ ವಾಹನಗಳು ಸರ್ವಿಸ್ ರಸ್ತೆಯಲ್ಲಿ ಪಂಪ್ವೆಲ್ ತೆರಳಲು ಸಾಧ್ಯವಾಗದೆ ಬಾಕಿಯಾಗಿದ್ದವು. ಕೆಲಹೊತ್ತಿನಲ್ಲಿಯೇ ವಾಟ್ಸಪ್ ಜಾಲತಾಣದಲ್ಲಿ ಪಂಪ್ವೆಲ್ ನಲ್ಲಿ ನೆರೆ ಬಂದಿದ್ದ ವಿಡಿಯೋಗಳು ವೈರಲ್ ಆಗಿದ್ದವು.
ಪಂಪ್ವೆಲ್ ಫ್ಲೈಓವರ್ ಕಾಮಗಾರಿ ಪೂರ್ತಿಗೊಂಡು ವರ್ಷ ಕಳೆದಿದ್ದು ಇದೀಗ ದಿಢೀರ್ ನೆರೆ ಬಂದಿದ್ದು ಹೇಗೆ ಎನ್ನುವ ಕುತೂಹಲವೂ ಉಂಟಾಗಿತ್ತು. ಸೇತುವೆಯ ಅವೈಜ್ಞಾನಿಕ ಕಾಮಗಾರಿಯಿಂದಲೇ ಈ ಸ್ಥಿತಿಯಾಗಿದೆ ಎನ್ನುವ ಆಕ್ರೋಶವೂ ಜನರಲ್ಲಿ ಕೇಳಿಬಂದಿದ್ದವು. ಮೊದಲ ಮಳೆಗೇ ಹೀಗಾದರೆ ಹೇಗೆ ಎನ್ನುವ ಪ್ರಶ್ನೆಗಳು ಮೂಡಿದ್ದವು. ಈ ಬಗ್ಗೆ ಚೆಕ್ ಮಾಡೋಣ ಎಂದು ಪೂರ್ವಾಹ್ನ ಹನ್ನೊಂದು ಗಂಟೆಗೆ ಅಲ್ಲಿ ತೆರಳಿದರೆ, ನೆರೆ ನೀರು ಸಂಪೂರ್ಣ ಇಳಿದುಹೋಗಿತ್ತು.
ಸ್ಥಳೀಯ ಕಾರ್ಪೊರೇಟರುಗಳು, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಮಹಾನಗರ ಪಾಲಿಕೆ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ವಿಶ್ವ ಹಿಂದು ಪರಿಷತ್ ಮುಖಂಡ ಶರಣ್ ಪಂಪ್ವೆಲ್ ಸೇರಿದಂತೆ ಹಲವರು ಸೇರಿದ್ದರು. ಮಳೆನೀರಿನ ಜೊತೆಗೆ ಚರಂಡಿ ನೀರು ಉಕ್ಕಿ ಬಂದು ಪರಿಸರದ ಮನೆಗಳಿಗೆ ನುಗ್ಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಕಾರ್ಪೊರೇಟರುಗಳು ಮುಖ ಮುಚ್ಚಿಕೊಳ್ಳಬೇಕಾದ ಸ್ಥಿತಿ ಬಂದಿತ್ತು. ಯಾಕಂದ್ರೆ, ಅಲ್ಲಿ ನೀರು ಹರಿಯುವ ತೋಡು ಬ್ಲಾಕ್ ಆಗಿದ್ದೇ ಕೃತಕ ನೆರೆ ಆವರಿಸಲು ಕಾರಣವಾಗಿತ್ತು.
ಪಂಪ್ವೆಲ್ ಫ್ಲೈಓವರ್ ಅಡಿಭಾಗದಲ್ಲಿ ಕಂಕನಾಡಿ ಕಡೆಯಿಂದ ಹರಿದು ಬರುವ ಬೃಹತ್ ಕಾಲುವೆ ಇದೆ. ಸರ್ವಿಸ್ ರಸ್ತೆ ಮಾಡುವ ಸಂದರ್ಭದಲ್ಲಿ ಕಾಲುವೆಗೆ ಅಡ್ಡಲಾಗಿ ಸೇತುವೆಯನ್ನು ಎತ್ತರ ಕಡಿಮೆಗೊಳಿಸಿದ್ದರಿಂದ ಒಂದೇ ಸಮನೆ ಸುರಿದ ಮಳೆಗೆ ಪೂರ್ತಿ ಬ್ಲಾಕ್ ಆಗಿತ್ತು. ಪ್ಲಾಸ್ಟಿಕ್ ಕಸಗಳು, ತೋಡಿನಲ್ಲಿ ತುಂಬಿದ್ದ ಹೂಳು ಎಲ್ಲ ಸೇರಿಕೊಂಡು ಅಲ್ಲಿನ ಕಿರಿದಾದ ಸೇತುವೆಯನ್ನು ಬಂದ್ ಮಾಡಿದ್ದರಿಂದ ಮೂರು ಕಡೆಯಿಂದ ಬಂದು ಸೇರುವ ನೀರು ಪಂಪ್ವೆಲ್ ಫ್ಲೈಓವರ್ ಅಡಿಭಾಗದಲ್ಲೇ ಶೇಖರಣೆಯಾಗಿತ್ತು. ಬೆಳ್ಳಂಬೆಳಗ್ಗೆ ಘಟನೆ ಆಗಿದ್ದರಿಂದ ಜನ ಎಚ್ಚತ್ತುಕೊಳ್ಳುವ ಮೊದಲೇ ರಸ್ತೆಗಳು ನೀರಿನಿಂದ ಆವೃತ ಆಗಿದ್ದವು.
ಬೆಳಗ್ಗೆ ಏಳು ಗಂಟೆ ಹೊತ್ತಿಗೆ ಲಾಕ್ಡೌನ್ ಫ್ರೀಯಾಗಿ ಜನರು ವಾಹನಗಳಲ್ಲಿ ಬರತೊಡಗಿದಾಗ, ಅಲ್ಲಿನ ಸ್ಥಿತಿ ಕಂಡು ಹೌಹಾರಿದ್ದರು. ನೀರು ಆವರಿಸಿದ್ದನ್ನು ನೋಡಿ, ಪಂಪ್ವೆಲ್ ಅವಸ್ಥೆಯೇ ಎಂದು ಚೀ, ಥೂ ಎಂದು ಉಗಿದಿದ್ದರು. ಬೆಳಗ್ಗೆ ಒಂದು ಗಂಟೆ ಕಾಲ ಸುರಿದ ಭಾರೀ ಮಳೆ ಆನಂತರ ನಿಂತು ಹೋಗಿತ್ತು. ಉಕ್ಕೇರಿದ್ದ ಕಾಲುವೆಯಲ್ಲಿ ನೀರೂ ಇಳಿಕೆಯಾಗಿತ್ತು. ನೀರು ಇಳಿದ ಬಳಿಕ ಅಲ್ಲಿಗೆ ಬಂದಿದ್ದ ಹೆದ್ದಾರಿ ಇಂಜಿನಿಯರುಗಳು, ಕಾರ್ಪೋರೇಟರುಗಳು ಸರ್ವಿಸ್ ರಸ್ತೆಯ ಸೇತುವೆ ಕಿರಿದಾಗಿದ್ದೇ ಕಾರಣ ಎನ್ನುತ್ತಿದ್ದರು. ಸೇತುವೆ ತಗ್ಗು ಆಗಿದ್ದರಿಂದ ಅದನ್ನು ಎತ್ತರಿಸುವುದೇ ಉತ್ತರ ಎಂದು ಹೇಳುತ್ತಿದ್ದರು. ಇನ್ನೊಬ್ಬ ಕಾರ್ಪೊರೇಶನ್ ಇಂಜಿನಿಯರ್, ಕಳೆದ ಬಾರಿ 50 ಲೋಡ್ ಹೂಳು ತೆಗೆದಿದ್ದೇವೆ. ಈಗ ನೋಡಿ ಮತ್ತೆ ಹೂಳು ತುಂಬಿದ್ದು ನೆರೆ ಸೃಷ್ಟಿಯಾಗಿದೆ ಎಂದು ಹೇಳತೊಡಗಿದ್ದ.
ಸೇತುವೆಯನ್ನು ಅಷ್ಟು ಕಿರಿದಾಗಿ ಮತ್ತು ಎತ್ತರ ಕಡಿಮೆಗೊಳಿಸಿ ಮಾಡಿದ್ದು ಯಾಕೆ ? ಮಂಗಳೂರು ನಗರ ಭಾಗದ ಕಂಕನಾಡಿ, ಬೆಂದೂರುವೆಲ್ ಕಡೆಯಿಂದ ದೊಡ್ಡ ಮಟ್ಟಿನ ನೀರು ಪಂಪ್ವೆಲ್ ನತ್ತ ಹರಿಯುತ್ತದೆ. ಅತ್ತ ಮರೋಳಿ, ನಾಗುರಿ, ಪಡೀಲ್ ಕಡೆಯಿಂದಲೂ ಸಾಕಷ್ಟು ನೀರು ಹರಿದು ಬಂದು ಪಂಪ್ವೆಲ್ ನಲ್ಲಿ ಸೇರುತ್ತದೆ. ಇಂಥ ಜಾಗದಲ್ಲಿ ಕಿರಿದಾದ ಕಿಂಡಿಯ ರೀತಿ ಸೇತುವೆ ಮಾಡಬಾರದು ಎಂಬ ಕಾಮನ್ ಸೆನ್ಸ್ ಇಂಜಿನಿಯರಿಗೆ ಇರಲಿಲ್ಲವೇ ಎಂಬ ಪ್ರಶ್ನೆಯನ್ನು ಯಾರು ಕೂಡ ಕೇಳಿರಲಿಲ್ಲ. ಕರ್ಣಾಟಕ ಬ್ಯಾಂಕಿನವರು ತಮ್ಮ ಸಿಎಸ್ಆರ್ ಫಂಡಿನಿಂದ ಪಂಪ್ವೆಲ್ ಫ್ಲೈಓವರಿಗೆ ಬಣ್ಣ ಬಳಿಯುತ್ತಿದ್ದಾರೆ. ಪಂಪ್ವೆಲ್ ನಿಂದ ನಂತೂರು ವರೆಗೂ ಸರಳು ಅಳವಡಿಸಿ ಹೆದ್ದಾರಿಯನ್ನು ಆಕರ್ಷಕ ಮಾಡುತ್ತಿದ್ದಾರೆ.
ಸ್ಥಳಕ್ಕೆ ಬಂದಿದ್ದ ಬ್ಯಾಂಕ್ ಪ್ರತಿನಿಧಿಯೊಬ್ಬರು ಶರಣ್ ಪಂಪ್ವೆಲ್ ಬಳಿ, ನೀವು ಹೇಳಿದರೆ ನಾವೇ ಸೇತುವೆ ಮಾಡಿಕೊಡುತ್ತೇವೆ, ಎಂಪಿಯವರಿಗೆ ಹೇಳಿ ಎಂದು ಹಲುಬುತ್ತಿದ್ದರು. ಕಾರ್ಪೊರೇಟರ್ ಭಾಸ್ಕರಚಂದ್ರ ಶೆಟ್ಟಿ ಕೂಡ ಹೊಸ ಸೇತುವೆ ಮಾಡಿದ್ರೆ ಮಾತ್ರ ಇಲ್ಲಿ ಚರಂಡಿ ನೀರು ನಿಲ್ಲಿಸಬಹುದು ಎನ್ನುತ್ತಿದ್ದರು. ಅಲ್ಲಿಗೆ ಬಂದಿದ್ದ ಜನಪ್ರತಿನಿಧಿಗಳು, ಅಧಿಕಾರಿಗಳ ಮಾತು ಕೇಳಿದರೆ ವರ್ಷದ ಹಿಂದೆ ರೆಡಿ ಮಾಡಿದ್ದ ಸರ್ವಿಸ್ ರಸ್ತೆಯನ್ನು ಮತ್ತೆ ಅಗೆದು, ಹೊಸ ಸೇತುವೆಯನ್ನು ಮಾಡಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದರು.
ಕಣ್ಣು, ಮೂಗು, ಬಾಯಿ ಮುಚ್ಚಿಕೊಂಡು ಪ್ರತಿಬಾರಿ ರಸ್ತೆಯನ್ನು ಅಗೆಯುವುದು, ಅದಕ್ಕೊಂದು ಬಿಲ್ ಮಾಡುವುದಷ್ಟೇ ನಮ್ಮ ಅಧಿಕಾರಿಗಳ ಅವಸ್ಥೆ ನೋಡಿ.. ಇದೇ ಮಳೆಗಾಲದಲ್ಲಿ ಸೇತುವೆ ಅಗೆದು ಕಾಮಗಾರಿಗೆ ತೊಡಗಿದರೆ, ಪಂಪ್ವೆಲ್ ಆಸುಪಾಸಿನಲ್ಲಿ ಮನೆ ಮಾಡಿಕೊಂಡವರು, ರಸ್ತೆಯಲ್ಲಿ ಸಾಗುವ ಪ್ರಯಾಣಿಕರು ಮಾತ್ರ ಕಷ್ಟ ಪಡಲೇಬೇಕು. ಐದಾರು ವರ್ಷಗಳ ಹಿಂದೊಮ್ಮೆ ಪಂಪ್ವೆಲ್ ಫ್ಲೈಓವರ್ ಕೆಲಸ ಆಗುತ್ತಿದ್ದಾಗ ಭಾರೀ ಮಳೆಗೆ ಇಡೀ ಪಂಪ್ವೆಲ್ ನದಿಯಂತಾಗಿತ್ತು. ಅದೇ ಸ್ಥಿತಿಯನ್ನು ಮತ್ತೆ ತರುತ್ತಾರೋ ಏನೋ..
Video:
Massive Waterlogging witnessed on the service road near Pumpwell flyover in Mangalore. Netizens troll Naleen Kumar Kateel on Social Media for his tremendous work in the construction of the Pumpwell flyover.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm