ಬ್ರೇಕಿಂಗ್ ನ್ಯೂಸ್
07-06-21 05:45 pm Mangalore Correspondent ಕರಾವಳಿ
ಮಂಗಳೂರು, ಜೂನ್ 7: ಮಂಗಳೂರಿನ ಪರಿಸರ ಪ್ರೇಮಿ, ನಿತಿನ್ ವಾಸ್ ಆವಿಷ್ಕರಿಸಿರುವ ಪರಿಸರ ಪೂರಕ ಮಾಸ್ಕ್ ಅಮೆರಿಕದಲ್ಲೂ ಸದ್ದು ಮಾಡಿದೆ. ಮಂಗಳೂರಿನ ಯುವಕ ನಿತಿನ್ ವಾಸ್ ಮಾಡುತ್ತಿರುವ ಪೇಪರ್ ಸೀಡ್ ಮಾಸ್ಕ್ ಬಗ್ಗೆ ಅಮೆರಿಕದ ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.
ಕೋವಿಡ್ ಸೋಂಕಿನ ಬಳಿಕ ಜಗತ್ತಿನಾದ್ಯಂತ ಅತಿ ಹೆಚ್ಚು ಬಳಕೆಯಾಗಿರುವ ವಸ್ತುವಂದ್ರೆ ಮಾಸ್ಕ್. ನಾನಾ ರೀತಿಯ ಮಾಸ್ಕ್ ಗಳು ಮಾರುಕಟ್ಟೆಗೆ ಬಂದಿದ್ದು ಬಳಸಿ ಎಸೆಯುವ ಮಾಸ್ಕ್ ಗಳೇ ಅದರಲ್ಲಿ ಹೆಚ್ಚು. ಆದರೆ, ಈ ರೀತಿ ಬಳಸಿ ಎಸೆಯುವ ಮಾಸ್ಕ್ ಗಳೇ ದೊಡ್ಡ ತ್ಯಾಜ್ಯ ರಾಶಿ ಎಂದರಿತ ನಿತಿನ್ ವಾಸ್, ಪೇಪರ್ ಪಲ್ಪ್ ಗಳಿಂದ ಮಾಸ್ಕ್ ತಯಾರಿಸಿ ಅವುಗಳಿಗೆ ಔಷಧೀಯ ಗಿಡಗಳ ಬೀಜವನ್ನು ಅಂಟಿಸಿ ಮಾರುಕಟ್ಟೆಗೆ ತಂದಿದ್ದರು.
ವಾಸ್ ತಯಾರಿಸಿದ್ದ ಮಾಸ್ಕ್ ಗಳು ಬಹುಬೇಗ ಮಾರುಕಟ್ಟೆಯಲ್ಲಿ ಆಕರ್ಷಣೆಗೆ ಪಾತ್ರವಾಗಿದ್ದವು. ಪೇಪರ್ ಪಲ್ಪ್ ಮತ್ತು ಬಟ್ಟೆಯ ಹೊರಾವರಣ ಇರುವ ಮಾಸ್ಕ್ ಗಳು ತ್ಯಾಜ್ಯವಾಗಿ ಮಣ್ಣಿಗೆ ಎಸೆಯಲ್ಪಟ್ಟರೂ, ಅವು ನೀರಿನೊಂದಿಗೆ ಬೆರೆತರೆ ಮಣ್ಣಿನಲ್ಲಿ ಲೀನವಾಗುವ ಜೊತೆಗೆ ಸಸಿ ಹುಟ್ಟಲು ಕಾರಣವಾಗುತ್ತವೆ. ಈವರೆಗೆ ಹತ್ತು ಸಾವಿರ ಈ ರೀತಿಯ ಮಾಸ್ಕ್ ಗಳನ್ನು ನಿತಿನ್ ವಾಸ್ ಅವರ ಪೇಪರ್ ಸೀಡ್ ಕಂಪನಿಯಿಂದ ರೆಡಿ ಮಾಡಲಾಗಿದೆ.
ಹತ್ತು ಲಕ್ಷಕ್ಕೂ ಹೆಚ್ಚು ಮಾಸ್ಕ್ ಗಳಿಗೆ ಬೇಡಿಕೆ ಬಂದಿದೆ. ಆದರೆ, ಕೋವಿಡ್ ಕಾರಣದಿಂದ ರೆಡಿ ಮಾಡಲು ಸಾಧ್ಯವಾಗಲ್ಲ. ಅಲ್ಲದೆ, ಇದನ್ನು ಫ್ಯಾಕ್ಟರಿಯ ರೀತಿ ದೊಡ್ಡ ಮಟ್ಟಿನಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ. ಪ್ರತಿಯೊಂದನ್ನೂ ಕೈಯಲ್ಲೇ ಮಾಡಬೇಕಿದ್ದು, ರೆಡಿಯಾದ ಬಳಿಕ 12 ಗಂಟೆ ಒಣಗಲು ಬಿಡಬೇಕು. ಲಾಕ್ಡೌನ್ ಕಾರಣದಿಂದ 32 ಮಂದಿಯಿದ್ದ ಕೆಲಸಗಾರರು ಈಗ ಏಳಕ್ಕೆ ಬಂದು ನಿಂತಿದ್ದಾರೆ. ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದ್ದರೂ, ಏಳು ಜನ ಮಾತ್ರ ಈಗ ತಯಾರಿಯಲ್ಲಿ ತೊಡಗಿದ್ದಾರೆ ಎಂದು ನಿತಿನ್ ವಾಸ್ ಅಮೆರಿಕದ ಮಾಸ್ಕೋದಿಂದ ಪ್ರಕಟವಾಗುವ ಎಬಿಸಿ ನ್ಯೂಸ್ ಡಾಟ್ ಕಾಮ್ ಗೆ ತಿಳಿಸಿದ್ದಾರೆ.
ಇದಲ್ಲದೆ, ನಿತಿನ್ ವಾಸ್ ಇಕೋ ಫ್ರೆಂಡ್ಲಿ ಮಾಸ್ಕ್ ಬಗ್ಗೆ ಸಿಎನ್ಎನ್ ಸುದ್ದಿ ವಾಹಿನಿಯೂ ಸುದ್ದಿ ಮಾಡಿದ್ಯಂತೆ. ಪರಿಸರ ಪೂರಕ ಮಾಸ್ಕ್ ತಯಾರಿಸುವ ಮೂಲಕ ನಿತಿನ್ ವಾಸ್ ಅಮೆರಿಕದ ಮಾಧ್ಯಮಗಳಲ್ಲಿ ಸುದ್ದಿಯಾಗಿರುವುದು ಹೊಸ ಬೆಳವಣಿಗೆ. ಜಗತ್ತಿನಲ್ಲಿ ಒಂದು ತಿಂಗಳಲ್ಲಿ ಸಾಧಾರಣ 129 ಮಿಲಿಯನ್ ಮಾಸ್ಕ್ ಬಳಕೆಯಾಗುತ್ತಿದ್ದು, ಬಟ್ಟೆ ಇನ್ನಿತರ ವಸ್ತುಗಳಿಂದ ತಯಾರಾಗುವ ಇವು ಹೆಚ್ಚಾಗಿ ತ್ಯಾಜ್ಯದ ರೂಪದಲ್ಲಿ ಮಣ್ಣಿಗೇ ಸೇರುತ್ತದೆ. ಇಂಥ ಸಂದರ್ಭದಲ್ಲಿ ಮಣ್ಣಿನಲ್ಲಿ ಲೀನವಾಗುವ ಜೊತೆಗೆ ಅದರಿಂದ ಸಸಿ ಬೆಳೆಯುವ ರೀತಿ ಮಾಸ್ಕ್ ಆವಿಷ್ಕರಿಸಿದ್ದು ಈಗ ಜಗತ್ತಿನ ಗಮನ ಸೆಳೆದಿದೆ.
Founder of Paper Seed, a social enterprise, Nithin Vas and his organisation has come up with a mask made of cotton rags that contain seeds of Tulsi and tomato. Nitin vas in now featured in International News for his innovative idea.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
11-09-25 06:14 pm
Mangalore Correspondent
Dharmasthala, YouTube, SIT: ಧರ್ಮಸ್ಥಳ ವಿರುದ್ಧ...
11-09-25 02:45 pm
ಬಿಜೆಪಿ ಬಗ್ಗೆ ಪುತ್ತಿಲ ಪರಿವಾರದ ಅಸಮಾಧಾನ ; ಭರವಸೆ...
11-09-25 01:40 pm
Headline Karnataka, Social Campaigning, Manga...
11-09-25 11:34 am
ಧರ್ಮಸ್ಥಳ ಕೇಸ್ ; ವಿಚಾರಣೆ ಮುಗಿಸಿ ಸತ್ಯಕ್ಕೆ ಜಯ ಎನ...
10-09-25 10:50 pm
11-09-25 02:25 pm
HK STAFF
Mangalore Police, Communial Case, Arrest, Cri...
08-09-25 10:34 pm
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm