ಬ್ರೇಕಿಂಗ್ ನ್ಯೂಸ್
05-06-21 02:45 pm Mangalore Correspondent ಕರಾವಳಿ
ಮಂಗಳೂರು, ಜೂನ್ 5:ಫ್ರಂಟ್ ಲೈನ್ ವಾರಿಯರ್ಸ್ ಅಂದ್ರೆ, ಕೊರೊನಾ ಭಯದ ನಡುವೆಯೇ ಸಮಾಜದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಬೇಕಾದವರು. ಇದೇ ಕಾರಣಕ್ಕೆ ಈ ರೀತಿಯ ಕರ್ತವ್ಯದಲ್ಲಿ ತೊಡಗಿರುವ ಮಂದಿಗೆ ಸೋಂಕಿನ ಅಪಾಯವೂ ಹೆಚ್ಚು. ಪೊಲೀಸರು, ವೈದ್ಯಕೀಯ ಸಿಬಂದಿ, ಆರೋಗ್ಯ ಕಾರ್ಯಕರ್ತರು ಹೀಗೆ ಫ್ರಂಟ್ ಲೈನ್ ಕಾರ್ಯಕರ್ತರೆನಿಸಿಕೊಂಡವರು ಕೊರೊನಾ ಪೀಡೆಯನ್ನು ಮೆಟ್ಟಿನಿಂತು ಕರ್ತವ್ಯದಲ್ಲಿ ತೊಡಗಿದ್ದಾರೆ. ಆದರೆ, ಇವರೇ ಸೋಂಕಿಗೆ ಒಳಗಾದಾಗ ಹೇಗೆ ಎದುರಿಸುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ಸಾಕ್ಷ್ಯಚಿತ್ರವೊಂದು ರೆಡಿಯಾಗಿದೆ.
ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಸ್ವತಃ ಮುತುವರ್ಜಿ ವಹಿಸ್ಕೊಂಡು ಪೊಲೀಸ್ ಸಿಬಂದಿಯನ್ನೇ ಮುಂದಿಟ್ಟು ಡಾಕ್ಯುಮೆಂಟರಿ ರೆಡಿ ಮಾಡಿದ್ದಾರೆ. ಪೊಲೀಸರು ಕೊರೊನಾ ಸೋಂಕಿಗೆ ತುತ್ತಾದಾಗ ಅದನ್ನು ಹೇಗೆ ಎದುರಿಸುತ್ತಾರೆ ಮತ್ತು ಎದುರಿಸಬೇಕು ಎನ್ನುವುದನ್ನು 5 ನಿಮಿಷದ ಕಿರುಚಿತ್ರದಲ್ಲಿ ತೋರಿಸಲಾಗಿದೆ. ಇದಕ್ಕೆ ಬಳಸಿಕೊಂಡಿದ್ದು ಕಮಿಷನರ್ ಜೊತೆಗೆ ಸದಾ ಒಡನಾಡಿಯಾಗಿರುವ ಎಎಸ್ಐ ಅರುಣ್ ಆಳ್ವ ಅವರನ್ನು. ಸಾಮಾನ್ಯವಾಗಿ ಕಮಿಷನರ್ ಕಚೇರಿಗೆ ತೆರಳುವ ಮಂದಿಗೆ ಅರುಣ್ ಆಳ್ವ ಚಿರಪರಿಚಿತರು. ಮಂಗಳೂರಿಗೆ ಯಾರೇ ಕಮಿಷನರ್ ಆಗಿ ಬಂದರೂ ಅವರ ಇಲಾಖಾ ಕಾರು ಡ್ರೈವರ್ ಆಗಿ ಕೆಲಸ ಮಾಡೋದು ಅರುಣ್ ಆಳ್ವ.
ಈ ಬಾರಿಯ ಕಮಿಷನರ್ ಶಶಿಕುಮಾರ್ ಮಾತ್ರ ತನ್ನ ಜೊತೆಗೆ ಕೆಲಸ ಮಾಡುವ ಎಲ್ಲ ಸಿಬಂದಿಯ ಬಗ್ಗೆಯೂ ಕಾಳಜಿ ವಹಿಸಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಸಿಬಂದಿಯ ಊಟದಿಂದ ಹಿಡಿದು ಅದಕ್ಕೂ ಹಿಂದೆ ಸಿಬಂದಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಧಡೂತಿಗಳನ್ನು ಆಯ್ದು ವ್ಯಾಯಾಮ ಮಾಡಿಸಿ ದೈಹಿಕ ಸಾಮರ್ಥ್ಯ ಹೆಚ್ಚಿಸಿದ್ದು ಶ್ಲಾಘನೆಗೆ ಪಾತ್ರವಾಗಿತ್ತು. ಇದೀಗ ಕೊರೊನಾ ಸೋಂಕು ಆವರಿಸುತ್ತಿರುವ ಮಧ್ಯೆ ಪೊಲೀಸ್ ಸಿಬಂದಿ ಸೋಂಕನ್ನು ಹೇಗೆ ಎದುರಿಸಬೇಕು ಮತ್ತು ಸದಾ ಬಿಝಿಯಾಗಿರುವ ಮಂದಿ ಕ್ವಾರಂಟೈನ್ ಆದಾಗ ಧೃತಿಗೆಡದೆ ರೋಗವನ್ನು ಎದುರಿಸಲು ಯಾವ ರೀತಿಯ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು ಎನ್ನುವುದನ್ನು ಸಾಕ್ಷ್ಯಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ.
A Covid Journey of a Cop ಎನ್ನುವ ಸಾಕ್ಷ್ಯಚಿತ್ರವನ್ನು ಅರುಣ್ ಆಳ್ವ ಇತ್ತೀಚೆಗೆ ಸೋಂಕಿಗೆ ಒಳಗಾದಾಗ ಅದನ್ನು ಹೇಗೆ ಯಶಸ್ವಿಯಾಗಿ ಮೆಟ್ಟಿನಿಂತರು ಎನ್ನುವುದನ್ನು ಅವರದೇ ಮಾತುಗಳಲ್ಲಿ ಕಟ್ಟಿಕೊಡಲಾಗಿದೆ. ಪೊಲೀಸ್ ಸಿಬಂದಿಗೆ ಸೋಂಕು ಆಗುವುದು ಸಾಮಾನ್ಯವಾಗಿದ್ದು ಈ ಬಾರಿಯೂ ಎರಡನೇ ಅಲೆಯಲ್ಲಿ 80ಕ್ಕೂ ಹೆಚ್ಚು ಮಂದಿ ಮಂಗಳೂರಿನಲ್ಲಿ ಸೋಂಕಿಗೆ ಒಳಗಾಗಿದ್ದು ಇಬ್ಬರು ಸಾವು ಕಂಡಿದ್ದಾರೆ. ಈ ನಡುವೆ, ಪೊಲೀಸ್ ಸಿಬಂದಿಗಾಗಿಯೇ ಪ್ರತ್ಯೇಕ ಕೋವಿಡ್ ಕೇರ್ ಸೆಂಟರನ್ನೂ ಕಮಿಷನರ್ ವ್ಯವಸ್ಥೆ ಮಾಡಿದ್ದಾರೆ. ಸೋಂಕಿತರಾಗಿ ಮನೆಯಲ್ಲಿ ಪ್ರತ್ಯೇಕ ಇರುವುದಕ್ಕೆ ಸಾಧ್ಯವಾಗದಿದ್ದರೆ ಅವರನ್ನು ಅಲೋಶಿಯಸ್ ಕಾಲೇಜಿನಲ್ಲಿ ನಿಗಾ ಇಡುವುದಕ್ಕಾಗಿ ವ್ಯವಸ್ಥೆ ಮಾಡಿದ್ದಾರೆ.
ಇದೀಗ ತಮ್ಮ ಎಲ್ಲ ಸಿಬಂದಿಗೂ ಸಾಕ್ಷ್ಯಚಿತ್ರದ ಮೂಲಕ ರೋಗವನ್ನು ಎದುರಿಸಲು ಪ್ರೇರಣೆ ಒದಗಿಸಿದ್ದಾರೆ. ಕೊರೊನಾ ಅಂದರೆ ಭಯ ಪಡಬೇಕಿಲ್ಲ. ಅದನ್ನು ಸಾಮಾನ್ಯ ರೋಗವೆಂದೇ ಭಾವಿಸಿ, ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿದರೆ ಕೊರೊನಾವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಬಹುದು. ಕ್ವಾರಂಟೈನ್ ಆಗಿದ್ದರೂ, ಹಾಗೇ ಕುಳಿತು ಚಿಂತೆಗೆ ಒಳಗಾಗುವ ಬದಲು ಯೋಗ, ಪ್ರಾಣಾಯಾಮ, ದೈಹಿಕ ವ್ಯಾಯಾಮದಿಂದ ರೋಗದಿಂದ ಪಾರಾಗಬಹುದು ಎನ್ನುವುದನ್ನು ಕಮಿಷನರ್ ತಿಳಿಸಿಕೊಟ್ಟಿದ್ದಾರೆ.
ಯಾಕಂದ್ರೆ, 45ರ ಹರೆಯದ ಪೊಲೀಸ್ ಕಮಿಷನರ್ ಶಶಿಕುಮಾರ್ ಕೂಡ ಈ ಸಾಕ್ಷ್ಯಚಿತ್ರದಲ್ಲಿ ಪಾತ್ರಧಾರಿ. ಸದಾ ಜೊತೆಗಿರುವ ಅರುಣ್ ಆಳ್ವ ಸೋಂಕಿನಿಂದ ಬಾಧಿಸಿದ್ದರೂ, ಅವರಿಂದ ಇತರರಿಗೆ ಸೋಂಕು ಹರಡಿರಲಿಲ್ಲ. ಅದಕ್ಕೆ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ರೀತಿಯ ನಿಯಮ ಪಾಲನೆಯ ಜೊತೆಗೆ ಲಸಿಕೆ ಹಾಕಿಸಿಕೊಂಡಿದ್ದೂ ಕಾರಣ ಆಗಿರಬಹುದು. ಮಂಗಳೂರಿನ ಮಟ್ಟಿಗೆ ಪೊಲೀಸ್ ಮುಖ್ಯಸ್ಥರಾಗಿದ್ದುಕೊಂಡು ಸಿಬಂದಿಯ ಆರೋಗ್ಯಕ್ಕಾಗಿ ಸಾಕ್ಷ್ಯಚಿತ್ರವನ್ನೇ ತಯಾರಿಸಿ, ಫ್ರಂಟ್ ಲೈನ್ ವಾರಿಯರ್ಸ್ ಗಳಿಗೆ ಅರ್ಪಿಸಿದ್ದಾರೆ.
ಅಂದಹಾಗೆ, ಈ ಡಾಕ್ಯುಮೆಂಟರಿಯನ್ನು ತಯಾರಿಸಿದ್ದು ತುಳು ಚಿತ್ರಗಳಲ್ಲಿ ಹೆಸರು ಗಳಿಸಿರುವ ಸಂಕಲನ ಕಲಾವಿದ ರಾಹುಲ್ ವಸಿಷ್ಠ. ರೂಪೇಶ್ ಶೆಟ್ಟಿ ಅಭಿನಯದ ಹಿಟ್ ಚಿತ್ರ ಗಿರ್ಗಿಟ್, ಗಮ್ಜಾಲ್ ಸೇರಿದಂತೆ ನಾಲ್ಕು ತುಳು ಚಿತ್ರಗಳನ್ನು ಎಡಿಟಿಂಗ್ ಮಾಡಿ ಖ್ಯಾತಿ ಗಳಿಸಿರುವ ರಾಹುಲನ್ನು ಇತ್ತೀಚೆಗೆ ಪೃಥ್ವಿ ಅಂಬರ್, ಕಮಿಷನರ್ ಶಶಿಕುಮಾರ್ ಅವರಿಗೆ ಪರಿಚಯಿಸಿದ್ದರು. ಇಂಥದ್ದೊಂಡು ಕಿರುಚಿತ್ರ ತಯಾರಿಸಬೇಕೆಂಬ ಐಡಿಯಾ ಹೊಳೆದಿದ್ದೇ ತಡ, ರಾಹುಲ್ ವಸಿಷ್ಠರಿಗೆ ಅದರ ಹೊಣೆ ನೀಡಿದ ಕಮಿಷನರ್, ಸಿಂಪಲ್ಲಾಗಿ ಮತ್ತು ಪೊಲೀಸರ ಮನಮುಟ್ಟುವ ರೀತಿ ಚಿತ್ರ ತಯಾರಾಗುವಂತೆ ನೋಡಿಕೊಂಡಿದ್ದಾರೆ. ಓವರ್ ಟು ಡಾಕ್ಯುಮೆಂಟರಿ..
Video:
ಪ್ರತಿದಿನ ತಮ್ಮ ಪ್ರಾಣವನ್ನು ಪಣಕ್ಕಿಡುತ್ತಿರುವ ಎಲ್ಲಾ ಕರೋನಾ ಯೋಧರಿಗೆ ನಮ್ಮ ಗೌರವ. ಸಾಕ್ಷ್ಯಚಿತ್ರದ ಸಂಪಾದಕ ರಾಹುಲ್ ವಸಿಷ್ಠ (ಪಿಎಚ್: 9008775221) ಮತ್ತು ARSI ಅರುಣ್ ಆಳ್ವ ಅವರ ಕೋವಿಡ್ ನ ಅನುಭವವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.https://t.co/hNfugk8H1a pic.twitter.com/sWYWe4ZT65
— Shashi Kumar N cp mangalore (@ShashiK85532199) June 4, 2021
Police commissioner N Shashi Kumar released a documentary titled ‘Covid - Journey of a Cop’, featuring assistant reserve sub-inspector (ARSI) Arun Alva here on Friday, June 4. The documentary is directed by Young Lad Raahul Vasishta and presented by Mangaluru city police.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
27-11-24 11:04 pm
Mangalore Correspondent
Muneer Katipalla, Mangalore, Anupam Agarwal;...
27-11-24 09:36 pm
Dr Chinnappa Gowda, Mangalore: 25 ಕೋಟಿ ವ್ಯಯಿಸ...
27-11-24 08:50 pm
Mangalore MP Captain Brijesh Chowta, Chouhan...
27-11-24 08:39 pm
Mangalore News: ಬ್ರಿಟಿಷರ ಕಾಲದ ಜಿಲ್ಲಾಧಿಕಾರಿ ಕಚ...
27-11-24 08:28 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm