ಬ್ರೇಕಿಂಗ್ ನ್ಯೂಸ್
06-06-21 10:30 pm Mangaluru Correspondent ಕರಾವಳಿ
ಮಂಗಳೂರು, ಜೂನ್ 7: ಈಗಿನ ಕಾಲದಲ್ಲಿ ಯಾರೇ ಆಗಲಿ, ಕರೆಂಟ್ ಇಲ್ಲದೆ ಬದುಕಲು ಸಾಧ್ಯನಾ..? ವಿದ್ಯುತ್ ಇಲ್ಲದ ಮನೆಯನ್ನು ನಗರ ಭಾಗದಲ್ಲಿ ಊಹಿಸಲು ಸಾಧ್ಯವೇ ? ವಿದ್ಯುತ್ ಇಲ್ಲದ ಬದುಕೇ ಅಸಾಧ್ಯ ಎನ್ನುವಂಥ ಸ್ಥಿತಿ ಇರೋದ್ರಿಂದ ಕರೆಂಟಿಗೂ, ಮನುಷ್ಯನಿಗೂ ಅವಿನಾಭಾವ ಸಂಬಂಧ. ಆದರೆ, ಇಲ್ಲೊಂದು ವೃದ್ಧ ದಂಪತಿ ಕಳೆದ ಮೂರು ವರ್ಷಗಳಿಂದ ಕರೆಂಟ್ ಇಲ್ಲದೇ ಅತ್ಯಾಧುನಿಕ ಫ್ಲಾಟ್ ಒಂದರಲ್ಲಿ ನರಕ ಅನುಭವಿಸುತ್ತಿದ್ದಾರೆ. ಇದಕ್ಕೇನು ಕಾರಣ ಅಂದ್ರೆ, ಯಾರು ಕೂಡ ನಂಬಲಿಕ್ಕಿಲ್ಲ. ಈ ರೀತಿ ವೃದ್ಧ ದಂಪತಿಯನ್ನು ನರಕಕ್ಕೆ ತಳ್ಳಿದ್ದು ಅಲ್ಲಿನ ಫ್ಲಾಟ್ ಓನರ್ಸ್ ಅಸೋಸಿಯೇಶನ್ ಅಂತೆ. ಪೊಲೀಸರು, ಕೋರ್ಟ್ ವ್ಯವಸ್ಥೆಯ ಮಧ್ಯೆಯೂ ನಮ್ಮ ಸಮಾಜ ವೃದ್ಧರನ್ನು ನರಕಕ್ಕೆ ನೂಕಿ ಬದುಕುವ ಹಕ್ಕನ್ನೇ ಕಸಿದುಬಿಟ್ಟಿದೆ.
ಮಂಗಳೂರು ನಗರದ ಹೃದಯಭಾಗ ಪಿವಿಎಸ್ ವೃತ್ತದ ಬಳಿಯಿರುವ ಬೃಹತ್ತಾಗಿರುವ ಮೌರಿಷ್ಕಾ ಪಾರ್ಕ್ ಅಪಾರ್ಟ್ಮೆಂಟಿನಲ್ಲಿ ವೃದ್ಧ ದಂಪತಿ ಈ ರೀತಿಯ ದೌರ್ಜನ್ಯ ಅನುಭವಿಸುತ್ತಿದ್ದಾರೆ. ಹೀಗೆ ಕಿರುಕುಳ ಅನುಭವಿಸುತ್ತಿರುವ ವೀಣಾ ಪ್ರಭು ಮತ್ತು ಶಾಂತರಾಂ ಪ್ರಭು ಎಂಬ ದಂಪತಿ, ಅಮಾಯಕರೇನೂ ಅಲ್ಲ. ಫ್ಲಾಟ್ ಓನರ್ಸ್ ಮಾಡುತ್ತಿರುವ ಅಕ್ರಮಕ್ಕೆದುರಾಗಿ ಕೋರ್ಟ್ ಕಟ್ಟೆ ಹತ್ತಿ ಸವಾಲನ್ನೇ ಹಾಕಿದ್ದಾರೆ. ಸದ್ಯಕ್ಕೆ ಇವರ ಕೋರ್ಟ್ ವ್ಯಾಜ್ಯ ಹೈಕೋರ್ಟಿನಲ್ಲಿದೆ.
ಮುಂಬೈನಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದ ಈ ದಂಪತಿ, 2010ರಲ್ಲಿ ಫ್ಲಾಟ್ ನಿರ್ಮಾಣ ಹಂತದಲ್ಲಿರುವಾಗಲೇ ಒಂದು ಮನೆಯನ್ನು ಬುಕ್ ಮಾಡಿದ್ದರು. 2014ರಲ್ಲಿ ಮನೆಯನ್ನು ಪಡೆದು ವಾಸ್ತವ್ಯವನ್ನೂ ಆರಂಭಿಸಿದ್ದರು. ಆದರೆ, ಫ್ಲಾಟ್ ಬಗ್ಗೆ ಆಫರ್ ವೇಳೆ ನೀಡಿದ್ದ ಭರವಸೆಗಳು ಈಡೇರಿರಲಿಲ್ಲ. ಸ್ವಿಮ್ಮಿಂಗ್ ಪೂಲ್, ಇನ್ನಿತರ ಸೌಲಭ್ಯಗಳೂ ಇರಲಿಲ್ಲ. ಕ್ರೆಡೈ ನಿಯಮದ ಪ್ರಕಾರ, ಯಾವ ಆಫರ್ ನೀಡಲಾಗುತ್ತದೆ ಅದನ್ನು ವಾಸ್ತವ್ಯ ಸಂದರ್ಭದಲ್ಲಿ ಈಡೇರಿಸದಿದ್ದರೆ, ಮನೆ ಖರೀದಿಸುವ ವ್ಯಕ್ತಿಗೆ ಫ್ಲಾಟ್ ದರವನ್ನು ಹಿಂತಿರುಗಿಸಬೇಕೆಂಬ ನಿಯಮ ಇದೆ. ಇದೆಲ್ಲ ಇದ್ದರೂ, ಫ್ಲಾಟ್ ಮಾಲೀಕ ರಮೇಶ್ ಕುಮಾರ್ ತಮ್ಮ ಮಾತು ಈಡೇರಿಸದ ನಡುವೆಯೂ ಸೇಲ್ ಡೀಡ್ ಮಾಡಿಕೊಟ್ಟಿದ್ದರು.
ಅಸೋಸಿಯೇಶನ್ ಮಾಡಿದ್ದೇ ಅಕ್ರಮ !
ಅಲ್ಲದೆ, ಎರಡು ವರ್ಷಗಳ ಬಳಿಕ ಫ್ಲಾಟ್ ಓನರ್ ಅಸೋಸಿಯೇಶನನ್ನು ತಮಗೆ ಬೇಕಾದಂತೆ ಮಾಡಿಕೊಂಡು ದಯಾನಂದ ರೈ ಎಂಬವರನ್ನು ಅಧ್ಯಕ್ಷರನ್ನಾಗಿಸಿ, ಫ್ಲಾಟ್ ಜವಾಬ್ದಾರಿಯನ್ನು ಅವರಿಗೆ ವಹಿಸಿದ್ದರು. ಮೌರಿಷ್ಕಾ ಕಾಂಪ್ಲೆಕ್ಸಿನ ತ್ರಿವಳಿ ಫ್ಲಾಟ್ ನಲ್ಲಿ 360 ಮನೆಗಳಿದ್ದು, ತಿಂಗಳಿಗೆ ಪ್ರತಿ ಮನೆಯಿಂದ 2 ಸಾವಿರದಿಂದ 3500 ರೂ. ವರೆಗೆ ಪಡೆಯತೊಡಗಿದ್ದರು. ಇದಲ್ಲದೆ, ಆರಂಭದಲ್ಲಿ ಅಸೋಸಿಯೇಶನ್ ಡಿಪಾಸಿಟ್ ಎಂದು ಪ್ರತಿ ಮನೆಯಿಂದ ಒಂದು ಲಕ್ಷ ರೂ. ಹಣವನ್ನೂ ಪಡೆದಿದ್ದರು. ಅಲ್ಲಿಗೇ 3.60 ಕೋಟಿ ಸಂಗ್ರಹಿಸಿದ್ದ ರಮೇಶ್ ಕುಮಾರ್, ಆಬಳಿಕ ಫ್ಲಾಟ್ ಓನರ್ ಅಸೋಸಿಯೇಶನನ್ನು ರಿಜಿಸ್ಟರ್ ಮಾಡಿಸದೇ ವಂಚಿಸಿದ್ದಾರೆ ಎನ್ನಲಾಗುತ್ತಿದೆ. ರಿಜಿಸ್ಟರ್ ಆಗುತ್ತಿದ್ದರೆ, ಡಿಪಾಸಿಟ್ ಹಣ ಅಸೋಸಿಯೇಶನ್ ಬಳಿ ಇರಬೇಕಿತ್ತು.
ಆದರೆ, ಈ ವಂಚನೆಯ ಬಗ್ಗೆ ವೀಣಾ ಪ್ರಭು ದಂಪತಿ ಬಿಲ್ಡರ್ ರಮೇಶ್ ಕುಮಾರ್ ಅವರನ್ನೇ ಪ್ರಶ್ನೆ ಮಾಡಿದ್ದರು. ಅಸೋಸಿಯೇಶನನ್ನು ಸೊಸೈಟಿ ಆಕ್ಟ್ ಅಡಿ ರಿಜಿಸ್ಟರ್ ಮಾಡಿಸದೆ, ದಯಾನಂದ ರೈಯನ್ನು ಕಾನೂನು ಉಲ್ಲಂಘಿಸಿ ಅಧ್ಯಕ್ಷರನ್ನಾಗಿ ಮಾಡಿಸಿದ್ದೀರಿ ಎಂದು ಸಹಕಾರಿ ಇಲಾಖೆ ನಿಬಂಧಕರಿಗೆ ದೂರನ್ನೂ ಸಲ್ಲಿಸಿದ್ದರು. ಇದೇ ವಿಚಾರದಲ್ಲಿ ವಾಗ್ವಾದ ನಡೆದು, ವೀಣಾ ಪ್ರಭು ದಂಪತಿ ತಿಂಗಳ ಮೇಂಟೆನೆನ್ಸ್ ಮೊತ್ತವನ್ನು 2018ರಿಂದ ಅಸೋಸಿಯೇಶನ್ ಕೈಗೆ ನೀಡದೆ ನೀವು ಅಧಿಕೃತ ವ್ಯಕ್ತಿ ಎಂಬುದನ್ನು ಸಾಬೀತುಪಡಿಸಿ ಮತ್ತು ಅಸೋಸಿಯೇಶನ್ ರಿಜಿಸ್ಟರ್ ಆಗಿರುವ ಪ್ರತಿಯನ್ನು ತೋರಿಸಿ ಎಂದು ಸವಾಲು ಹಾಕಿದ್ದಾರೆ.
ಮೆಂಟೇನೆನ್ಸ್ ಕೊಡದ್ದಕ್ಕೇ ಕರೆಂಟ್ ಕಟ್ !
ಎರಡು ತಿಂಗಳ ಕಾಲ ತಿಂಗಳ ಮೆಂಟೇನೆನ್ಸ್ ಕೊಡಲಿಲ್ಲವೆಂದು ಅಸೋಸಿಯೇಶನ್ ಅಧ್ಯಕ್ಷನೆಂದು ಹೇಳಿಕೊಂಡ ವ್ಯಕ್ತಿ ದಂಪತಿ ವಾಸವಿದ್ದ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಆಮೂಲಕ ದಂಪತಿ ಮನೆಯಲ್ಲಿ ವಾಸ ಇರದಂತೆ, ಕಿರುಕುಳ ನೀಡಿದ್ದಾರೆ. ಸುರಕ್ಷಿತವಾಗಿ ಬದುಕುವ ಹಕ್ಕು ಮನುಷ್ಯನ ಮೂಲಭೂತ ಹಕ್ಕು. ಅದೇ ಹಕ್ಕನ್ನು ಅಸೋಸಿಯೇಶನ್ ಹೆಸರಲ್ಲಿ ದಂಪತಿಯಿಂದ ಕಿತ್ತುಕೊಂಡು ಮಾನಸಿಕ ಕಿರುಕುಳ ನೀಡಲಾಗಿದೆ.
ಕರೆಂಟ್ ತೆಗೆದು ತಮ್ಮ ಮೂಲಭೂತ ಹಕ್ಕನ್ನು ಕಸಿದುಕೊಂಡಿರುವ ಬಗ್ಗೆ ವೀಣಾ ಪ್ರಭು ದಂಪತಿ 2018ರಲ್ಲೇ ಕದ್ರಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ತನಿಖೆಗೆ ಬಂದಿದ್ದ ಆಗಿನ ಇನ್ ಸ್ಪೆಕ್ಟರ್ ಮಾರುತಿ ನಾಯ್ಕ್ ದಂಪತಿಯ ಮನೆಗೆ ವಿದ್ಯುತ್ ಕೊಡಿಸುವುದನ್ನು ಬಿಟ್ಟು ಇದು ಸಿವಿಲ್ ಮ್ಯಾಟರ್ ಎಂದು ಹೇಳಿ ಬಿಲ್ಡರ್ ರಮೇಶ್ ಕುಮಾರ್ ಪರ ನಿಂತಿದ್ದಾರೆ. ದಯಾನಂದ ರೈ ತಾನು ವಕೀಲನೆಂದು ಹೇಳಿ ಪೊಲೀಸರನ್ನೇ ಬೆದರಿಸುವ ಕೆಲಸ ಮಾಡಿದ್ದಾರಂತೆ. ಈ ಬಗ್ಗೆ ಆಗ ಮಂಗಳೂರು ಕಮಿಷನರ್ ಆಗಿದ್ದ ಟಿ.ಎಸ್. ಸುರೇಶ್ ಅವರಲ್ಲಿಯೂ ತೆರಳಿ ದಂಪತಿ ಗೋಗರೆದಿದ್ದರು. ಆದರೆ, ಬಿಲ್ಡರ್ ರಮೇಶ್ ಕುಮಾರ್ ಹೆಸರು ಕೇಳಿ ದಂಪತಿಯನ್ನು ಸಾಗಹಾಕಿದ್ದರಂತೆ.
ಆನಂತರ ಇದೇ ವ್ಯಾಜ್ಯ ಕೋರ್ಟ್ ಕಟಕಟೆ ಹತ್ತಿದ್ದು, ಮಂಗಳೂರಿನ ಜಿಲ್ಲಾ ಕೋರ್ಟ್ ಎರಡೆರಡು ಬಾರಿ ದಂಪತಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಆದೇಶ ಮಾಡಿದ್ದಾರೆ. ಆದರೆ, ದಯಾನಂದ ರೈ ಮೇಲ್ಮನವಿ ಹೋಗಿ ಆದೇಶಕ್ಕೆ ತಡೆ ತಂದಿದ್ದಾರೆ. ಮೂರು ವರ್ಷಗಳ ಹೋರಾಟ ಈಗ ಹೈಕೋರ್ಟ್ ತಲುಪಿದ್ದು, ನ್ಯಾಯ ಗೆಲ್ಲುತ್ತಾ , ಅನ್ಯಾಯ ಗೆಲ್ಲುತ್ತಾ ನೋಡೋಣ ಎಂದು ವೃದ್ಧ ದಂಪತಿ ತೊಡೆ ತಟ್ಟಿದ್ದಾರೆ. ಇದೇನೇ ವ್ಯಾಜ್ಯ ಇರಲಿ, ಒಬ್ಬ ಮನುಷ್ಯನ ವಾಸದ ಹಕ್ಕನ್ನು ಕಸಿಯುವುದು, ಆತನ ಮೂಲಸೌಕರ್ಯವನ್ನು ಕಸಿದು ಪೀಡಿಸುವುದು ಮೂಲಭೂತ ಹಕ್ಕಿನ ಉಲ್ಲಂಘನೆ. ಅದನ್ನು ಕೊಡಿಸುವುದು ಪೊಲೀಸರ ಜವಾಬ್ದಾರಿ. ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಕದ್ರಿ ಠಾಣೆಯ ಇನ್ ಸ್ಪೆಕ್ಟರ್ ಸವಿತ್ರತೇಜ, ವಿಷಯ ಕೋರ್ಟಲ್ಲಿದೆ ಎಂದು ಈ ವಿಚಾರದಲ್ಲಿ ನುಣುಚಿಕೊಳ್ಳುವ ಕೆಲಸ ಮಾಡಬೇಡಿ. ಯಾವುದೇ ಮನೆಯ ವಿದ್ಯುತ್ ಸಂಪರ್ಕವನ್ನು ಆಕ್ಷೇಪ ಇದ್ದಲ್ಲಿ ಮೆಸ್ಕಾಂ ನವರು ಮಾತ್ರ ಕಟ್ ಮಾಡಬಹುದು. ಅದು ಬಿಟ್ಟು ಫ್ಲಾಟ್ ಅಸೋಸಿಯೇಶನ್ ವಿವಾದದ ನೆಪದಲ್ಲಿ ದಂಪತಿಯ ವಾಸದ ಹಕ್ಕನ್ನು ಕಸಿಯುವುದು ಅಪರಾಧ.
ವೃದ್ಧ ದಂಪತಿಯ ಕೂಗು ಕೇಳಿಸದೇ ?
ಇಬ್ಬರು ದಂಪತಿ ಕೂಡ ವಯಸ್ಸಾದವರು. ಗಂಡ ಶಾಂತರಾಂ ಪ್ರಭು ಡಯಾಬಿಟೀಸ್ ರೋಗಿಯಾಗಿದ್ದು, ಕಾಲು ಬಾತುಕೊಂಡು ನಡೆದಾಡುವುದಕ್ಕೇ ಕಷ್ಟ ಪಡುತ್ತಿದ್ದಾರೆ. ಪತ್ನಿ ವೀಣಾ ಪ್ರಭು ಅಸ್ತಮಾ ಪೇಶಂಟ್ ಆಗಿದ್ದು, ಇವರ ಬದುಕೇ ಕಷ್ಟದಲ್ಲಿದೆ. ಹಗಲು ಮನೆಯಲ್ಲಿ ಉಳಕೊಳ್ಳುವ ದಂಪತಿ, ರಾತ್ರಿ ಮಲಗಲು ಮತ್ತೊಂದು ಮನೆಗೆ ತೆರಳುತ್ತಿದ್ದಾರೆ. ಐಷಾರಾಮಿ ಫ್ಲಾಟ್ ಪಡೆದಿದ್ದರೂ, ಇನ್ನೊಂದು ಮನೆಯಲ್ಲಿ ನೆಲದಲ್ಲಿ ಮಲಗುವ ದೈನೇಸಿ ಸ್ಥಿತಿ. ಮಕ್ಕಳಿಲ್ಲದ ಕೊರಗಿನ ಮಧ್ಯೆ ನ್ಯಾಯಕ್ಕಾಗಿ ಕೋರ್ಟ್ ಕದ ತಟ್ಟಿರುವ ವೃದ್ಧ ದಂಪತಿಗೆ ಪೊಲೀಸರು, ಕೋರ್ಟುಗಳು ಉಳ್ಳವರ ಪರ ನಿಂತು ನ್ಯಾಯ ನಿರಾಕರಿಸುತ್ತಿದ್ದಾರೆಯೇ ಎನ್ನುವ ಅನುಮಾನ ಬಂದಿದೆ.
ಕರೆಂಟ್ ಇಲ್ಲದ ಐಷಾರಾಮಿ ಮನೆಯಲ್ಲಿ ಕ್ಯಾಂಡಲ್ ಹೊತ್ತಿಸಿ ಬಿಸ್ಕೆಟ್ ತಿನ್ನುವ ಪರಿಸ್ಥಿತಿ ಈ ದಂಪತಿಯದ್ದು. ಮನೆಯಲ್ಲಿ ಟೀವಿ, ಫ್ರಿಡ್ಜ್ ಎಲ್ಲವೂ ಇದ್ದರೂ, ಏನೂ ಇಲ್ಲದ ದೈನೇಸಿತನ. ಅಸೋಸಿಯೇಶನ್ ಹೆಸರಿನ ಕಿರುಕುಳವನ್ನು ಸಹಿಸಿಕೊಂಡೇ ಸೆಟೆದು ನಿಂತಿರುವ ಇವರು, ನ್ಯಾಯದೇವತೆ ಮರೀಚಿಕೆಯಾಗಿರುವ ಅಳುಕಿನ ಮಧ್ಯೆಯೇ ಕೋರ್ಟ್ ಹೋರಾಟದ ಬಗ್ಗೆ ಆಶಾಭಾವನೆಯಲ್ಲಿದ್ದಾರೆ. ಮಂಗಳೂರಿನ ಪೊಲೀಸರೇ, ಕೋರ್ಟ್ ವ್ಯಾಜ್ಯ ಏನೇ ಇರಲಿ, ವೃದ್ಧ ದಂಪತಿಗೆ ಕರೆಂಟ್ ಕೊಡಿಸುವ ತಾಕತ್ತು ಇಲ್ಲವೇ ಹೇಳಿ.. ಮಂಗಳೂರಿನ ಜನಪ್ರತಿನಿಧಿಗಳೇ, ಮಹಾಜನಗಳೇ ಕಾಂಕ್ರೀಟ್ ಕಾಡಿನ ಮಧ್ಯೆ ಕಣ್ಣೀರು ಹಾಕುವ ವೃದ್ಧರ ಸ್ಥಿತಿಯ ಬಗ್ಗೆ ಮರುಕ ಇಲ್ಲವೇ ಹೇಳಿ..
Video:
Elderly couple Shantaram Prabhu and Veena Prabhu residing in Maurishka Park Near Sharada Vidyalaya, Kodailbail in Mangalore stay in a luxurious flat without electricity as their power was cut off three years before by the flat association President and Advocate Dayananda Rai as the couple questioned the registration of Flat association which was illegal in the eyes of law. The biggest need? Charging our mobiles. The moment the lights go off even for a minute, the first statement we make is, "Shit! My battery is low! How will I recharge?" And imagine living in the crazy summers without air-conditioning or even a fan! Yuppies, there is one family living in such conditions and without electricity for the past 3 years! And no, they are not living in some tiny hamlet in rural India but in a properly well-developed and bustling city!
02-09-25 02:37 pm
HK News Desk
Man sets woman on fire, Bangalore: ತನ್ನನ್ನು ಬ...
01-09-25 10:53 pm
Karnataka Police, Warning to Social Media Use...
01-09-25 06:59 pm
ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡ...
01-09-25 05:03 pm
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
02-09-25 04:44 pm
Mangalore Correspondent
Bribe Puttur, Tahsildar Absconding, Lokayukta...
02-09-25 02:17 pm
ಮಗನಿಗೆ ಇಲ್ಲ ಉದ್ಯೋಗ ; ಮುಂಬೈನಿಂದ ಉಡುಪಿಗೆ ಬಂದು ಆ...
02-09-25 01:05 pm
ಧರ್ಮಸ್ಥಳ ಚಲೋ ಬೆನ್ನಲ್ಲೇ ಸೌಜನ್ಯಾ ಮನೆಗೆ ಭೇಟಿಯಿತ್...
01-09-25 10:01 pm
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸೌ...
01-09-25 05:05 pm
02-09-25 04:31 pm
Mangalore Correspondent
Mangalore Auto Driver, Fake story, Falnir att...
02-09-25 11:22 am
Udupi, Brahmavar Suicide: 16 ವರ್ಷ ಹಿಂದಿನ ಕೊಲೆ...
01-09-25 09:21 pm
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm
Mangalore Crime, Konaje Police, Raid, Liquor:...
01-09-25 01:58 pm