ಬ್ರೇಕಿಂಗ್ ನ್ಯೂಸ್
05-06-21 07:51 pm Mangaluru Correspondent ಕರಾವಳಿ
ಮಂಗಳೂರು, ಜೂನ್ 5: ಜೂನ್ 5ರಂದು ಜಗತ್ತಿನಾದ್ಯಂತ ವಿಶ್ವ ಪರಿಸರ ದಿನವೆಂದು ಆಚರಣೆ ಮಾಡಲಾಗುತ್ತಿದೆ. ಕೆಲವು ಕಡೆ ಪರಿಸರ ಉಳಿಸುವ ನಿಟ್ಟಿನಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯುತ್ತಿದ್ದರೆ, ಮತ್ತೊಂದೆಡೆ ರಾಜಕಾರಣಿಗಳು ಪರಿಸರದ ಬಗ್ಗೆ ಭಾಷಣ ಮಾಡುತ್ತಿದ್ದಾರೆ. ಇವೆಲ್ಲದರ ಮಧ್ಯೆ ಮಂಗಳೂರು ನಗರದ ಬಿಜೈನಲ್ಲಿ ಬೃಹತ್ ಮರಗಳನ್ನು ಪರಿಸರ ದಿನದಂದೇ ಕಡಿದು ನೆಲಕ್ಕುರುಳಿಸಲಾಗಿದೆ.
ಬಿಜೈ ನ್ಯೂರೋಡ್ ಕೊನೆಯ ಭಾಗದಲ್ಲಿ ರಸ್ತೆ ಅಗಲೀಕರಣದ ಕೆಲಸ ನಡೆಯುತ್ತಿದ್ದು, ಬೃಹತ್ ಮಾವಿನ ಮರಗಳನ್ನು ಕಡಿದು ಹಾಕಲಾಗಿದೆ. ಪರಿಸರದ ಬಗ್ಗೆ ಪಾಠ ಮಾಡುವ ಹೊತ್ತಿನಲ್ಲೇ ನೆಲಕ್ಕುರುಳಿ ಬಿದ್ದ ಮರಗಳು ರೋದಿಸಲಾರಂಭಿಸಿವೆ. ಇದೇನಾ ಪರಿಸರ ದಿನಾಚರಣೆ ಎಂದು ಮನುಷ್ಯನ ದುರ್ವರ್ತನೆಯ ಬಗ್ಗೆ ಸದ್ದಿಲ್ಲದೆ ಕಣ್ಣೀರು ಹಾಕುತ್ತಿದೆ.
ಬಿಜೈ ನ್ಯೂರೋಡ್ ನಲ್ಲಿ ರಸ್ತೆ ಬದಿಯ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದು ಹಾಕಲೇ ಬೇಕಂತಿರಲಿಲ್ಲ. ಅದನ್ನು ಉಳಿಸಿಕೊಂಡೇ ರಸ್ತೆ ಅಗಲೀಕರಣ ಮಾಡುವ ಸಾಧ್ಯತೆಗಳೂ ಇದ್ದವು. ಬೆಂಗಳೂರಿನಲ್ಲಿ ರಸ್ತೆ ಬದಿಯ ಮರಗಳನ್ನು ಕಟ್ಟಡಗಳ ಎಡೆಯಲ್ಲೂ ಉಳಿಸಿಕೊಂಡಿರುವ ಉದಾಹರಣೆಗಳು ಬಹಳಷ್ಟಿದೆ. ಮಂಗಳೂರು ನಗರದಲ್ಲಿ ಹಿಂದಿನ ಕಾಲದಲ್ಲಿ ರಸ್ತೆ ಬದಿ ಉದ್ದಕ್ಕೆ ನೆಟ್ಟು ಬೆಳೆಸಿದ್ದ ಮರಗಳು ಈಗ ಕಾಂಕ್ರೀಟ್ ರಸ್ತೆಯ ಹಾವಳಿಯಿಂದಾಗಿ ಸರದಿಯಂತೆ ಮನುಷ್ಯನ ರಕ್ತದಾಹಕ್ಕೆ ಬಲಿಯಾಗುತ್ತಲೇ ಇದೆ.
ಬಂಟ್ಸ್ ಹಾಸ್ಟೆಲಿನಲ್ಲಿ ಎರಡು ವರ್ಷಗಳ ಹಿಂದೆ ಬೃಹತ್ ಅಶ್ವತ್ಥ ಮರವನ್ನು ಕಡಿದು ಹಾಕುವ ಹುನ್ನಾರ ನಡೆದಾಗ, ಬಜರಂಗದಳದವರು ಆಕ್ಷೇಪಿಸಿದರೆಂದು ಅದನ್ನು ಬುಡದಿಂದಲೇ ಕಿತ್ತು ಸಿ.ವಿ.ನಾಯಕ್ ಹಾಲ್ ಮುಂಭಾಗದಲ್ಲಿ ನೆಡುವ ನಾಟಕ ನಡೆದಿತ್ತು. ಬೃಹತ್ ಮರಗಳನ್ನು ನೆಟ್ಟ ಮಾತ್ರಕ್ಕೆ ಬದುಕುವುದಿಲ್ಲ. ಒಂದು ವರ್ಷ ಕಾಲ ಹಸಿರು ಚಿಗುರಿ ನಿಂತಿದ್ದ ಮರ ನಂತರದ ವರ್ಷದಲ್ಲಿ ಪೋಷಣೆಯಿಲ್ಲದೆ ಸೊರಗಿತ್ತು. ಈ ಬಾರಿ ಸತ್ತೇ ಹೋಗಿದೆ. ಆದರೆ, ಬಂಟ್ಸ್ ಹಾಸ್ಟೆಲಿನಲ್ಲಿ ಎಸಿ ಗಾಳಿಯನ್ನು ಕೊಡುತ್ತಿದ್ದ ಅಶ್ವತ್ಥ ಮರದ ಆಸರೆ ಅನುಭವಿಸಿದವರು ಅದನ್ನು ಮರೆಯಲು ಸಾಧ್ಯವೇ ?
ಮರಗಳಿದ್ದರೆ ಮಾತ್ರ ಮನುಷ್ಯ ಎಂಬ ಅರಿವು ಬರದೆ ಕಾಂಕ್ರೀಟ್ ಕಾಡು ಕಟ್ಟುತ್ತ ಹೋದ ಮಾತ್ರಕ್ಕೆ ಪರಿಸರ ದಿನಕ್ಕೆ ಅರ್ಥ ಬರುವುದೇ ಮಹಾನಗರ ಪಾಲಿಕೆಯವರೇ ? ಪರಿಸರ ದಿನದಂದೇ ಮರಗಳ ಬುಡಕ್ಕೆ ಕೊಡಲಿಯಿಕ್ಕಿದವರು ಗಿಡಗಳನ್ನು ನೆಟ್ಟು ಬೆಳೆಸಿಯಾರೇ ?
A huge mango tree gets an axe on the pretext of road widening on Bejai New Road in Mangalore. Ironically, this happened on a day when politicians and bureaucrats were seen shouting their lungs out from pulpit about tree protection on Environment day 2021
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
15-05-25 01:34 pm
Udupi Correspondent
Manjunath Bhandary, Kukke Temple, Mangalore:...
14-05-25 08:05 pm
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
15-05-25 12:14 pm
HK Staff
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm