ಬ್ರೇಕಿಂಗ್ ನ್ಯೂಸ್
04-06-21 09:34 pm Mangaluru Correspondent ಕರಾವಳಿ
ಮಂಗಳೂರು, ಜೂನ್ 4: ಗರ್ಭಿಣಿ ಮಹಿಳೆಗೆ ಚಿಕಿತ್ಸೆ ನಿರಾಕರಣೆ, ವೈದ್ಯರು ಆಸ್ಪತ್ರೆ ಸುತ್ತಿಸಿದ್ದಾರೆಂಬ ಸುದ್ದಿಯ ಬೆನ್ನತ್ತಿದ ‘’ಹೆಡ್ ಲೈನ್ ಕರ್ನಾಟಕ’’ ಒಟ್ಟು ಪ್ರಕರಣದ ಹೂರಣಕ್ಕೆ ವೈದ್ಯರ ಮೇಲಿನ ಅಪನಂಬಿಕೆಯೇ ಕಾರಣ ಎನ್ನುವ ವಿಚಾರವನ್ನು ಪತ್ತೆ ಮಾಡಿದೆ. ಖತೀಜಾ ಜಾಸ್ಮಿನ್ ಎನ್ನುವ ಎಂಟು ತಿಂಗಳ ಗರ್ಭಿಣಿ ಮಹಿಳೆ ಮೊದಲಿನಿಂದಲೂ ಗೈನಕಾಲಜಿಸ್ಟ್ ಡಾ.ಪ್ರಿಯಾ ಬಳ್ಳಾಲ್ ಅವರಲ್ಲೇ ಟ್ರೀಟ್ಮೆಂಟ್ ಪಡೆದುಕೊಂಡಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಯಾರದ್ದೋ ಮಾತು ಕೇಳಿ ಅಪನಂಬಿಕೆ ಬೆಳೆಸಿಕೊಂಡು ಕುಟುಂಬಸ್ಥರು ತಮಗೆ ತೋಚಿದಂತೆ ಆರೋಪ ಮಾಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಮೇ ತಿಂಗಳ 17ರಂದು ಖತೀಜಾ ಜಾಸ್ಮಿನ್ ವೈದ್ಯರಿಗೆ ಫೋನ್ ಮಾಡಿ, ತನಗೆ ಕಫ ಮತ್ತು ಸ್ವಲ್ಪ ಜ್ವರ ಇರುವ ಬಗ್ಗೆ ಹೇಳಿಕೊಂಡಿದ್ದರು. ಕೂಡಲೇ ಪ್ರಿಯಾ ಬಳ್ಳಾಲ್, ಕೋವಿಡ್ ಟೆಸ್ಟ್ ಮಾಡುವಂತೆ ಸೂಚನೆ ನೀಡಿದ್ದರು. ಆದರೆ, ಕೋವಿಡ್ ಏನೂ ಇರಲ್ಲ. ಇದು ನಾರ್ಮಲ್ ಆಗಿರುವ ಜ್ವರ. ಔಷಧಿ ಹೇಳಿ, ನಾವು ಮೆಡಿಕಲ್ ನಿಂದ ಪಡೆದುಕೊಳ್ಳುತ್ತೇವೆ ಎಂದಿದ್ದರು ಖತೀಜಾ. ಅದಕ್ಕೆ ಇವತ್ತು ಬೇಕಿದ್ದರೆ, ಪ್ಯಾರಾಸಿಟಮಾಲ್ ಪಡೆದುಕೊಳ್ಳಿ. ನಾಳೆ ಇಲ್ಲಿಗೇ ಬನ್ನಿ, ನಾವು ಕೋವಿಡ್ ಟೆಸ್ಟ್ ಮಾಡುತ್ತೇವೆ. ಗರ್ಭಿಣಿ ಆಗಿದ್ದುಕೊಂಡು ಕೋವಿಡ್ ಬಗ್ಗೆ ಕೇರ್ ಲೆಸ್ ಮಾಡಬಾರದು ಎಂದಿದ್ದರು ಡಾಕ್ಟರ್.
ಆದರೆ, ಮರುದಿನ ಮನೆಯಲ್ಲೇ ಇದ್ದ ಖತೀಜಾ ಜಾಸ್ಮಿನ್, ಎರಡು ದಿನ ಕಳೆದು ಜ್ವರ ಇರುವ ಬಗ್ಗೆ ಮತ್ತೆ ಪ್ರಿಯಾ ಬಳ್ಳಾಲ್ ಅವರಲ್ಲೇ ಹೇಳಿಕೊಂಡಿದ್ದಾರೆ. ನಿಮಗೆ, ಟೆಸ್ಟ್ ಮಾಡಿಕೊಳ್ಳಿ ಎಂದಿದ್ದೇನೆ. ಕೂಡಲೇ ಇಲ್ಲಿಗೆ ಬನ್ನಿ. ಇಲ್ಲಾಂದ್ರೆ, ಬೇರೆ ಕಡೆ ಟೆಸ್ಟ್ ಮಾಡಿಸಿಕೊಳ್ಳಿ. ಪಾಸಿಟಿವ್ ಬಂದರೆ ಅಡ್ಮಿಟ್ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಹಾಗಿದ್ದರೂ, ಖತೀಜಾ ಅವರು ಪ್ರಿಯಾ ಬಳ್ಳಾಲ್ ಅವರ ವಿಜಯಾ ಕ್ಲಿನಿಕ್ ಗೆ ಬಂದಿರಲಿಲ್ಲ. ಮೇ 19ರಂದು ಸಂಜೆ ಸಿಟಿ ಹಾಸ್ಪಿಟಲ್ ನಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದು ಪಾಸಿಟಿವ್ ಬಂದಿತ್ತು. ಅಲ್ಲಿಯೂ ನೀವು ಕೂಡಲೇ ಅಡ್ಮಿಶನ್ ಆಗಬೇಕು, ಆದರೆ ನಮ್ಮಲ್ಲಿ ಆಗಲ್ಲ ಎಂದಿದ್ದರು.
ಆನಂತರ ಮತ್ತೆ ಖತೀಜಾ ಕಡೆಯವರು ಪ್ರಿಯಾ ಬಳ್ಳಾಲ್ ಅವರಿಗೇ ಕರೆ ಮಾಡಿದ್ದು, ಕೋವಿಡ್ ಪಾಸಿಟಿವ್ ಆಗಿದೆ, ನಾವು ನಿಮ್ಮ ವಿಜಯ ಕ್ಲಿನಿಕ್ಕಿಗೆ ಬರಬೇಕಾ ಎಂದು ಕೇಳಿದ್ದಾರೆ. ಇಲ್ಲಿ ದಯವಿಟ್ಟು ಬರಬೇಡಿ. ನೀವು ಅಡ್ಮಿಟ್ ಮಾಡಿಕೊಳ್ಳಬೇಕು. ಆದರೆ, ನಮ್ಮಲ್ಲಿ ನಿಮ್ಮನ್ನು ಅಡ್ಮಿಶನ್ ಮಾಡಿಸಿಕೊಳ್ಳಲು ಫೆಸಿಲಿಟಿ ಇಲ್ಲ. ಕೋವಿಡ್ ಇರುವ ಗರ್ಭಿಣಿಯರನ್ನು ಇರಿಸಬಲ್ಲ ಐಸಿಯು, ವೆಂಟಿಲೇಶನ್ ಇರುವಂಥ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ಅಥವಾ ಲೇಡಿಗೋಷನ್ ನೀವು ಹೋಗಬಹುದು ಎಂದಿದ್ದಾರೆ. ಬಳಿಕ ರಾತ್ರಿ ಹೊತ್ತಿಗೆ, ಫೋನ್ ಮಾಡಿ ನಾವು ಕೆಎಂಸಿ ಹೋಗುತ್ತೇವೆ. ನೀವು ಹೇಳ್ತೀರಾ ಎಂದು ಕೇಳಿದ್ದರು. ಓಕೆ ಎಂದಿದ್ದ ಪ್ರಿಯಾ ಬಳ್ಳಾಲ್, ಕೆಎಂಸಿ ಆಸ್ಪತ್ರೆಯಲ್ಲಿ ಹೇಳಿ ವ್ಯವಸ್ಥೆ ಮಾಡಿಸಿದ್ದರು. ಆದರೆ, ಅಲ್ಲಿಯೂ ಮೆಟರ್ನಿಟಿ ಬ್ಲಾಕ್ ವೆಂಟಿಲೇಟರ್ ರೆಡಿ ಇಲ್ಲ ಎಂದಿದ್ದರು. ಇದರ ಬಗ್ಗೆಯೂ ಖತೀಜಾ ಕುಟುಂಬಕ್ಕೆ ಪ್ರಿಯಾ ಹೇಳಿದ್ದಾರೆ.
ಹಾಗಿದ್ದರೂ, ಮೇ 20ರ ವರೆಗೂ ಖತೀಜಾ ಜಾಸ್ಮಿನ್ ಯಾವುದೇ ಆಸ್ಪತ್ರೆಗೂ ಅಡ್ಮಿಶನ್ ಆಗಿರದೆ ಮನೆಯಲ್ಲೇ ಉಳಿದುಕೊಂಡಿದ್ದರು. ಈ ನಡುವೆ, ಖತೀಜಾ ಸೋದರ ಫೋನ್ ಮಾಡಿ, ಇವರು ಹುಷಾರಿದ್ದಾರೆ, ನಾವು ಅಥೆನಾಗೆ ಹೋಗ್ತೀವಿ, ನೀವು ಅಥೆನಾ ಆಸ್ಪತ್ರೆಗೆ ಬರಬಹುದಾ ಎಂದು ಕೇಳಿದ್ದಾರೆ. ಅಥೆನಾ ಆಸ್ಪತ್ರೆಗೆ ನಾನು ಈವರೆಗೂ ಹೋಗಿಯೇ ಇಲ್ಲ. ಅಲ್ಲಿನ ಕಂಡಿಶನ್ ಹೇಗಿದೆ, ಅಲ್ಲಿ ಮೆಟರ್ನಿಟಿ ಐಸಿಯು ಇದೆಯಾ ಅಂತ ಗೊತ್ತಿಲ್ಲ. ಅಲ್ಲಿಗೆ ನಾನು ಬರುವುದಕ್ಕೆ ಆಗೋದಿಲ್ಲ. ಅಲ್ಲಿ ಬೇರೆಯೇ ಗೈನಕಾಲಜಿಸ್ಟ್ ಇರುತ್ತಾರೆ, ಆದಷ್ಟು ಬೇಗ ಅಡ್ಮಿಟ್ ಮಾಡಿಸಿ ಎಂದಿದ್ದರು. ಇದೇ ವೇಳೆ, ಮೇ 20ರಂದು ಅಥೆನಾ ಮತ್ತು ವಿಜಯಾ ಕ್ಲಿನಿಕ್ಕಿಗೂ ಖತೀಜಾ ಅವರನ್ನು ಒಯ್ದಿದ್ದಾರಂತೆ. ಈ ನಡುವೆ, ಖತೀಜಾ ಅವರನ್ನು ಪರಿಶೀಲಿಸಿದ್ದ ಡಾ.ಮುರಲೀಧರ್ ಮತ್ತು ಡಾ.ಜಯಪ್ರಕಾಶ್ ಮೇಲೆ ಖತೀಜಾ ಕುಟುಂಬಸ್ಥರು ಏರಿ ಹೋಗಿದ್ದಾರೆ. ಜಯಪ್ರಕಾಶ್ ಕುತ್ತಿಗೆ ಹಿಡಿದು ಸಾಯಿಸುವ ಬೆದರಿಕೆಯನ್ನೂ ಹಾಕಿದ್ದಾರಂತೆ.
ಅಥೆನಾ ಹಾಸ್ಪಿಟಲ್ ನಲ್ಲಿ 25ರಷ್ಟು ಯುವಕರು ಸೇರಿಕೊಂಡು ಇಬ್ಬರು ವೈದ್ಯರನ್ನೂ ಅಶ್ಲೀಲವಾಗಿ ನಿಂದಿಸಿದ್ದಲ್ಲದೆ, ಜೀವ ಬೆದರಿಕೆ ಹಾಕಿದ್ದೂ ನಡೆದಿತ್ತು. ಆನಂತರ ಅದೇ ದಿನ ರಾತ್ರಿ (ಮೇ 20) ಮೂಲ್ಕಿಯ ಆಪತ್ಪಾಂಧವ ಆಸಿಫ್ ಸಲಹೆಯಂತೆ, ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಿ, ರಾತ್ರಿಯೇ ಸಿಸೇರಿಯನ್ ಮಾಡಲಾಗಿತ್ತು. ತಾಯಿ ಮತ್ತು ಮಗುವನ್ನು ಪ್ರತ್ಯೇಕವಾಗಿ ಐಸಿಯುನಲ್ಲಿ ಇಡಲಾಗಿತ್ತು.
ಡಾ.ಜಯಪ್ರಕಾಶ್ ಮತ್ತು ಮುರಲೀಧರ್ ಮೇಲಿನ ಆರೋಪ ಏನಂದ್ರೆ, ಅವರಿಬ್ಬರೂ ಹೆದರಿಸಿದ್ದಾರೆ. ಕೂಡಲೇ ಅಡ್ಮಿಶನ್ ಮಾಡದೇ ಇದ್ದರೆ ತಾಯಿ, ಮಗುವಿನ ಜೀವಕ್ಕೇ ಅಪಾಯ ಇದೆ ಎಂದಿದ್ದಾರೆ ಎನ್ನುವುದು. ಇಬ್ಬರು ವೈದ್ಯರು ಕೂಡ ನಿಜವನ್ನೇ ಹೇಳಿದ್ದರು. ಎಂಟು ತಿಂಗಳ ಗರ್ಭಿಣಿಯಾಗಿದ್ದುಕೊಂಡು ಕೋವಿಡ್ ಪೇಶಂಟ್ ಆಗಿ ಅಡ್ಮಿಶನ್ ಮಾಡಿಸಿಕೊಳ್ಳದೇ ಹೀಗೆ ಆಸ್ಪತ್ರೆ ಸುತ್ತುವುದು ಅಪಾಯಕ್ಕೆ ದಾರಿ ಎನ್ನುವ ಎಚ್ಚರಿಕೆಯನ್ನು ಕೊಟ್ಟಿದ್ದರು.
ಆದರೆ, ಅಥೆನಾ ಆಸ್ಪತ್ರೆಗೆ ಬಂದಿದ್ದ ಮೂಲ್ಕಿಯ ಆಸಿಫ್ ಸೇರಿದಂತೆ ಹಲವರು ಯುವಕರು ವೈದ್ಯರ ಮಾತನ್ನು ಕೇಳಲೇ ಇಲ್ಲ. ನೀವು ಮಹಿಳೆಯ ಆಕ್ಸಿಜನ್ ತೆಗೆದು ಜೀವ ತೆಗೆಯುವುದಾಗಿ ಬೆದರಿಸಿದ್ದೀರಿ. ನಿನಗೆ ಎಲ್ಲಿಯೂ ಆಸ್ಪತ್ರೆ ಸಿಗದಂತೆ ಮಾಡ್ತೀನಿ ಎಂದಿದ್ದೀರಲ್ಲಾ ಎಂದು ಕೆಎಂಸಿ ಪ್ರೊಫೆಸರ್ ಕೂಡ ಆಗಿರುವ ಡಾ.ಮುರಲೀಧರ್ ಯಡಿಯಾಳ್ ಅವರನ್ನು ಕರೆದು ರಂಪ ಮಾಡಿದ್ದಾರೆ. ಅಥೆನಾ ಆಸ್ಪತ್ರೆಯಲ್ಲಿ ಅಂದು ರಂಪಾಟವೇ ನಡೆದಿತ್ತು. ವೈದ್ಯರನ್ನು ಮೂಲೆಗೆ ತಳ್ಳಿದ್ದಲ್ಲದೆ, ಕಾಲರ್ ಹಿಡಿದು ಬೆದರಿಕೆ ಹಾಕಿದ್ದ ಘಟನೆಯೂ ನಡೆದಿತ್ತು.
ಡಾ.ಮುರಲೀಧರ ಯಡಿಯಾಳ್ ವೆನ್ಲಾಕ್ ನಲ್ಲಿ ಜನರಲ್ ಫಿಸೀಶಿಯನ್ ವೈದ್ಯರಾಗಿದ್ದು, ಖತೀಜಾರನ್ನು ಸಿಸೇರಿಯನ್ ಆದಬಳಿಕ ಟೆಸ್ಟ್ ಮಾಡಿದ್ದರು. ಸಿಸೇರಿಯನ್ ಆಗಿರುವ ಮಹಿಳೆಯ ಬಗ್ಗೆ ಜನರಲ್ ಫಿಸೀಶಿಯನ್ ವೈದ್ಯರು ನಿಗಾ ಇಡುತ್ತಾರೆ. ಇದೇ ವೇಳೆ, ಡಾ.ಮುರಲೀಧರ್, ನಿಮ್ಮ ಈ ಸ್ಥಿತಿಗೆ ನೀವು ವೈದ್ಯರ ಮಾತು ಕೇಳದೇ ಅಲೆದಾಡಿದ್ದೇ ಕಾರಣ ಎಂದು ಗೊಣಗಿದ್ದರು. ಆದರೆ, ಅಷ್ಟಕ್ಕೇ ಖತೀಜಾ ಜಾಸ್ಮಿನ್ ಕುಟುಂಬಸ್ಥರಿಗೆ ವಿಡಿಯೋ ಕಾಲ್ ಮಾಡಿ, ವೈದ್ಯರು ತನ್ನನ್ನು ಬೈದಿದ್ದಾರೆ, ಜೀವ ತೆಗೆಯುತ್ತೇನೆಂದು ಹೇಳಿದ್ದಾಗಿ ತಿಳಿಸಿದ್ದಾರೆ. ಇದರಿಂದ ಗಾಬರಿ ಬಿದ್ದ ಕುಟುಂಬಸ್ಥರು ಮತ್ತು ಕೆಲವು ಯುವಕರು ತಪ್ಪಾಗಿ ಭ್ರಮಿಸಿ ಸಿಟ್ಟುಗೊಂಡಿದ್ದಲ್ಲದೆ, ವೈದ್ಯರನ್ನು ಕರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಡಾ.ಮುರಲೀಧರ್ ಅವರನ್ನು ಅಥೆನಾಗೆ ಕರೆಸಿ, ಅಲ್ಲಿ ಏನಾಯ್ತು ಅನ್ನೋದ್ರ ಬಗ್ಗೆ ವಿವರಣೆ ನೀಡುವಂತೆ ಹೇಳಿದ್ದಾರೆ. ಇದಕ್ಕೂ ಮುನ್ನ ಮುರಲೀಧರ್ ಅವರೇ ಕುಟುಂಬಸ್ಥರಲ್ಲಿ ಹಿರಿಯರೊಬ್ಬರನ್ನು ವೆನ್ಲಾಕಿನ ಐಸಿಯುಗೆ ಕರೆದೊಯ್ದು ಮಹಿಳೆಯನ್ನು ತೋರಿಸಿದ್ದಲ್ಲದೆ, ಆಕೆ ಆರೋಗ್ಯದಲ್ಲಿ ಇರುವುದನ್ನು ದೃಢಪಡಿಸಿದ್ದರು.
ಇವೆಲ್ಲ ಘಟನೆ ಬಳಿಕ ಬೆದರಿದ ಡಾ.ಜಯಪ್ರಕಾಶ್, ಪೊಲೀಸ್ ದೂರು ಕೊಟ್ಟಿದ್ದಾರೆ. ಮೇ 30ರಂದು ಕದ್ರಿ ಪೊಲೀಸರು ಇಬ್ಬರನ್ನು ಬಂಧಿಸಿ ಅದೇ ದಿನ ಸ್ಟೇಶನ್ ಜಾಮೀನಲ್ಲಿ ಬಿಡುಗಡೆಯನ್ನೂ ಮಾಡಿದ್ದಾರೆ. ಇಷ್ಟಾಗುತ್ತಿದ್ದಂತೆ, ಎಚ್ಚೆತ್ತ ಎಸ್ಡಿಪಿಐ ಮುಖಂಡರು ಮತ್ತು ಮಹಿಳೆಯ ಕುಟುಂಬಸ್ಥರು ವೈದ್ಯರೆಲ್ಲ ಸೇರಿಕೊಂಡು ಮಹಿಳೆಯನ್ನು ಸತಾಯಿಸಿದ್ದಾಗಿ ಬಿಂಬಿಸಿ, ಪ್ರತಿ ದೂರು ದಾಖಲಿಸಿದ್ದಾರೆ. ಕೋವಿಡ್ ಸೋಂಕಿತ ಗರ್ಭಿಣಿಯನ್ನು ಮಾನವೀಯತೆ ಮರೆತು ಏಳೆಂಟು ಆಸ್ಪತ್ರೆಗಳಿಗೆ ಸುತ್ತಿಸಿದ್ದಾರೆ ಎಂದು ದೂರಿದ್ದಾರೆ. ಇದೇ ವಿಚಾರ ಹೈಲೈಟ್ ಆಗಿದ್ದಲ್ಲದೆ, ಅದೇ ನೆಪ ಇಟ್ಟುಕೊಂಡು ಎಸ್ಡಿಪಿಐ ಮುಖಂಡರು ಪ್ರಿಯಾ ಬಳ್ಳಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಡೀ ಘಟನೆಯ ಬಗ್ಗೆ ಇಂದು ಐಎಂಎ ಘಟಕದ ವೈದ್ಯರು ಸುದ್ದಿಗೋಷ್ಠಿ ಕರೆದು, ಜನರು ಈ ರೀತಿ ವರ್ತನೆ ತೋರಿದ್ದನ್ನು ಖಂಡಿಸಿದ್ದಾರೆ. ಪ್ರಿಯಾ ಬಳ್ಳಾಲ್ ಕೂಡ, ಆಗಿರುವ ವಿಷಯವನ್ನು ಹೇಳಿಕೊಂಡರು. ತುಂಬ ಸಜ್ಜನ ವ್ಯಕ್ತಿಯಾಗಿರುವ ಡಾ.ಜಯಪ್ರಕಾಶ್ ಮಾತ್ರ ತುಂಬಾನೇ ಗದ್ಗದಿತರಾದರು. ನಾನು ವೈದ್ಯ ವೃತ್ತಿಯನ್ನೇ ಬಿಡುತ್ತೇನೆ. ಊರಿಗೆ ಹೋಗಿ ತೋಟದ ಕೆಲಸ ಮಾಡುತ್ತೇನೆ. ತಂದೆ ಏನೋ ಸಮಾಜಸೇವೆ ಮಾಡು ಎಂದು ವೈದ್ಯಕೀಯ ಓದಿಸಿದ್ದರು. ಐಸಿಯುನಲ್ಲೇ ಸ್ಪೆಷಲಿಸ್ಟ್ ಆಗಿ ಮಂಗಳೂರಿಗೆ ಬಂದಿದ್ದೆ. ಆದರೆ, ಇಲ್ಲಿನ ಜನ ನನ್ನನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ನೋವು ತೋಡಿಕೊಂಡರು. ಪುತ್ತೂರು ಮೂಲದ ಡಾ.ಜಯಪ್ರಕಾಶ್, ಇಂಟೆನ್ಸಿವ್ ಕೇರ್ ಯುನಿಟ್ ಬಗ್ಗೆಯೇ ವಿಶೇಷವಾಗಿ ಅಧ್ಯಯನ ಮಾಡಿರುವ ಅತ್ಯಂತ ಅಪರೂಪದ ವ್ಯಕ್ತಿ. ಮಂಗಳೂರಿನಲ್ಲಿ ಐಸಿಯು ಬಗ್ಗೆ ಸ್ಪೆಷಲಿಸ್ಟ್ ಆಗಿರುವ ಮತ್ತೊಬ್ಬ ವೈದ್ಯರು ಇಲ್ಲ.
ಒಟ್ಟು ಘಟನೆ, ವೈದ್ಯರ ಸೂಚನೆಯನ್ನು ಪಾಲಿಸದೆ, ಕುಟುಂಬಸ್ಥರು ಏನೋ ಅಪನಂಬಿಕೆ ಇಟ್ಟುಕೊಂಡಿದ್ದಕ್ಕೇ ಆಗಿದೆ ಅನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಕೋವಿಡ್ ಬಗ್ಗೆ ವೈದ್ಯರು ಜಾಗೃತಿ ವಹಿಸಿ, ಗರ್ಭಿಣಿ ಮಹಿಳೆಯರನ್ನು ಕೂಡಲೇ ಅಡ್ಮಿಶನ್ ಮಾಡಿಸಿಕೊಳ್ಳಲು ಸೂಚಿಸುತ್ತಾರೆ. ಆದರೆ, ಕೆಲವು ಸಂದರ್ಭಗಳಲ್ಲಿ ಕುಟುಂಬಸ್ಥರು, ಹಣ ಮಾಡುವುದಕ್ಕಾಗಿ ಈ ರೀತಿಯ ಸಲಹೆ ನೀಡುತ್ತಾರೆ ಎಂದುಕೊಂಡು ವೈದ್ಯರನ್ನೇ ಅಪನಂಬಿಕೆಯಿಂದ ನೋಡುತ್ತಾರೆ. ಇದರಿಂದ ಅಪಾಯಗಳಾದಲ್ಲಿ ಮತ್ತೆ ವೈದ್ಯರನ್ನೇ ದೂರುತ್ತಾರೆ..
Denied timely treatment to Covid 19 Pregnant Woman Jamine khatija. Dr Priya Ballal, Obstetrician-gynecologist in Mangalore reveals truth behind these allegations are made due to misunderstanding. A Fact Check by Headline Karnataka.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 06:14 pm
Mangalore Correspondent
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm