ಬೆಳ್ತಂಗಡಿ ; ಸಿಯೋನ್ ಅನಾಥಾಶ್ರಮದಲ್ಲಿ ಕೊರೊನಾ ಅಟ್ಟಹಾಸ ! 210 ಮಂದಿಗೆ ಸೋ‌ಂಕು ಪತ್ತೆ

30-05-21 09:21 pm       Mangaluru Correspondent   ಕರಾವಳಿ

ಸಿಯೋನ್ ಅನಾಥಾಶ್ರಮದಲ್ಲಿ ವೃದ್ಧರು ಸೇರಿದಂತೆ 210 ಜನರಿಗೆ ಕೊರೊನಾ ಸೋಂಕು ತಗಲಿದ್ದು , ಆತಂಕ ಸೃಷ್ಟಿಯಾಗಿದೆ.

ಬೆಳ್ತಂಗಡಿ, ಮೇ 30: ಧರ್ಮಸ್ಥಳ ಬಳಿಯ ನೆರಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಡಿಬಾಗಿಲಿನ ಸಿಯೋನ್ ಅನಾಥಾಶ್ರಮದಲ್ಲಿ ವೃದ್ಧರು ಸೇರಿದಂತೆ 210 ಜನರಿಗೆ ಕೊರೊನಾ ಸೋಂಕು ತಗಲಿದ್ದು , ಆತಂಕ ಸೃಷ್ಟಿಯಾಗಿದೆ.

ಆಶ್ರಮದ 270 ಜನರ ಪೈಕಿ 210 ಮಂದಿಯಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಅಲ್ಲಿನ ಎಲ್ಲರನ್ನೂ ಸಾಮೂಹಿಕ ಪರೀಕ್ಷೆಗೆ ಒಳಪಡಿಸಿದ್ದು , ಈ ವೇಳೆ ಸೋಂಕು ವ್ಯಾಪಕವಾಗಿ ಹರಡಿರುವುದು ಪತ್ತೆಯಾಗಿದೆ.

ಎರಡು ದಿನಗಳ ಹಿಂದೆ ಆಶ್ರಮದ ಕೆಲವರಲ್ಲಿ ಸೋಂಕು ಕಂಡುಬಂದಿತ್ತು. ಹೀಗಾಗಿ ಇಂದು ಎಲ್ಲರನ್ನೂ ರ್ಯಾಪಿಡ್ ಟೆಸ್ಟ್ ನಡೆಸಿದ್ದು ಬಹುತೇಕ ಎಲ್ಲರಲ್ಲೂ ಸೋಂಕು ಪತ್ತೆಯಾಗಿದೆ. ಸಿಯೋನ್ ಆಶ್ರಮದಲ್ಲಿ ಬಹುತೇಕ ವೃದ್ಧರು ಮತ್ತು ಮನೋರೋಗಿಗಳಿದ್ದಾರೆ. ಸೋಂಕಿತರನ್ನು ಕೋವಿಡ್ ಕೇರ್ ಸೆಂಟರಿಗೆ ಸ್ಥಳಾಂತರ ಮಾಡಲು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮುಂದಾಗಿದ್ದಾರೆ.

ಧರ್ಮಸ್ಥಳದ ರಜತಾದ್ರಿ ವಸತಿಗೃಹವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾಡಲಾಗಿದ್ದು ಆಶ್ರಮದ ಸೋಂಕಿತರನ್ನು ಅಲ್ಲಿಗೆ ಸ್ಥಳಾಂತರ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ.

Seon Ashram Trust which takes care of the homeless is now a Covid Hotspot. 210 homeless people have been tested Cvoid positive. The Ashram is a rehabilitation centre in Belthangady, Mangalore which takes care of the mentally retarded, physically handicapped and homeless